ಬೆಂಗಳೂರು, ಮಾ. 21 : ವಾಸ್ತುವಿನಲ್ಲಿ 21 ಮಹಾ ದೋಷಗಳು ಎಂದು ಹೇಳಲಾಗಿದೆ. ಇದರಲ್ಲಿ ನೀರು, ಬೆಂಕಿ ಸೇರಿದಮತೆ ಎಲ್ಲವನ್ನು ಸರಿಯಾಗಿ ಬಳಸದಿದ್ದರೆ ದೋಷಗಳು ಉಂಟಾಗುತ್ತವೆ. ಇದರಲ್ಲಿ ಬಹಳ ಮುಖ್ಯವಾಗಿ ಐದಾರು ದೋಷಗಳನ್ನು ಇಲ್ಲಿ ಹೇಳಲಾಗಿದೆ. ಅದು ಯಾವುವು? ಯಾವುದರಿಂದ ಹೇಗೆಲ್ಲಾ ದೋಷಗಳು ಉಂಟಾಗುತ್ತವೆ. ಯಾವ ದೋಷಕ್ಕೆ ಏನು ಪರಿಹಾರ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ..
ಮೊದಲನೇಯದಾಗಿ ಈಶಾನ್ಯ ದಿಕ್ಕಿನಲ್ಲಿ ಟಾಯ್ಲೆಟ್ ಇತ್ತು ಎಂದಾದರೆ, ಆ ಮನೆಯಲ್ಲಿ ಯಾವುದಾದರೂ ಒಂದು ರೋಗದ ಪ್ರಭಾವ ಇರುತ್ತದೆ. ಮನೆಯಲ್ಲಿ ಯಾರಿಗಾದರೂ ಒಂದು ರೋಗವೂ ಶಾಶ್ವತವಾಗಿ ಇರುತ್ತದೆ. ಹೀಗಾಗಿ ಖಂಡಿತವಾಗಿಯೂ ಈಶಾನ್ಯದಲ್ಲಿ ಟಾಯ್ಲೆಟ್ ಅನ್ನು ಇಟ್ಟುಕೊಳ್ಳುವುದು ಅಶುಭವಾಗಿದೆ. ಇದರಿಂದ ಯಾರಿಗಾದರೂ ರೋಗಬಾಧೆ ಇದ್ದೇ ಇರುತ್ತದೆ.
ಎರಡನೇಯದಾಗಿ ಆಗ್ನೇಯದಲ್ಲಿ ಯಾವುದೇ ಕಾರಣಕ್ಕೂ ನೀರು ಇರಬಾರದು. ಯಾಕೆಂದರೆ ಇದು ಬೆಂಕಿಯ ಜಾಗವಾಗಿದೆ. ಹಾಗಾಗಿ ಇಲ್ಲಿ ಬೋರ್ ಆಗಲೀ, ಸಂಪ್ ಆಗಲೀ ಇರಬಾರದು. ಇದೇನಾದರೂ ಇದ್ದರೆ, ಮನೆಯ ಯಜಮಾನಿಗೆ ಮರಣವನ್ನು ತಂದುಕೊಡುವ ಫಲವಿರುತ್ತದೆ. ಅದರಲ್ಲೂ ಬಾವಿ ಇದ್ದಲ್ಲಿ ಮರಣ ಗ್ಯಾರೆಂಟಿ. ಇನ್ನು ಸಂಪ್ ಇದ್ದಲ್ಲಿ ಮಹಿಳೆ ಅಕ್ರಮ ಸಂಬಂಧವನ್ನು ಹೊಂದುವಂತಹ ಸಾಧ್ಯತೆ ಇರುತ್ತದೆ. ಇಲ್ಲವೇ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಿ ತಪ್ಪು ಮಾಡುವಂತಹ ಸಾಧ್ಯತೆ ಇರುತ್ತದೆ. ಇದರಿಂದ ಹೆಣ್ಣು ಮಕ್ಕಳಿಂದ ಮನೆಯ ಹೆಸರನ್ನೇ ಕೆಡಿಸುವ ಸಾಧ್ಯತೆ ಬಹಳ ಇರುತ್ತದೆ.
ಇನ್ನು ಮೂರನೇಯದಾಗಿ ದಕ್ಷಿಣ ದಿಕ್ಕನ್ನು ಗಂಡು ಮಕ್ಕಳಿಗೆ ಎಂದು ಹೇಳಲಾಗುತ್ತದೆ. ಇದನ್ನು ಚಟುವಟಿಕೆಯ ಸ್ಥಳ ಕೂಡ ಎಂದು ಕೂಡ ಹೇಳಲಾಗಿದೆ. ಗಂಡು ಮಕ್ಕಳು ಅಗತ್ಯವಾಗಿ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಲ್ಲಿ, ದಕ್ಷಿಣ ದಿಕ್ಕಿನಲ್ಲಿ ನೀರು ಇರಕೂಡದು, ಸಂಪ್, ಟ್ಯಾಂಕ್ ಅಥವಾ ಬಾವಿ ಕೂಡ ಇರಬಾರದು. ಹಾಗೊಂದು ವೇಳೆ, ಇದೆಲ್ಲಾ ದಕ್ಷಿಣ ದಿಕ್ಕಿನಲ್ಲಿದ್ದರೆ, ತೊಂದರೆ ಬರುತ್ತದೆ. ಗಂಡು ಮಕ್ಕಳು ಓದುವುದಿಲ್ಲ, ದೊಡ್ಡ ಮಗನಿಗೆ ಮೃತ್ಯವಾಗಿದ್ದು, ಇವೆಲ್ಲಾ ಬಹಳ ನೆಗೆಟಿವ್ ಎನರ್ಜಿ ಅನ್ನು ಕೊಡುತ್ತದೆ.
ನಾಲ್ಕನೇಯದಾಗಿ ಅಡುಗೆ ಮನೆಯನ್ನು ನೈರುತ್ಯದಲ್ಲಿ ಹಾಕಿದರೆ ಸಮಸ್ಯೆ ಆಗುತ್ತದೆ. ಇದರಿಂದ ಯಜಮಾನನ ಆಯುಷ್ಯಕ್ಕೆ ತೊಂದರೆ ಆಗುತ್ತದೆ. ನೈರುತ್ಯದಲ್ಲಿ ನೀರಿದ್ದರೆ, ಆರೋಗ್ಯ ಸಮಸ್ಯೆ ಆಗುತ್ತದೆ. ನೈರುತ್ಯದಲ್ಲಿ ಮನೆಯ ನೀರು ಹೊರಗೆ ಹರಿಯುತ್ತಿದ್ದರೆ, ಹಣದ ಸಮಸ್ಯೆ ಅನ್ನು ತರುತ್ತದೆ. ಇನ್ನು ಬ್ರಹ್ಮಸ್ಥಾನದಲ್ಲಿ ಯಾವುದೇ ಕನ್ಸ್ಟ್ರಕ್ಷನ್ ಬರಬಾರದು. ಇದರಿಂದ ಮನೆಯ ಸುಖ ಶಾಂತಿ ನೆಮ್ಮದಿಯನ್ನ ಹಾಳು ಮಾಡತ್ತದೆ. ಉತ್ತರ ಪೂರ್ವದಲ್ಲಿ ಎಕ್ಸ್ ಟೆಂನ್ಷನ್ ಅನ್ನು ಹಾಕಲು ಬರುವುದಿಲ್ಲ. ಆಗ ಮನೆಯಲ್ಲಿ ಸಂಬಂಧಗಳಲ್ಲಿ ಸಮಸ್ಯೆ ಎದುರಾಗುತ್ತದೆ.