ಬೆಂಗಳೂರು, ಮೇ. 31 : ಸಾಮಾನ್ಯವಾಗಿ ಒಂದು ಮನೆಯ ಪಕ್ಕದಲ್ಲಿ ಮತ್ತೊಂದು ಮನೆಯನ್ನು ಕಟ್ಟುವುದರಿಂದ ಕೆಲವರು ಮನೆಯ ಕಾಂಪೌಂಡ್ ಗೋಡೆಗಳನ್ನು ಎತ್ತರಿಸಿರುತ್ತಾರೆ. ಆಗ ಮನೆಯ ಹೊರಗಡೆ ಬಂದ ಕೂಡಲೇ ಖಾಲಿ ಗೋಡೆಯನ್ನು ನೋಡಬೇಕಾಗುತ್ತದೆ. ಇನ್ನು ನಿವೇಶನ ಉತ್ತರಾಭಿಮುಖವಾಗಿ ಇದ್ದು, ಮುಖ್ಯದ್ವಾರ ಪೂರ್ವವಾಭಿಮುಖ ಕಟ್ಟಿದರೆ, ಇಲ್ಲದಿದ್ದರೆ, ನಿವೇಶನ ದಕ್ಷಿಣಾಭಿಮುಖವಾಗಿದ್ದರೆ, ಮುಖ್ಯದ್ವಾರವನ್ನು ಪೂರ್ವಾಭಿಮುಖ ಕಟ್ಟಿದಾಗ ಮನೆಯ ಎದುರುಗಡೆಗೆ ಗೋಡೆ ಬರುತ್ತದೆ.
`
ಇನ್ನುಕೆಲವರು ಪಶ್ಚಿಮಾಭಿಮುಖವಾಗಿ ಮುಖ್ಯದ್ವಾರವನ್ನು ಇಟ್ಟುಕೊಂಡಿರುತ್ತಾರೆ. ಎದುರುಗಡೆಯವರು ಪೂರ್ವಾಭಿಮುಖವಾಗಿ ಮನೆಯನ್ನು ಕಟ್ಟಿಕೊಂಡಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಮನೆಯಿಂದ ಹೊರಗಡೆ ಬಂದ ಕೂಡಲೆ ಎದುರು ಮನೆಯ ಖಾಲಿಗೋಡೆಯನ್ನು ನೋಡಬೇಕಾಗುತ್ತದೆ. ಎದ್ದು ಬಂದು ಖಾಲಿ ಮನೆಯನ್ನು ನೋಡಿದಾಗ, ಆ ಬ್ಲಾಂಕ್ ನೆಸ್ ಎಂಬುದು ಸ್ಪೂರ್ತಿಯನ್ನು ಕೊಡುವುದಿಲ್ಲ. ಖಾಲಿ ಗೋಡೆಯನ್ನು ನೋಡಿಕೊಂಡು ಕೆಲಸವನ್ನು ಮಾಡಲು ಮುಂದಾದರೆ, ಕೆಲಸದಲ್ಲಿ ಸಮಸ್ಯೆ ಆಗುತ್ತದೆ.
ಪ್ರತಿ ದಿನ ಮನೆಯಿಂದ ಹೊರಗೆ ಹೊರಟ ಕೂಡಲೇ ಖಾಲಿ ಗೋಡೆಯನ್ನು ನೋಡಿಕೊಂಡು ಹೋದರೆ, ಆಗ ನಿತ್ಯದ ಕೆಲಸದಲ್ಲಿ ತೊಂದರೆ ಆಗುತ್ತದೆ. ಹೀಗೇನಾದರೂ ಮನೆಯ ಎದುರುಗಡೆ ಬ್ಲಾಂಕ್ ವಾಲ್ ಇದ್ದರೆ, ಆ ಗೋಡೆಗೆ ದೇವರ ಫೋಟೋ ಅಥವಾ ಯಾವುದಾದದರೂ ಶುಭ ಸಂಕೇತವಾದದನ್ನು ಹಾಕಿದರೆ, ಅದರಿಂದ ಒಳ್ಳೆಯದಾಗುತ್ತದೆ. ಯಾವಾಗಲೂ ಖಾಲಿ ಗೋಡೆಗಳು ಮನಸ್ಸನ್ನು ಖಾಲಿ ಮಾಡುತ್ತದೆ. ಇದಕ್ಕೆ ಅವಕಾಶ ಕೊಡದೆ ಎದುರುಗಡೆ ಪಾಸಿಟಿವ್ ಆಗುವಂತೆ ಯಾವುದಾದರೂ ಫೊಟೋವನ್ನು ಹಾಕುವುದು ಬಹಳ ಮುಖ್ಯ.
ಹಲವರಲ್ಲಿ ಮೂಡುವ ವಾಸ್ತು ಪ್ರಶ್ನೆಗಳಿಗೆ ಡಾ. ರೇವತಿ ವೀ ಕುಮಾರ್ ಅವರು ಸರಳವಾಗಿ ಉತ್ತರ ನೀಡಿದ್ದಾರೆ. ವಾಸ್ತು ಶಾಸ್ತ್ರದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವಂತಹ ಹಾಗೂ ಕಳೆದ 20 ವರ್ಷಗಳಿಂದ ಇದೇ ವಿಷಯವಾಗಿ ಬೋಧನೆ ಮಾಡಿರುವಂತಹ ಜೋತಿಷಿ ಹಾಗೂ ಸಂಖ್ಯಾ ಶಾಸ್ತ್ರಜ್ಞರು ಆಗಿರುವ ಡಾ. ರೇವತಿ ವೀ ಕುಮಾರ್ ವಾಸ್ತು ಬಗ್ಗೆ ಜನರಲ್ಲಿ ಇರುವ ಸಾಕಷ್ಟು ಪ್ರಶ್ನೆಗಳಿಗೆ, ಗೊಂದಲ ಹಾಗೂ ಅನುಮಾನಗಳಿಗೆ ಸರಳವಾಗಿ ಉತ್ತರ ಕೊಡುತ್ತಾರೆ.