21.2 C
Bengaluru
Monday, July 8, 2024

ದಕ್ಷಿಣ ಭಾಗದ ನಿವೇಶನದಲ್ಲಿ ಯಾವ ಕಡೆ ಮಹಾದ್ವಾರ ಇಟ್ರೆ ಒಳ್ಳೆದಾಗುತ್ತೆ?

ವಿಭಿನ್ನ ಆಕಾರಗಳು ಮತ್ತು ಗಾತ್ರ ತನ್ನದೇ ಶಕ್ತಿಯನ್ನು ಹೊಂದಿರುತ್ತವೆ. ಅದು ಮನೆ ಆಗಿರಬಹುದು, ಮಂದಿರ ಆಗಿರಬಹುದು. ಈ ಶಕ್ತಿಗಳು ಒಬ್ಬ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ನಿರ್ಣಯಿಸುತ್ತವೆ. ಮನೆ ಒಳಗೆ ಹಾಗೂ ಹೊರಗೆ ಹೇಗಿರಬೇಕು ಎಂಬುದನ್ನು ಸದ್ಗುರು ವಿವರಿಸಿದ್ದರು. ನಿದ್ದೆ ಮಾಡುವಾಗಲೂ ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬಾರದು ಎಂಬುದನ್ನು ಸದ್ಗುರು ಹೇಳಿದ್ದ ಮಾತುಗಳು ಇತ್ತೀಚೆಗೆ ವೈರಲ್ ಅಗಿದ್ದವು.

ಅದೇ ರೀತಿ ವೇದಿಕ್ ವಾಸ್ತು ಕೂಡ ಮನೆಯ ವಾಸ್ತು ಜತೆಗೆ ಮಹಾದ್ವಾರದ ವಾಸ್ತು ಕುರಿತು ಸ್ಪಷ್ಟವಾಗಿ ವಿವರಿಸುತ್ತದೆ. ಸದ್ಗುರು ಹೇಳಿದಂತೆ ಪ್ರತಿಯೊಂದು ಆಕಾರ, ಗಾತ್ರವೂ ತನ್ನದೇ ಆದ ಶಕ್ತಿಗಳನ್ನು ಹೊಂದಿರುತ್ತವೆ. ಅವು ಮಾನವನ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ನಿರ್ಣಯಿಸುತ್ತವೆ. ಹೀಗಾಗಿ ಹಿಂದೂ ಸಂಪ್ರದಾಯದಲ್ಲಿ ಬಹುತೇಕರು ವಾಸ್ತು ನಂಬುತ್ತಾರೆ. ವಾಸ್ತು ಇಲ್ಲದೇ ಮನೆ ಮಂದಿರ ಕಟ್ಟುವುದಿಲ್ಲ.

ಬೆಂಗಳೂರು ನಂತಹ ಮಹಾನಗರಗಳಲ್ಲಿ ಪೂರ್ವ ಹಾಗೂ ಉತ್ತರ ದಿಕ್ಕಿನ ನಿವೇಶನಗಳು ಸಿಗುವುದೇ ಅಪರೂಪ. ಸಿಕ್ಕರೂ ಮಹಾ ದ್ವಾರ ಇಡಲು ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ದಿಕ್ಕಿನಲ್ಲೂ ಮಹಾದ್ವಾರ ಇಡುತ್ತಾರೆ. ವೇದಿಕ್ ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮಹಾದ್ವಾರ ಇಡಬಾರದು ಎಂದು ಎಲ್ಲೂ ಹೇಳಿಲ್ಲ. ಆದರೆ, ಪ್ರತಿ ದಿಕ್ಕಿನಲ್ಲಿ ಮಹಾದ್ವಾರ ಇಡಬೇಕಾದರೆ ಅದಕ್ಕೂ ವಾಸ್ತು ಅನ್ವಯಿಸುತ್ತದೆ. ವಾಸ್ತು ಪ್ರಕಾರ ಮಹಾದ್ವಾರ ಇಟ್ಟರೆ ಆ ಮನೆಯಲ್ಲಿ ಪಾಸಿಟೀವ್ ಎನರ್ಜಿ ಕ್ರಿಯೇಟ್ ಆಗುತ್ತದೆ. ಸಂತಸ ಜೀವನ ಮನೆ ಮಾಡುತ್ತದೆ ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ.

ದಕ್ಷಿಣ ಭಾಗದ ಮನೆಗೆ ಮುಖ್ಯ ದ್ವಾರ ಇಡುವ ಮುನ್ನ:
ದಕ್ಷಿಣಾಭಿಮುಖ ನಿವೇಶನ ಅಥವಾ ಮನೆಗೆ ಮಹಾದ್ವಾರ ಇಡುವಾಗಲೂ ನಿವೇಶನದ ಅಳತೆ ಮಾಡಬೇಕು. ಅದನ್ನು ಎಂಟು ಸಮಭಾಗಗಳನ್ನಾಗಿ ಮಾಡಬೇಕು. ಆಗ್ನೇಯ ದಿಕ್ಕಿನಿಂದ ಪ್ರಾರಂಭಿಸಿ ನೈರುತ್ಯ ದಿಕ್ಕಿನ ಕಡೆಗೆ ಎಂಟು ಸಮಭಾಗವಾಗಿ ವಿಂಗಡಣೆ ಮಾಡಬೇಕು ಎಂಬುದು ಗಮನಾರ್ಹ. ಆ ನಂತರ ಪ್ರತಿ ಸಮಭಾಗಕ್ಕೂ ಒಂದು, ಎರಡು ಮೂರು ಎಂದು ಸಂಖ್ಯೆ ನೀಡಬೇಕು. ದಕ್ಷಿಣಾಭಿಮುಖ ನಿವೇಶನದ ಯಾವ ಸಮಭಾಗದಲ್ಲಿ ಮಹಾದ್ವಾರ ಇಡಲು ಸೂಕ್ತ ಎಂಬುದನ್ನು ನೋಡಿ ಮಹಾದ್ವಾರ ಇಡಬೇಕು. ದಕ್ಷಿಣ ದಿಕ್ಕಿನ ನಿವೇಶನದಲ್ಲಿ ಯಾವ ಭಾಗದಲ್ಲಿ ಮಹಾದ್ವಾರ ಇಡಬಹುದು ಎಂಬುದರ ಬಗ್ಗೆ ಎಂಟು ಸಮ ಭಾಗಗಳ ಬಗ್ಗೆ ವೇದಿಕ್ ವಾಸ್ತು ತಜ್ಞ ನಯನ್ ಕುಮಾರ್ ಇಲ್ಲಿ
ತ್ರಿಡಿ ಚಿತ್ರಪಟಲದಿಂದ ವಿವರಿಸಿದ್ದಾರೆ.

ದಕ್ಷಿಣದ 1 ನೇ ಸಮಭಾಗದಲ್ಲಿ ಮುಖ್ಯ ದ್ವಾರ ಇದ್ದರೆ:
ಹೊಸದಾಗಿ ನಿರ್ಮಿಸಬಹುದಾದ ಮನೆಗೆ ದಕ್ಷಿಣಕ್ಕೆ ಮುಖ್ಯ ಬಾಗಿಲು ಇಡುವಂತಿದ್ದರೆ, ಅದು ಮೊದಲನೇ ಸಮ ಭಾಗದಲ್ಲಿ ಇಡುವುದು ಅಪಾಯಕಾರಿ ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ. ದಕ್ಷಿಣ ದಿಕ್ಕಿನ ಮೊದಲ ಸಮ ಭಾಗದಲ್ಲಿ ಮುಖ್ಯ ದ್ವಾರ ಇಟ್ಟರೆ ಮನೆ ಮಾಲೀಕರ ಗಂಡು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅವರ ಆಲೋಚನೆಗಳು, ಕಾರ್ಯಗಳು ಪೋಷಕರ ನಿರೀಕ್ಷೆಗೂ ಭಿನ್ನವಾಗಿರುತ್ತದೆ. ಅಂದ್ರೆ ತದ್ವಿರುದ್ಧವಾಗಿರುತ್ತವೆ. ಹೆತ್ತವರ ಇಚ್ಛೆಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ.

ದಕ್ಷಿಣ ಭಾಗದ 2 ನೇ ಸಮಭಾಗ:
ದಕ್ಷಿಣ ದಿಕ್ಕಿನ ಎರಡನೇ ಸಮ ಭಾಗದಲ್ಲಿ ಮಹಾ ದ್ವಾರ ಇಟ್ಟರೆ, ಈ ಮನೆ ಮಾಲೀಕರು ಕೆಲಸಗಾರರಿಗೆ ಪ್ರೇರಕ ಶಕ್ತಿಯಾಗುತ್ತಾರೆ. ಇತರರಿಗೆ ಕೆಲಸ ಮಾಡುವ ಪ್ರವೃತ್ತಿ ಹೆಚ್ಚಿಸುತ್ತದೆ. ಎಂಎನ್ ಸಿ ಉದ್ಯಮ ಹೊಂದಿರುವ, ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಉದ್ಯಮಗಳಿಗೆ ಈ ಮಹಾಧ್ವಾರ ತುಂಬಾ ಒಳಿತು ಮಾಡುತ್ತದೆ ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ.

ದಕ್ಷಿಣ ದಿಕ್ಕಿನ 3ನೇ ಸಮಭಾಗ:
ದಕ್ಷಿಣ ದಿಕ್ಕಿನ ಮೂರನೇ ಸಮ ಭಾಗದಲ್ಲಿ ಮಹಾದ್ವಾರ ಇದ್ದರೆ ಭಾರಿ ಒಳ್ಳೆಯದು. ಈ ದ್ವಾರವು ಅಪಾರ ಸಂಪತ್ತನ್ನು ತಂದುಕೊಡುತ್ತದೆ. ಈ ಮನೆಯ ನಿವಾಸಿಗಳು ತಮ್ಮ ಕೆಲಸ ಪಡೆಯಲು ಸಾಕಷ್ಟು ಚುರುಕಾಗಿರುತ್ತಾರೆ. ಉದಾಹರಣೆಗೆ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಕ್ಷಣಾಕ್ಷತೆ ಆಧರಿಸಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಉತ್ತಂಗಕ್ಕೆ ಏಳಲು ಸಾಧ್ಯವಾಗುತ್ತದೆ ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ.

ದಕ್ಷಿಣ ದಿಕ್ಕಿನ 4 ನೇ ಸಮಭಾಗ:
ದಕ್ಷಿಣ ಭಾಗದ ನಾಲ್ಕನೇ ಸಮ ಭಾಗದಲ್ಲಿ ಮುಖ್ಯದ್ವಾರ ಇಟ್ಟರೆ ತುಂಬಾ ಒಳ್ಳೆಯದು ಆಗುತ್ತದೆ. ಅದರಲ್ಲೂ ಉದ್ಯಮಿಗಳಿಗೆ ತುಂಬಾ ಅನುಕೂಲ ವಾಗುತ್ತದೆ. ಈ ಭಾಗದಲ್ಲಿ ಮಹಾದ್ವಾರ ಇಟ್ಟರೆ ಉದ್ಯಮಗಳು ಯಶಸ್ವಿಯಾಗುತ್ತಾರೆ. ಹೆಚ್ಚು ಮಕ್ಕಳು ಜನಿಸುತ್ತಾರೆ. ಅಂದ್ರೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ.

ದಕ್ಷಿಣ ದಿಕ್ಕಿನ 5ನೇ ಸಮಭಾಗ:
ದಕ್ಷಿಣ ದಿಕ್ಕಿನ ಐದನೇ ಸಮ ಭಾಗದಲ್ಲಿ ಮಹಾದ್ವಾರ ಇಡುವುದು ಯಾರಿಗೂ ಸೂಕ್ತವಲ್ಲ. ಈ ಭಾಗದಲ್ಲಿ ಮಹಾ ದ್ವಾರ ಇಟ್ಟರೆ, ಮನೆ ಮಾಲೀಕರು ಸಾಲದಿಂದ ವಿರಳವಾಗಿ ಮುಕ್ತರಾಗುತ್ತಾರೆ. ತಮ್ಮ ಬುದ್ಧಿ ಶಕ್ತಿಯ ಉತ್ತಮ ಬಳಕೆಗೆ ಅಸಮರ್ಥರಾಗಿರುತ್ತಾರೆ. ಇದರಿಂದ ಮನೆಯ ಶಾಂತಿ ಮತ್ತು ನೆಮ್ಮದಿ ವಾತಾವರಣ ಕೆಡುತ್ತದೆ.

ದಕ್ಷಿಣ ದಿಕ್ಕಿನ 6ನೇ ಸಮಭಾಗ:
ದಕ್ಷಿಣ ದಿಕ್ಕಿನ ಹಲವು ಸಮ ಭಾಗದಲ್ಲಿ ಮುಖ್ಯದ್ವಾರ ಇಡುವುದರಿಂದ ಅಪಾಯ ಕಟ್ಟಿಟ್ಟ ಬುಟ್ಟಿ.ವೇದಿಕ್ ವಾಸ್ತು ಶಾಸ್ತ್ರದ ಪ್ರಕಾರ ಈ ಜಾಗದಲ್ಲಿ ಮಹಾ ದ್ವಾರ ಇಟ್ರೆ ದಟ್ಟ ದರಿದ್ರೆ ಒಕ್ಕರಿಸುತ್ತದೆ. ಎಷ್ಟೇ ಆದಾಯ ವಿದ್ಧರೂ ಪ್ರಯೋಜನ ಆಗಲ್ಲ. ಪದೇ ಪದೇ ಸಂಕಷ್ಟಗಳು ಎದುರಾಗುತ್ತಲೇ ಇರುತ್ತವೆ.

ದಕ್ಷಿಣ ದಿಕ್ಕಿನ 7ನೇ ಸಮಭಾಗ:
ದಕ್ಷಿಣ ಭಾಗದ ಏಳನೇ ಸಮ ಭಾಗದಲ್ಲಿ ಮುಖ್ಯದ್ವಾರ ಇಟ್ಟರೆ ವೃತ್ತಿ ಮತ್ತು ಬದುಕಿನಲ್ಲಿ ಭಾರೀ ಏರಿತ ಆಗುತ್ತವೆ. ವೃತ್ತಿ ಮತ್ತು ಸಂಬಂಧ ವ್ಯರ್ಥ ವಾಗುವಂತೆ ನೋಡಿಕೊಳ್ಳುತ್ತದೆ. ಅಲ್ಲದೇ ಜೀವನ ಪರ್ಯಂತ ಅತೃಪ್ತಿಯಿಂದಲೇ ಬಳಲುತ್ತಿರುತ್ತಾರೆ. ಹೀಗಾಗಿ ವೇದಿಕ್ ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ಭಾಗದಲ್ಲಿ ಏಳನೇ ಸಮ ಭಾಗದಲ್ಲಿ ಮನೆ ಇಡುವುದು ಸೂಕ್ತವಲ್ಲ. ಅಚ್ಚರಿ ಏನೆಂದರೆ ದಕ್ಷಿಣ ಭಾಗದಲ್ಲಿ ಏಳನೇ ಸಮ ಭಾಗದಲ್ಲಿ ಯಾರೂ ಮನೆ ಭಾಗಿಲೂ ಇಡುವುದಿಲ್ಲ.

ದಕ್ಷಿಣ ದಿಕ್ಕಿನ 8ನೇ ಸಮಭಾಗ:
ದಕ್ಷಿಣ ದಿಕ್ಕಿನ ಎಂಟನೇ ಸಮಭಾಗದಲ್ಲಿ ಮಹಾದ್ವಾರ ಇಡುವುದು ತುಂಬಾ ಅಪಾಯಕಾರಿ. ಈ ಮನೆಯ ದ್ವಾರ ಅಪಶಕುನದ ಪ್ರವೇಶ ಎಂದೇ ಕರೆಯುತ್ತಾರೆ. ಈ ಮನೆಯಲ್ಲಿ ನೆಲೆಸಿರುವರ ವರ್ತನೆ ಮತ್ತು ಪರಿವರ್ತನೆ ಬದಲಾವಣೆಗೆ ಕಾರಣವಾಗುತ್ತದೆ. ಕ್ರಮೇಣ ಜಗತ್ತಿನಲ್ಲಿ ಉಳಿದ ಭಾಗದಿಂದಲೂ ಕುಟುಂಬವನ್ನು ಕಡಿತಗೊಳಿಸುತ್ತದೆ. ಮನೆಯಲ್ಲಿ ಇರುವುದು, ಇದರಿಂದ ಅತಿಥಿ ಸ್ಥಾನ ಮತ್ತು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಪರಿಹಾರ : ಈಗಾಗಲೇ ದಕ್ಷಿಣ ದಿಕ್ಕಿನಲ್ಲಿ ಗೊತ್ತಿಲ್ಲದೇ ಯಾವುದೇ ಸಮ ಭಾಗದಲ್ಲಿ ಬಾಗಿಲು ಇಟ್ಟು ಸಮಸ್ಯೆ ಅಗಿರಬಹುದು. ಅದನ್ನು ಸರಿ ಪಡಿಸುವ ನಿಟ್ಟಿನಲ್ಲಿ ವೇದಿಕ್ ವಾಸ್ತು ಶಾಸ್ತ್ರ ಪರಿಹಾರ ಸೂಚಿಸುತ್ತದೆ. ಆದ್ರೆ ನೂರಕ್ಕೆನೂರರಷ್ಟು ಫಲಿತಾಂಶ ಸಿಗುತ್ತದೆ ಎಂದು ಭಾವಿಸುವುದು ಮುರ್ಖತನ. ಆದ್ರೆ ಒಂದು ಮನೆಯ ವಾಸ್ತು ಪರಿಶೀಲಿಸುವಾಗ ಎಲ್ಲಾ ದಿಕ್ಕು, ಸಮ ಭಾಗಗಳನ್ನು ಸರಿಯಾಗಿ ವಿಂಗಡಣೆ ಮಾಡಬೇಕು. ಆಗ ಮಾತ್ರವೇ ವಾಸ್ತು ನೂರರಷ್ಟು ಅನ್ವಯ ಆಗುತ್ತದೆ. ತಾತ್ಕಾಲಿಕ ಪರಿಹಾರ ಮಾಡಿದ್ರು ಅದು ಶೇ. 100 ಎಷ್ಟು ಫಲ ಕೊಡಲ್ಲ ಎಂದು ಹೇಳುತ್ತಾರೆ ವೇದಿಕ್ ವಾಸ್ತು ತಜ್ಞ ನಯನ್ ಕುಮಾರ್.

ದಕ್ಷಿಣ ದಿಕ್ಕಿನ ನಿವೇಶನದಲ್ಲಿ ಮನೆ ಬಾಗಿಲು ಇಡುವಂತಿದ್ದರೆ ಉಚಿತ ಸಲಹೆಗಾಗಿ ಸಂಪರ್ಕಿಸಿ ನಯನ್ ಕುಮಾರ್, ವೇದಿಕ್ ವಾಸ್ತು ತಜ್ಞ
ಮೊಬೈಲ್: 6363386332

Related News

spot_img

Revenue Alerts

spot_img

News

spot_img