ಸ್ನಾನಗೃಹದ ಪ್ರವೇಶದ್ವಾರವು ಉತ್ತರ ಅಥವಾ ಪೂರ್ವದ ಗೋಡೆಯಲ್ಲಿರಬೇಕು. ವಾಸ್ತು ಪ್ರಕಾರ ಬಾಗಿಲು ಎಂದಿಗೂ ನೈಋತ್ಯ ದಿಕ್ಕಿನಲ್ಲಿರಬಾರದು.ಮನೆಯೊಳಗೆ ನಕಾರಾತ್ಮಕ ಶಕ್ತಿ ಹರಡುವುದನ್ನು ತಡೆಯಲು ಯಾವಾಗಲೂ ಸ್ನಾನದ ಬಾಗಿಲುಗಳನ್ನು ಮುಚ್ಚಿಡಿ.ಸ್ನಾನ ಮಾಡಿದ ಬಳಿಕ ಸ್ನಾನದ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಸ್ನಾನದ ಕೋಣೆಯನ್ನು ಕೊಳಕಾಗಿ ಇಟ್ಟುಕೊಳ್ಳಬೇಡಿ. ಇಲ್ಲವಾದಲ್ಲಿ ರಾಹು, ಕೇತು, ಶನಿ ಗ್ರಹಗಳ ಪ್ರಭಾವ ಅಲ್ಲಿ ಮನೆ ಮಾಡುವುದು ಖಚಿತ. ಮೂರೂ ಗ್ರಹಗಳು ಒಟ್ಟಿಗೆ ಸೇರಿದರೆ ಋಣಾತ್ಮಕತೆ ಅಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸಬೇಕು. ಆರ್ಥಿಕ ಪ್ರಗತಿ ಆಗಬೇಕು ಎಂದು ಬಯಸುತ್ತಾರೆ. ಹಾಗಾದ್ರೆ ನೂತನ ವರ್ಷ ಆರಂಭವಾಗುವುದಕ್ಕೂ ಮೊದಲೇ ನಿಮ್ಮ ಮನೆಯ ಬಾತ್ ರೂಂ ಅಥವಾ
ಸ್ನಾನಗೃಹದಿಂದ ನಕಾರಾತ್ಮಕತೆಯನ್ನು ಹರಡುವ ಕೆಲವು ವಸ್ತುಗಳನ್ನು ತೆಗೆಯಬೇಕು.
ಮನೆಯಲ್ಲಿ ಯಾವ ವಸ್ತುಗಳು ಇರಬಾರದು ಯಾವ ವಸ್ತುಗಳು ಇರಬಾರದು ಅಂಶಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರಂತೆಯೇ, ಹೊಸ ವರ್ಷಕ್ಕೆ ಸಂಬಂಧಿಸಿದಂತೆಯೂ ಕೆಲವು ವಾಸ್ತು ಸಲಹೆಗಳನ್ನು ನೀಡಲಾಗಿದೆ.
1.ಒದ್ದೆ ಬಟ್ಟೆ; ಶಾಸ್ತ್ರದ ಪ್ರಕಾರ ಅನೇಕ ಬಾರಿ ಜನರು ಒದ್ದೆಯಾದ ಬಟ್ಟೆಗಳನ್ನು ಸ್ನಾನಗೃಹದಲ್ಲಿ ಇಡುತ್ತಾರೆ ಇದು ಅಶುಭ ಸಂಕೇತವಾಗಿದೆ.ಹಾಗಾಗಿ ಬಟ್ಟೆ ತೊಳೆದ ತಕ್ಷಣ ಹೊರಗೆ ಒಣಗಿಸಿ.ವಾಸ್ತುವಿನ ದೃಷ್ಟಿಯಿಂದ, ಸ್ನಾನಗೃಹದಲ್ಲಿ ಒದ್ದೆಯಾದ ಬಟ್ಟೆಗಳನ್ನು ಬಿಡುವುದು ಸರಿಯಲ್ಲ.
2.ಖಾಲಿ ಬಕೆಟ್ : ಸಾಮಾನ್ಯವಾಗಿ ಜನರು ಬಕೆಟ್ ಅನ್ನು ಸ್ನಾನಗೃಹದಲ್ಲಿ ಬಳಸಿದ ನಂತರ ಖಾಲಿ ಬಿಡುತ್ತಾರೆ. ವಾಸ್ತು ಪ್ರಕಾರ ಯಾವುದು ತಪ್ಪು. ಬಾತ್ ರೂಂನಲ್ಲಿ ಇಟ್ಟಿರುವ ಖಾಲಿ ಬಕೆಟ್ ಮನೆಯಲ್ಲಿ ದುರಾದೃಷ್ಟವನ್ನು ತರುತ್ತದೆ ಮತ್ತು ಬಕೆಟ್ ನಲ್ಲಿ ಸ್ವಲ್ಪ ನೀರು ಇಡಬೇಕು.ನೀವು ಬಕೆಟ್ ಅನ್ನು ಖಾಲಿ ಇಡಲು ಬಯಸಿದರೆ, ಅದನ್ನು ತಲೆಕೆಳಗಾಗಿ ಇರಿಸಿ. ಖಾಲಿ ಬಕೆಟ್ ಅನ್ನು ನೇರವಾಗಿ ಇರಿಸಿದರೆ ನಿಮ್ಮ ಮನೆಗೆ ದಾರಿದ್ರ್ಯ ಬರಲು ಹೆಚ್ಚು ಸಮಯ ಹಿಡಿಯುವುದಿಲ್ಲ.
3ಸೋರುವ ಟ್ಯಾಪ್‌ಗಳು; ಸ್ನಾನದ ನಂತರ ನೀರು (water) ತೊಟ್ಟಿಕ್ಕದಂತೆ ಟ್ಯಾಪ್ (tap) ಅನ್ನು ಸರಿಯಾಗಿ ನಿಲ್ಲಿಸಿ ಬನ್ನಿ. ನೀರು ಸೋರುವುದು, ತೊಟ್ಟಿಕ್ಕುವುದು ಕೆಟ್ಟ ಸಂಕೇತ. ಅದು ತೊಂದರೆಯುAಟು ಮಾಡುತ್ತದೆ, ಇದರಿಂದ ಹಣ ಹಾಗೂ ಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನಲಾಗಿದೆ. ಅಲ್ಲದೆ ನೀರು ಸಹ ವ್ಯರ್ಥವಾಗುತ್ತದೆ.ನಿಮ್ಮ ಮನೆಯಲ್ಲಿ ಯಾವುದೇ ಟ್ಯಾಪ್‌ಗಳು ಸೋರುತ್ತಿದ್ದರೆ, ನೀವು ತಕ್ಷಣ ಅವುಗಳನ್ನು ಸರಿಪಡಿಸಬೇಕು. ಉತ್ತಮ ಆರೋಗ್ಯಕ್ಕಾಗಿ ಇದು ಪ್ರಮುಖ ವಾಸ್ತು ಸಲಹೆಗಳಲ್ಲಿ ಒಂದಾಗಿದೆ, ಏಕೆಂದರೆ ಸೋರುವ ಟ್ಯಾಪ್ ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ