ಬೆಂಗಳೂರು, ಜ. 18 : ದೇವಾಲಯಗಳ ಅಕ್ಕ-ಪಕ್ಕದಲ್ಲಿ ಮನೆಗಳನ್ನು ನೋಡಿರುತ್ತೇವೆ. ಕೆಲವರು ದೇವಾಲಯದ ಗೋಪುರದ ನೆರಳು ಮನೆಯ ಮೇಲೆ ಬೀಳಬಾರದು. ಅದು ಮನೆಯ ಏಳಿಗೆಗೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಇನ್ನೂ ಕೆಲವರು ದೇವರ ಗುಡಿಯ ಪಕ್ಕದಲ್ಲಿ ಮನೆಗಳಿದ್ದರೆ ತುಂಬಾ ಒಳ್ಳೆಯದು. ಯಾವ ದುಷ್ಟ ಶಕ್ತಿಯೂ ಮನೆಗೆ ಬರಲು ದೇವರ ಅಡ್ಡಿ ಇರುತ್ತದೆ ಎಂದು ಹೇಳುತ್ತಾರೆ. ಆದರೆ ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು? ವಾಸ್ತು ಶಾಸ್ತ್ರದಲ್ಲಿ ಈ ಬಗ್ಗೆ ಏನು ಹೇಳಲಾಗಿದೆ? ಎಂಬ ವಿಚಾರವನ್ನು ಮೊದಲು ತಿಳಿದರೆ, ದೇವಾಲಯದ ಅಕ್ಕ-ಪಕ್ಕದಲ್ಲಿ ಮನೆ ಇದ್ದರೆ ಒಳ್ಳೆಯದಾ ಇಲ್ಲವೇ ಎಂಬುದನ್ನೂ ತಿಳಿಯಬಹುದು.
ಈ ಬಗೆ ಡಾ. ರೇವತಿ ವೀ ಕುಂಆರ್ ಅವರು ಉತ್ತರಿಸಿದ್ದು, ದೇವಾಲಯಗಳು ಏನನ್ನ ಪ್ರತಿಪಾಧಿಸುತ್ತವೆ. ಆಗಾಗ ಮುನುಷ್ಯನಿಗೆ ದೇವರ ಶಕ್ತಿ ಇರುವುದನ್ನು ಪ್ರತಿಪಾಧಿಸುತ್ತಿರುತ್ತದೆ. ಮತ್ತೊಂದು ಮನುಷ್ಯನನ್ನ ಮೀರಿದಂತಹ ಒಂದು ಶಕ್ತಿ ಇದೆ ಎಂಬುದನ್ನು ಹೇಳುತ್ತಿರುತ್ತದೆ. ಹಾಗಾಗಿ ಈ ದೇವಾಲಯಗಳು ಇರುವುದು, ಅದರಿಂದ ನಮಗೆ ಏನು ಪ್ರಯೋಜನ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಇನ್ನು ಸೌಮ್ಯ ದೇವತೆಗಳು ಏನು ಕೆಲಸ ಮಾಡುತ್ತವೆ. ಉಗ್ರ ದೇವತೆಗಳು ಏನು ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. ಸೌಮ್ಯ ದೇವತೆಗಳು ಮನುಷ್ಯನ ಏಳಿಗೆಗಾಗಿ, ಬೆಳವಣಿಗೆಗಾಗಿ, ಅಭಿವೃದ್ಧಿಗಾಗಿ ವ್ಯಕ್ತಿಯನ್ನ ಬೆಳೆಸುತ್ತದೆ. ಇನ್ನು ಉಗ್ರ ದೇವತೆಗಳು ಮುನುಷ್ಯನಿಗೆ ಯಾವುದೇ ತೊಂದರೆಯಾಗದಂತೆ ತಡೆಗಟ್ಟುತ್ತವೆ.
ದೇವತೆಗಳು ಇರುವುದೇ ಮನುಷ್ಯನನ್ನು ಎಲ್ಲಾ ರೀತಿಯಲ್ಲೂ ರಕ್ಷಿಸುವ ಸಲುವಾಗಿ. ಹಾಗಾಗಿ ದೇವತೆಗಳಿರುವ ದೇವಾಲಯಗಳ ಅಕ್ಕ-ಪಕ್ಕದಲ್ಲಿ ಮನೆ ಇದ್ದರೆ ತೊಂದರೆ ಏನಿಲ್ಲ. ಆದರೆ, ದೇವಾಲಯದ ಯಾವ ದಿಕ್ಕಿನಲ್ಲಿ ಮನೆ ಇರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಿಕೊಡಲಾಗಿದೆ. ಸೌಮ್ಯ ದೇವತೆಗಳ ದೇವಾಲಯದ ಮುಂಭಾಗ ಅಥವಾ ಬಲ ಭಾಗದಲ್ಲಿ ಮನೆ ಇರಬೇಕು. ವಿಷ್ಣು, ಗಣೇಶ, ಪಾರ್ವತಿ, ಮಹಾಲಕ್ಷ್ಮೀ, ಸರಸ್ವತಿ ದೇವತೆಗಳು ಸೌಮ್ಯ ದೇವತೆಗಳಾಗಿದ್ದು, ಇವು ಮನೆಯ ಮುಂಭಾಗ ಇಲ್ಲವೇ ಬಲ ಭಾಗದಲ್ಲಿ ಇದ್ದರೆ ಒಳ್ಳೆಯದು. ಇನ್ನು ಉಗ್ರ ದೇವತೆಗಳಾದ ಶಿವ, ಚಾಮುಂಡಿ ಸೇರಿದಂತೆ ಉಗ್ರ ದೇವತೆಗಳ ದೇವಾಲಯಗಳು ಮನೆಯ ಹಿಂಭಾಗ ಹಾಗೂ ಎಡ ಭಾಗದಲ್ಲಿ ಇದ್ದರೆ ಸೂಕ್ತ.
ಇನ್ನು ಗ್ರಾಮ ದೇವತೆಗಳು ಕೂಡ ಇಡೀ ಊರನ್ನು ಕಾಪಾಡುತ್ತದೆ. ಹಾಗಾಗಿ ರಾಮದೇವತೆಗಳು ಉಗ್ರವಾಗಿರುವ ಕಾರಣ ಈ ದೇಔಆಲಯದ ಮುಂಭಾಗ ಹಾಗೂ ಬಲ ಭಾಗದಲ್ಲಿ ಮನೆಗಳು ಇರುವುದು ಒಳ್ಳೆಯದಲ್ಲ. ಇನ್ನು ಉಗ್ರ ದೇವತೆಗಳು ಮಧ್ಯ ರಾತ್ರಿ 12.00 ಗಂಟೆಯಿಂದ 3.00 ಗಂಟೆಯವರೆಗೆ ದುಷ್ಟ ಸಂಹಾರ ಮಾಡಲು ಸಂಚಾರ ಮಾಡುತ್ತಾರೆ. ಈ ಸಂದರ್ಭದಲ್ಲಿ ದೇವರು ತೀವ್ರವಾದ ಉಗ್ರ ಸ್ವರೂಪವನ್ನು ಪಡೆದಿರುತ್ತಾರೆ. ಈ ಉಗ್ರ ರೂಪದಲ್ಲಿರುವ ದೇವರ ದೃಷ್ಟಿ ಮನೆಯ ಬಾಗಿಲ ಮೇಲೆ ಬೀಳಬಾರದು. ಅದರಿಂದ ಮನೆಗೆ ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.