ಬೆಂಗಳೂರು, ಏ. 13 : ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಸಾಕು ಪ್ರಾಣಿಗಳು ಇರುತ್ತವೆ. ಎಲ್ಲರಿಗೂ ನಾಯಿ, ಬೆಕ್ಕು, ಗಿಳಿ, ಮೀನು ಹೀಗೆ ಒಂದಷ್ಟು ಸಾಕು ಪ್ರಾಣಿಗಳನ್ನು ಸಾಕುತ್ತಾರೆ. ಹಳ್ಳಿಗಳಲ್ಲೆಲ್ಲಾ ಬೀದಿ ನಾಯಿ, ಬೆಕ್ಕು ಗಳಿಗೆ ಊಟ ಹಾಕುತ್ತಿದ್ದರು. ಆದರೆ, ಈಗ ಹಾಗಿಲ್ಲ. ನಗರಗಳಲ್ಲಿ ಬಹಳ ಹಣ ಖರ್ಚು ಮಾಡಿ ನಾಯಿ, ಪಕ್ಷಿಗಳನ್ನು ತಂದು ಮನೆಯಲ್ಲಿ ಸಾಕುತ್ತಾರೆ. ಹಲವರಿಗೆ ಪ್ರಾಣಿಗಳನ್ನು ಸಾಕುವ ಕ್ರೇಜ್ ಇದೆ. ಹಾಗಾದರೆ, ಸಾಕು ಪ್ರಾಣಿಗಳನ್ನು ಯಾವ ದಿಕ್ಕಿನಲ್ಲಿ ಬಿಟ್ಟರೆ ಒಳ್ಳೆಯದು ಎಂದು ನೋಡೋಣ.
ಮೊದಲಿನಿಂದಲೂ ಪ್ರಾಣಿಗಳನ್ನು ಸಾಕಲಾಗುತ್ತದೆ. ಕೋಳಿ, ಕುರಿ, ಹಸು, ಎಮ್ಮೆ, ಮೇಕೆಗಳನ್ನು ಸಾಕಿ ಅದರಿಂದ ಫಲವನ್ನು ಪಡೆಯುತ್ತಾರೆ. ಇವುಗಳನ್ನೆಲ್ಲಾ ಸಾಮಾನ್ಯವಾಗಿ ವಾಯುವ್ಯ ದಿಕ್ಕಿನಲ್ಲಿ ಇಟ್ಟು ಸಾಕಲಾಗುತ್ತದೆ. ಇದರ ಜೊತೆಗೆ ಈಗ ರಕ್ಷಣೆಯ ಸಲುವಾಗಿ ನಾಯಿಗಳನ್ನು ಸಾಕಲಾಗುತ್ತದೆ. ನಗರಗಳಲ್ಲಿ ಹೆಚ್ಚು ಅಪರಿಚಿತರು ಮನೆಗೆ ಬಾರದಿರಲಿ ಎಂದು ನಾಯಿಗಳನ್ನು ಸಾಕುತ್ತಾರೆ. ನಾಯಿ ನಿಯತ್ತಿನ ಪ್ರಾಣಿ ಎಂದು ಹಾಗೂ ತಮ್ಮ ಜೊತೆಗೆ ಇರಲಿ ಎಂದು ಪ್ರೀತಿಯಿಂದ ಸಾಕುತ್ತಾರೆ.
ನಾಯಿಗಳು ಹೆಚ್ಚಾಗಿ ಯಜಮಾನನ ಜೊತೆಗೆ ಫ್ರೆಂಡ್ ರೀತಿ ಇರುತ್ತದೆ. ಹೀಗೇನಾದರೂ ನಾಯಿಯನ್ನು ಸಾಕುವುದಾದರೆ, ವಾಯುವ್ಯದಲ್ಲಿ ನಅಯಿ ಗೂಡನ್ನು ಕಟ್ಟಬೇಕು. ಇದು ಬಿಟ್ಟು ಬೇರೆ ದಿಕ್ಕಿನಲ್ಲಿ ಇದ್ದರೆ ಸಮಸ್ಯೆ ಆಗುತ್ತದೆ. ಇನ್ನು ಕೆಲವರು ಗಿಳಿ ಸೇರಿದಂತೆ ಪಕ್ಷಿಗಳನ್ನು ಸಾಕುತ್ತಾರೆ. ಪಂಜರದಲ್ಲಿ ಸಾಕುವಂತಹ ಪ್ರಾಣಿಗಳನ್ನು ವಾಯುವ್ಯದಲ್ಲಿ ಇಟ್ಟರೆ, ಪರವಾಗಿಲ್ಲ. ಇನ್ನು ಅದನ್ನು ನೇತು ಹಾಕುವುದರಿಂದ ಆದಷ್ಟು ಮುಖ್ಯದ್ವಾರ ಅಥವಾ ಕಿಟಕಿ ಬಳಿ ಉತ್ತರ, ಪೂರ್ವದಲ್ಲಿ ಇಟ್ಟುಕೊಳ್ಳಬಹುದು.
ಇನ್ನು ಕೆಲವೊಮ್ಮೆ ಜೇನು ಬಂದು ಗೂಡು ಕಟ್ಟುತ್ತದೆ. ಕಾಗೆ ಹಾಗೂ ಗುಬ್ಬಚ್ಚಿಗಳು ಮನೆಗೆ ಬಂದು ಗೂಡುಗಳನ್ನು ಕಟ್ಟುತ್ತದೆ. ಈ ಗೂಡನ್ನು ಕೆಡಿಸಿದರೆ, ಮನೆಗೆ ಕೆಡುಕು ಅಗುತ್ತದೆ ಎಂಬ ನಂಬಿಕೆ ಇರುತ್ತದೆ. ಹಾಗಾಗಿ ಜೇನು ಗೂಡು ಏನು ಮಾಡುವುದಕ್ಕೆ ಆಗುವುದಿಲ್ಲ. ಪಕ್ಷಿಗಳು ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿದರೆ, ಆ ಮರಿ ಹಾರುವವರೆಗೂ ಇದ್ದು, ನಂತರ ಗೂಡನ್ನು ತೆಗೆಯುವುದು ಸೂಕ್ತ. ಆದಷ್ಟು ವಾಯುವ್ಯ ದಿಕ್ಕಿನಲ್ಲಿ ಸಾಕು ಪ್ರಾಣಿಗಳ ಗೂಡು ಇದ್ದರೆ, ಮನೆಗೆ ಶುಭ.