ಬೆಂಗಳೂರು, ಮಾ. 16 : ವಾಸ್ತುವಿನಲ್ಲಿ ಬಹಳು ಮುಖ್ಯವಾದ ವಿಚಾರ ಎಂದರೆ ಶಲ್ಯ ದೋಷ. ಭೂಮಿಯಲ್ಲಿ ಕೆಲ ವಸ್ತುಗಳು ಮಣ್ಣಿನಲ್ಲಿ ಬೆರೆತು ಬಿಡುತ್ತವೆ. ಆದರೆ, ಕೆಲ ವಸ್ತುಗಳು ಭೂಮಿಯಲ್ಲಿ ಬೆರೆಯದ ಕೆಲ ವಸ್ತುಗಳು ಇವೆ. ಇದನ್ನು ಭೂಮಿ ತಿರಸ್ಕರಿಸುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಒಟ್ಟು 16 ವಸ್ತುಗಳನ್ನು ವಾಸ್ತು ಶಾಸ್ತ್ರದಲ್ಲಿ ಗುರುತಿಸಲಾಗಿದೆ. ಇವೆಲ್ಲವೂ ಅಶುಭ ಫಲವನ್ನು ಕೊಡುತ್ತದೆ ಎಂದು ಕೂಡ ಹೇಳಲಾಗುತ್ತದೆ. ನಿವೇಶನ ನಿರ್ಮಾಣ ಮಾಡುವಾಗ ಭೂಮಿ ತೋಡುತ್ತೇವೆ. ಈ ಸಂದರ್ಭದಲ್ಲಿ ಇಂತಹ ವಸ್ತುಗಳು ಕಂಡು ಬಂದರೆ, ಇದನ್ನು ವಾಸ್ತುವಿನಲ್ಲಿ ಶಲ್ಯ ದೋಷ ಎಂದು ಕರೆಯಲಾಗುತ್ತದೆ.
ಅಂದರೆ, ಭೂಮಿಯ ಕೆಳಗಡೆ ಇವೆಲ್ಲವೂ ಇರುತ್ತವೆ. ನಿವೇಶನ ಖರೀದಿಸುವಾಗ ಇದನ್ನೆಲ್ಲಾ ನೋಡಲು ಸಾಧ್ಯವಾಗುವುದಿಲ್ಲ. ಇನ್ನು ನಿವೇಶನದ 8 ಅಡಿಗಿಂತಲೂ ಕೆಳಗೆ ಇಂತಹ ವಸ್ತುಗಳು ದೊರೆತರೆ, ಶಲ್ಯ ದೋಷವಿಲ್ಲ ಎಂದು ಹೇಳುತ್ತೇವೆ. ಇವುಗಳಿಂದ ತೊಂದರೆ ಆಗಬೇಕು ಎಂದು ಇದ್ದರೆ, 8 ಅಡಿಗಳಿಗಿಂತಲೂ ಮೇಲೆ ಈ ವಸ್ತುಗಳು ದೊರೆಯುತ್ತವೆ. ಆಗ ಇದನ್ನು ಶಲ್ಯ ದೋಷ ಎಂದು ಹೇಳಲಾಗುತ್ತದೆ. ಇದನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾದರೆ, ಆ ಹದಿನಾರು ಶಲ್ಯಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಮೊದಲನೇಯದಾಗಿ ಎಲುಬು, ಅದು ಮನುಷ್ಯ, ಪ್ರಾಣಿ ಯಾರದ್ದೇ ಆದರೂ, ಎಲುಬುಗಳು ಸಿಕ್ಕರೆ ಅಶುಭ ಎಂದು ಹೇಳಲಾಗುತ್ತದೆ. ಎರಡನೇಯದು ಕಪಾಲ ಅಂದರೆ ಸ್ಕಲ್. ಮತ್ತೊಂದು ತಲೆಯ ಕೂದಲು, ಇಟ್ಟಿಗೆ, ವಿಗ್ರಹಳಗು. ಅದು ಕಲ್ಲು ಅಥವಾ ಇತರೆ ವಸ್ತುಗಳಿಂದ ತಯಾರಿಸಿದ ವಿಗ್ರಹಳು, ಬೂದಿ, ಶವ, ಮೂಳೆಗಳು, ಇದ್ದಿಲು, ಸುಟ್ಟಿರುವ ಕಟ್ಟಿಗೆ, ಧಾನ್ಯಗಳು, ನಿಧಿ, ಕಲ್ಲು ಬಂಡೆಗಳು, ಕಪ್ಪೆ, ಪ್ರಾಣಿಗಳ ಕೊಂಬುಗಳು, ನಾಯಿಯ ಎಲುಬು, ಕೆಲವು ಶಕ್ತಿಗಳನ್ನು ಹಿಡಿದು ಬಂಧಿಸಿದಂತಹ ವಸ್ತುಗಳು ಸಿಗುತ್ತವೆ. ಇವೆಲ್ಲವನ್ನೂ ಶಲ್ಯ ಎಂದು ಕರೆಯಲಾಗಿದೆ.
ಇನ್ನು ಇವಗಳಲ್ಲಿ ಶುಭ ಫಲವನ್ನು ಕೊಡುವುದು ಕೊಂಬು, ಕಾಸು, ಕಲ್ಲು, ಧಾನ್ಯಗಳು ಸಿಕ್ಕರೆ ಇದು ಶುಭ ಫಲವನ್ನು ನೀಡುತ್ತವೆ. ಇವುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳು ಸಿಕ್ಕರೆ, ಭೂಮಿಯನ್ನು ಅಗೆದು, ತೆಗೆದು ಅಲ್ಲಿ ಪೂಜೆಗಳನ್ನು ಮಾಡಿಸಿ ಬಳಿಕವೇ ಮನೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ. ಹೀಗಾಗಿ ಮನೆಯನ್ನು ಕಟ್ಟುವಾಗ ಇದೆಲ್ಲವನ್ನೂ ಗಮನಿಸಬೇಕಾಗುತ್ತದೆ.