20.1 C
Bengaluru
Thursday, November 21, 2024

ಉತ್ತರ ದಿಕ್ಕಿನ ಈ ಸಮಭಾಗದಲ್ಲಿ ಮುಖ್ಯ ಬಾಗಿಲು ಇಟ್ರೆ ಲೈಫು ಗೋವಿಂದ!

ಉತ್ತರಾಭಿಮುಖ ನಿವೇಶನಗಳಿಗೆ ಎಲ್ಲಿಲ್ಲದ ಬೇಡಿಕೆ. ಉತ್ತರ ದಿಕ್ಕಿಗೆ ಮಹಾ ದ್ವಾರ ಇಟ್ಟರೆ ತುಂಬಾ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಹುತೇಕರದ್ದು. ಹೀಗಾಗಿ ಉತ್ತರಾಭಿಮುಖ ನಿವೇಶನ, ಪ್ಲಾಟ್, ಮನೆ ಖರೀದಿಗೆ ಜನರು ಮುಗಿ ಬೀಳುತ್ತಾರೆ. ಸ್ವಲ್ಪ ದುಬಾರಿಯಾದರೂ ಖರೀದಿ ಮಾಡುತ್ತಾರೆ. ಆದ್ರೆ, ಉತ್ತರಾಭಿಮುಖ ನಿವೇಶನದ ವಾಸ್ತು ಎಷ್ಟು ಮುಖ್ಯವೋ ಉತ್ತರಾಭಿಮುಖದ ಮಹಾದ್ವಾರದ ವಾಸ್ತು ಕೂಡ ಅಷ್ಟೇ ಮುಖ್ಯವಾಗುತ್ತದೆ!

ಉತ್ತರ ದಿಕ್ಕಿನಲ್ಲಿ ಮಹಾದ್ವಾರ ಇಟ್ಟರೆ ತುಂಬಾ ಒಳ್ಳೆಯದಾಗುತ್ತದೆ ನಿಜ. ಆದ್ರೆ ಮಹಾ ದ್ವಾರಕ್ಕೂ ವಾಸ್ತು ಅನ್ವಯ ಆಗುತ್ತದೆ. ನಿವೇಶನದ ವಾಸ್ತು ಸರಿಯಾಗಿದ್ದು, ಮಹಾದ್ವಾರದ ವಾಸ್ತು ಎಡವಟ್ಟು ಆದ್ರೂ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ. ಹೀಗಾಗಿ ಉತ್ತರ ದಿಕ್ಕಿಗೆ ಮುಖ್ಯ ಭಾಗಿಲು ಇಡುವಾಗ ವಾಸ್ತು ಪಾಲನೆ ಮಾಡಬೇಕು. ನಿವೇಶನದ ನಾಲ್ಕು ದಿಕ್ಕು ಲೆಕ್ಕಾಚಾರ ಮಾಡಿ, ಉತ್ತರ ದಿಕ್ಕಿನ ಮಹಾದ್ವಾರದ ವಾಸ್ತು ಪರಿಶೀಲಿಸಿ ಸೂಕ್ತ ಜಾಗದಲ್ಲಿ ಇಡಬೇಕು ಎಂದು ವೇದಿಕ್ ವಾಸ್ತು ತಜ್ಞ ನಯನ್ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ವೇದಿಕ್ ವಾಸ್ತು ತಜ್ಞ ನಯನ್ ಕುಮಾರ್ ಅವರು ಉತ್ತರ ದಿಕ್ಕಿನಲ್ಲಿ ಮಹಾದ್ವಾರ ಇಡುವುದಾದರೆ ಪಾಲಿಸಬೇಕಾದ ವಾಸ್ತು ನಿಯಮದ ಬಗ್ಗೆ ತ್ರಿಡಿ ಚಿತ್ರದ ಮೂಲಕ ‘ರೆವಿನ್ಯು ಫ್ಯಾಕ್ಟ್’ ಗೆ ವಿವರಿಸಿದ್ದಾರೆ.

ಉತ್ತರ ದಿಕ್ಕಿನ ಲೆಕ್ಕಾಚಾರ:
ಯಾವುದೇ ಒಂದು ನಿವೇಶನದ ಉತ್ತರ ದಿಕ್ಕಿಗೆ ದಾರಿ ಇದ್ದರೆ, ಶೇ. 100 ರಷ್ಟು ಮಂದಿ ಉತ್ತರ ದಿಕ್ಕಿನಲ್ಲೇ ಮಹಾದ್ವಾರ (ಮುಖ್ಯ ಬಾಗಿಲು ) ಇಡುತ್ತಾರೆ. ಇಡುವುದು ತಪ್ಪಲ್ಲ. ತುಂಬಾ ಒಳಿತು. ಆದರೆ, ಉತ್ತರ ದಿಕ್ಕಿನ ನಿವೇಶನ ಮೊದಲು ಅಳತೆ ಮಾಡಬೇಕು. ಉದಾಹರಣೆಗೆ 60 ಅಡಿ ಉದ್ದ ಇದ್ದರೆ, ಅದನ್ನು ಎಂಟು ಸಮಭಾಗ ಮಾಡಬೇಕು. ಅದರ ಪ್ರಕಾರ ಎಂಟು ಸಮಭಾಗವಾಗಿ ವಿಂಗಡಣೆ ಮಾಡಿದಾಗ ಒಂದು ಸಮಭಾಗದ ಅಳತೆ 7.5 ಅಡಿ ಬರುತ್ತದೆ. ಮತ್ತು ಈಶಾನ್ಯ ದಿಕ್ಕಿನಿಂದ ವಾಯುವ್ಯ ಕಡೆಗೆ ಬರುವ ಮೊದಲ ಭಾಗದಿಂದ ಸಮಭಾಗಗಳನ್ನು ವಿಂಗಡಣೆ ಮಾಡಬೇಕು. ತಪ್ಪಿದರೆ ಇಡೀ ವಾಸ್ತು ಲೆಕ್ಕಾಚಾರವೇ ತಲೆಕೆಳಗಾಗುತ್ತದೆ.

1ನೇ ಸಮಭಾಗದಲ್ಲಿ ಮಹಾದ್ವಾರ ಇಡೋದು ಒಳಿತಲ್ಲ:
ಉತ್ತರ ದಿಕ್ಕಿನ ಮೊದಲನೇ ಸಮಭಾಗದಲ್ಲಿ ಮಹಾದ್ವಾರ ಇಡುವುದು ಒಳಿತು ಅಲ್ಲ. ಇಲ್ಲಿ ಮುಖ್ಯದ್ವಾರ ಇಟ್ಟರೆ, ಇತರರ ದುರುದ್ದೇಶಗಳಿಂದ ಹಾನಿಗೆ ಒಳಗಾಗುತ್ತಾರೆ. ಹೀಗಾಗಿ ನಿರಂತರವಾಗಿ ಮನೆಯವರು ಮೋಸ ಹೋಗುತ್ತಿರುತ್ತಾರೆ ಎಂದು ಹೇಳುತ್ತದೆ ವೈದಿಕ ವಾಸ್ತುಶಾಸ್ತ್ರ.

2ನೇ ಸಮಭಾಗದಲ್ಲಿ ಇಟ್ಟರೂ ಡೇಂಜರ್ !
ಉತ್ತರ ದಿಕ್ಕಿನ ಎರಡನೇ ಸಮಭಾಗದಲ್ಲಿ ಮಹಾದ್ವಾರ ಇಟ್ಟರೆ, ಮನೆಯವರಿಗೆ ಶತೃಭಯ ಎದುರಾಗುತ್ತದೆ. ಮಾತ್ರವಲ್ಲದೇ ಇತರರು ನಮ್ಮ ಬಗ್ಗೆ ಅಸೂಯೆ ಹೊಂದಿದ್ದರು ಎಂದು ಭಾವಿಸುತ್ತಾರೆ. ಕೆಟ್ಟ ಅಲೋಚನೆಗಳಿಂದ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುತ್ತಾರೆ. ಹೀಗಾಗಿ ಉತ್ತರ ದಿಕ್ಕಿನಲ್ಲಿ ಎರಡನೇ ಸಮಭಾಗದಲ್ಲಿ ಮಹಾದ್ವಾರ ಇಡುವುದು ಸೂಕ್ತವಲ್ಲ ಎಂದು ವೈದಿಕ ವಾಸ್ತು ಶಾಸ್ತ್ರ ಹೇಳುತ್ತದೆ.

ಉತ್ತರ ದಿಕ್ಕಿನ 3ನೇ ಸಮಭಾಗದಲ್ಲಿ ಈ ಲಾಭಗಳಿವೆ:
ಉತ್ತರ ದಿಕ್ಕಿನಲ್ಲಿ ಮೂರನೇ ಸಮಭಾಗದಲ್ಲಿ ಮಹದ್ವಾರ ಇಟ್ಟರೆ ಅದೃಷ್ಟ ಖುಲಾಯಿಸುತ್ತದೆ. ನಿರೀಕ್ಷೆಗೂ ಮೀರಿದ ಹಣ ಹರಿದು ಬರುತ್ತದೆ. ಹೆಚ್ಚಿನ ಪುರುಷ ವಂಶಾವಳಿ ಜಾಸ್ತಿಯಾಗುತ್ತದೆ. ಅಂದರೆ ಈ ಮನೆಯಲ್ಲಿರುವರಿಗೆ ಗಂಡು ಮಕ್ಕಳ ಸಂತಾನ ಜಾಸ್ತಿಯಾಗುತ್ತದೆ. ಸದ್ಗುಣ – ಸಂಪತ್ತು ಹರಿದು ಬರುತ್ತದೆ ಎಂದು ಹೇಳುತ್ತದೆ ವೈದಿಕ ವಾಸ್ತು ಶಾಸ್ತ್ರ. ಉತ್ತರ ದಿಕ್ಕಿನಲ್ಲಿ ಮೂರನೇ ಸಮಭಾಗದಲ್ಲಿ ಮಹಾದ್ವಾರ ಇಡುವುದು ತುಂಬಾ ಒಳ್ಳೆಯದು ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ.

ಉತ್ತರ ದಿಕ್ಕಿನ 4ನೇ ಸಮಭಾಗದಲ್ಲಿ ಪಿತ್ರಾರ್ಜಿತ ಆಸ್ತಿ ಮತ್ತು ಹಣ ಸಂವೃದ್ಧಿ ಖಾತ್ರಿ:
ಮನೆಯ ಉತ್ತರ ದಿಕ್ಕಿನ ನಾಲ್ಕನೇ ಸಮ ಭಾಗದಲ್ಲಿ ಮಹಾದ್ವಾರ ಇಟ್ಟರೆ ಒಳ್ಳೆಯದು. ಅನುವಂಶಿಕವಾಗಿ ಗಳಿಸಿದ ಹಣದ ಸಂವೃದ್ಧಿಯನ್ನು ಖಾತ್ರಿಗೊಳಿಸುತ್ತದೆ. ಮೂಲ ವಂಶಪಾರಂಪರ್ಯವಾಗಿ ಗಳಿಸಿರುವ ಆಸ್ತಿಯ ಬಗ್ಗೆ ಕ್ಲಾರಿಟಿ ಸಿಗುತ್ತದೆ. ಭೂಮಿಗೆ ಸಂಬಂಧಿಸಿದ ವಿವಾದಗಳು ಇತ್ಯರ್ಥವಾಗುತ್ತವೆ. ಈ ಸಮಭಾಗದಲ್ಲಿ ಮಹಾದ್ವಾರ ಇಡುವುರಲ್ಲಿ ತಪ್ಪಿಲ್ಲ. ತುಂಬಾ ಅನುಕೂಲಗಳಾಗುತ್ತವೆ ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ.

ಉತ್ತರ ದಿಕ್ಕಿನ 5 ನೇ ಸಮಭಾಗ: ಶಾಂತಿಪ್ರಿಯರಾಗಿರಲು ಈ ಭಾಗದಲ್ಲಿ ಮಹಾದ್ವಾರವಿಡಿ:
ಉತ್ತರ ದಿಕ್ಕಿನ ಐದನೇ ಸಮಭಾಗದಲ್ಲಿ ಮಹಾದ್ವಾರ ಇಟ್ಟರೆ ತುಂಬಾ ಒಳ್ಳೆಯದು. ಈ ಮನೆಯಲ್ಲಿ ವಾಸ ಮಾಡುವರು ಧಾರ್ಮಿಕ ಹಾಗೂ ಶಾಂತಿಪ್ರಿಯರಾಗಿರುತ್ತಾರೆ. ವಿನಯವಂತರಾಗಿರುತ್ತಾರೆ. ಯಾವುದೇ ಅಡಚಣೆಗಳು ಉದ್ಭವಿಸುವುದಿಲ್ಲ. ಬಹುತೇಕ ಮಠದ ಸ್ವಾಮೀಜಿಗಳು ಉತ್ತರ ದಿಕ್ಕಿನ ಐದನೇ ಸಮಭಾಗದಲ್ಲಿ ಮಹಾದ್ವಾರ ಇಡಲು ಆಸಕ್ತಿ ತೋರುತ್ತಾರೆ. ಹೀಗಾಗಿ ಉತ್ತರ ಧಿಕ್ಕಿನ ಐದನೇ ಸಮಭಾಗದಲ್ಲಿ ಮಹಾದ್ವಾರ ಇಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಎನ್ನುತ್ತಾರೆ ವೇದಿಕ್ ವಾಸ್ತು ತಜ್ಞ ನಯನ್ ಕುಮಾರ್.

ಉತ್ತರ ದಿಕ್ಕಿನ 6 ನೇ ಸಮಭಾಗ: ಇಲ್ಲಿ ಮಹಾದ್ವಾರ ಇದ್ರೆ ಜನ ನಿಮ್ಮನ್ನು ನಂಬಲ್ಲ!
ಉತ್ತರ ದಿಕ್ಕಿನ ಆರನೇ ಸಮಭಾಗದಲ್ಲಿ ಮಹದ್ವಾರ ಇಡುವುದು ಒಳಿತಲ್ಲ. ವೈದಿಕ ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕಿನ ಆರನೇ ಸಮಭಾಗದಲ್ಲಿ ಮಹಾದ್ವಾರ ಇಟ್ಟರೆ, ಮನೆಯಲ್ಲಿರುವರು ಇತರರು ಇವರನ್ನು ನಿರಾಕರಿಸುವ ರೀತಿ ವರ್ತಿಸುತ್ತಾರೆ. ಅಂದ್ರೆ ನಮ್ಮನ್ನು ಜನ ನಂಬಲ್ಲ ಎಂಬ ಭಾವನೆಯಲ್ಲಿ ಮುಳುಗುತ್ತಾರೆ. ಮಾತ್ರವಲ್ಲ ಜನರು ಇವರಿಂದ ದೂರ ಇರಲು ಇಚ್ಛಿಸುತ್ತಾರೆ.

ಉತ್ತರದಿಕ್ಕಿನ 7ನೇ ಸಮಭಾಗ: ಮಕ್ಕಳು ಕೈ ತಪ್ಪುವ ಅಪಾಯವಿದೆ ಹುಷಾರ್ !
ಉತ್ತರ ದಿಕ್ಕಿನ ನಿವೇಶನದಲ್ಲಿ ಏಳನೇ ಸಮಭಾಗದಲ್ಲಿ ಮಹಾದ್ವಾರ ಇಟ್ಟರೆ, ಆ ಮನೆಯಲ್ಲಿ ವಾಸಿಸುವ ಬೆಳೆದ ಮಕ್ಕಳು ಕೈ ತಪ್ಪುವ ಸಂದರ್ಭಗಳು ಎದುರಾಗುತ್ತವೆ. ಅಂದ್ರೆ ಕುಟುಂಬದ ಸಂಪ್ರದಾಯ ಮೀರುತ್ತಾರೆ. ನಂಬಿಕೆ ಮತ್ತು ಸಂಸ್ಕೃತಿ ಮೀರಿ ಹೋಗಲು ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ, ಸಾಂಪ್ರದಾಯಿಕ ವಿವಾಹ ತ್ಯಜಿಸಿ ಲಿವ್ ಇನ್ ರಿಲೇಷನ್ ಶಿಫ್ ಮೊರೆ ಹೋಗುವುದು, ಮಾದಕ ವಸ್ತು ಸೇವನೆಗೆ ತುತ್ತಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಬೆಳೆದ ಮಕ್ಕಳ ದೃಷ್ಟಿಯಿಂದ ಈ ಸಮ ಭಾಗದಲ್ಲಿ ಮಹಾದ್ವಾರ ಇಡುವುದು ಒಳಿತಲ್ಲ.

ಉತ್ತರ ದಿಕ್ಕಿನ 8 ನೇ ಸಮಭಾಗ: ಬ್ಯಾಂಕ್ ಬಾಲೆನ್ಸ್ ಚೆಕ್ ಮಾಡಿಕೊಳ್ಳಿ !
ಉತ್ತರ ದಿಕ್ಕಿನ ನಿವೇಶನ ಅಥವಾ ಮನೆಗೆ ಎಂಟನೇ ಸಮ ಭಾಗದಲ್ಲಿ ಮಹಾದ್ವಾರ (ಮುಖ್ಯ ಬಾಗಿಲು ) ಇಟ್ಟರೆ ತುಂಬಾ ಒಳ್ಳೆಯದು. ಮನೆ ಮಾಲೀಕರ ಬ್ಯಾಂಕ್ ಬ್ಯಾಲೆನ್ಸ್ ಸಮತೋಲನ ನೀಡುತ್ತದೆ. ಅಂದ್ರೆ ಹಣ ಕಾಸು ಸದಾ ಹರಿದು ಬರುತ್ತದೆ. ಹಣಕಾಸಿನ ತೊಂದರೆ ಎದುರಾಗುವುದಿಲ್ಲ ಎನ್ನುತ್ತದೇ ವೇದಿಕ್ ವಾಸ್ತು ಶಾಸ್ತ್ರ.

ಉತ್ತರ ದಿಕ್ಕಿನ ಮಹಾದ್ವಾರದ ಮಹತ್ವದ ಸಲಹೆ:
“ಒಟ್ಟಾರೆಯಾಗಿ, ಉತ್ತರ ದಿಕ್ಕಿನಲ್ಲಿ ಎಂಟು ಸಮ ಭಾಗಗಳ ಪೈಕಿ ನಾಲ್ಕು ಸಮ ಭಾಗದಲ್ಲಿ ಮಹಾದ್ವಾರ ಇಡಲು ಸೂಕ್ತ. ಉಳಿದ ನಾಲ್ಕು ಸಮ ಭಾಗಗಳಲ್ಲಿ ಮಹಾದ್ವಾರ ಇಡುವುದು ಸೂಕ್ತವಲ್ಲ. ಆದ್ರೆ, ಒಂದು ನಿವೇಶನದ ಸಮಭಾಗ ವಿಂಗಡಣೆ ಮಾಡುವಾಗ ನಾಲ್ಕು ದಿಕ್ಕು, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಈಶಾನ್ಯ, ವಾಯುವ್ಯ, ನೈರುತ್ಯ, ಆಗ್ನೇಯ ಮೂಲಗಳ ಬಗ್ಗೆ ನಿಖರ ಅಳತೆ ತೆಗೆದುಕೊಂಡು ವಾಸ್ತು ರೂಪಿಸಬೇಕು. ಅದರ ಪ್ರಕಾರ ನಿವೇಶನ ಉತ್ತಮ ವಾಸ್ತು ಹೊಂದಿದ್ದರೆ ಅದರ ಮಹಾದ್ವಾರ ಇಡುವಾಗಲೂ ವಾಸ್ತು ಪಾಲಿಸಬೇಕು. ಈಗಾಗಲೇ ಮಹಾದ್ವಾರ ಇಟ್ಟು ತಪ್ಪಾಗಿದ್ದರೆ, ಅದನ್ನು ಸರಿಪಡಿಸಲು ಪ್ರಯತ್ನಿಸಬಹುದು,” ಎಂದು ವೇದಿಕ್ ವಾಸ್ತು ತಜ್ಞ ನಯನ್ ಕುಮಾರ್ ಅಭಿಪ್ರಾಯಪಡುತ್ತಾರೆ.

ಮಹಾಧ್ವಾರ ವಾಸ್ತು ಕುರಿತ ಪ್ರಶ್ನೆಗಳಿದ್ದರೆ ಸಂಪರ್ಕಿಸಿ: 6363386332

Related News

spot_img

Revenue Alerts

spot_img

News

spot_img