21.1 C
Bengaluru
Thursday, December 26, 2024

ವಾಸ್ತು ಪ್ರಕಾರ ಸೆಪ್ಟಿಕ್ ಟ್ಯಾಂಕ್ ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು..?

ಬೆಂಗಳೂರು, ಮೇ. 24 : ಸೆಪ್ಟಿಕ್ ಟ್ಯಾಂಕ್ ಗಳನ್ನು ಲೇಔಟ್ ಗಳಲ್ಲಿ ಅದರಲ್ಲೂ ಬಿಡಿಎ ಅಥವಾ ಸರ್ಕಾರಿ ಲೇಔಟ್ ಗಳಲ್ಲಿ ಮನೆಯಿಂದ ಹೊರಗೆ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಪ್ರೈವೇಟ್ ಲೇಔಟ್ ಗಳಲ್ಲಿ ಇದರ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಇದು ಸರ್ಕಾರಕ್ಕೆ ಕನೆಕ್ಷನ್ ಇರುವುದರಿಂದ ಬಿಡಬಲ್ಯೂ ಎಸ್ ಎಸ್ ಬಿಗೆ ತೆರಿಗೆಯನ್ನು ಕಟ್ಟಿ ಅಲ್ಲಿಂದ ಫೆಸಿಲಿಟಿಯನ್ನು ಪಡೆಯುವಂತಹ ಅಗತ್ಯವಿರುತ್ತದೆ. ಹಾಗಾಗಿ ಹಲವರು ಪ್ರೈವೇಟ್ ಲೇಔಟ್ ಗಳಲ್ಲಿ ಸೆಪ್ಟಿಕ್ ಟ್ಯಾಂಕ್ ಗಳನ್ನು ತಾವೇ ಹಾಕಿಕೊಳ್ಳಬೇಕಾಗುತ್ತದೆ.

ಖಾಲಿ ಜಾಗವಾದರೆ ವಾಯುವ್ಯ ದಿಕ್ಕಿನಲ್ಲಿ ಕೊಳಚೆ ನೀರಿನ ಸೆಪ್ಟಿಕ್ ಟ್ಯಾಂಕ್ ಗಳನ್ನು ಹಾಕಬೇಕಾಗುತ್ತದೆ. ಆದರೆ, ಪಕ್ಕದ ಸೈಟ್ ಗಳಲ್ಲಿ ಈ ಸೆಪ್ಟಿಕ್ ಟ್ಯಾಂಕ್ ಗಳನ್ನು ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಮನೆಯ ಸೈಟ್ ಒಳಗಡೆಯೇ ಸೆಪ್ಟಿಕ್ ಟ್ಯಾಂಕ್ ಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆಗ ವಾಯುವ್ಯ ಕೋಣೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಗಳನ್ನು ಹಾಕಿಕೊಳ್ಳಬಹುದು. ಪೂರ್ವ-ಪಶ್ಚಿಮ ಉದ್ದ ಜಾಸ್ತಿ ಇರುವ ಹಾಗೆ ಮತ್ತು ದಕ್ಷಿಣ-ಉತ್ತರದ ಕಡೆಗೆ ಅಗಲ ಕಡಿಮೆ ಇರುವ ಹಾಗೆ ರೆಕ್ಟ್ಯಾಂಗ್ಯುಲರ್ ಶೇಪ್ ನಲ್ಲಿ ನಿರ್ಮಾಣ ಮಾಡಬೇಕು.

ಪಶ್ಚಿಮ ವಾಯುವ್ಯ ಅಥವ ಉತ್ತ ವಾಯುವ್ಯ ಜಾಗದಲ್ಲಿ ಸೆಪ್ಟಿಕ್ ಟ್ಯಾಂಕ್ ಅನ್ನು ಹಾಕಬೇಕು. ಆದರೆ ಮನೆಯ ಒಳಗಡೆ ಬರದಂತೆಯೂ ಕಾಂಪೌಂಡ್ ಸುತ್ತ ಇರುವ ಜಾಗದಲ್ಲಿ ಹಾಕಿಕೊಳ್ಳಬಹುದು. ಮನೆಯ ಒಳಗೆ ಇದ್ದರೆ ಇದು ಸಮಸ್ಯೆಗೆ ಕಾರಣವಾಗುತ್ತದೆ. ನಮ್ಮ ಮನೆಯ ವೇಸ್ಟೇಜ್ ನೀರನ್ನು. ನಮ್ಮ ಮನೆಯ ಕೌಂಪೌಂಡ್ ಒಳಗಡೆಯೇ ಭೂಮಿಯಲ್ಲಿ ಇಂಗುವುದಕ್ಕೆ ಬಿಡುವುದು ಅಷ್ಟು ಒಳ್ಳೆಯದಲ್ಲ. ಆದಷ್ಟು ಬೇಗ ಇದನ್ನು ಬಿಡಬಲ್ಯೂ ಎಸ್ ಎಸ್ ಬಿಗೆ ತೆರಿಗೆ ಕಟ್ಟಿ ಮನೆಯಿಂದ ದೂರ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

Related News

spot_img

Revenue Alerts

spot_img

News

spot_img