28.2 C
Bengaluru
Wednesday, July 3, 2024

ಮನೆಯಲ್ಲಿ ಬ್ರಹ್ಮಸ್ಥಾನದಲ್ಲಿ ಹಳ್ಳ, ದಿಣ್ಣೆಯನ್ನು ಬಿಟ್ಟು ಮನೆಯನ್ನು ಕಟ್ಟಬಹುದೇ..?

ಬೆಂಗಳೂರು, ಮೇ. 26 : ಬ್ರಹ್ಮ ಸ್ಥಾನ ಅನ್ನುವುದು ನಿವೇಶನದಲ್ಲಿ ಮಧ್ಯ ಭಾಗ ಬರುತ್ತದೆ. ವಾಸ್ತು ಮಂಡಲದಲ್ಲಿ 45 ದೇವತೆಗಳು ಇರುತ್ತವೆ. ಬ್ರಹ್ಮನೇ ನಾದ ಬ್ರಹ್ಮನಾಗಿರುತ್ತಾರೆ. ಆ ಮಧ್ಯ ಭಾಗದಲ್ಲಿ ಏನನ್ನೂ ಕಟ್ಟ ಬಾರದು. ಹಾಗೇನಾದರೂ ಮಾಡಿದರೆ ಮನೆಯಲ್ಲಿ ಅಶುಭತ್ವವನ್ನು ಕೊಡುತ್ತದೆ. ಎಲ್ಲರಿಗೂ ತಾಪತ್ರೆಯ ತಪ್ಪಿದ್ದಲ್ಲ. ಒಂದು ನಿವೇಶನವನ್ನು 9 ಭಾಗ ಮಾಡಿದರೆ, ಮಧ್ಯದ ಭಾಗದಲ್ಲಿ ಬ್ರಹ್ಮಸ್ಥಾನ ಇರುತ್ತದೆ. ಬ್ರಹ್ಮ ಸೃಷ್ಟಿಕರ್ತ. ಬ್ರಹ್ಮ ಸ್ಥಾನದಿಂದ ಎಲ್ಲಾ ಮೂಲೆಗಳಿಗೂ ಶಕ್ತಿ ಹೋಗುತ್ತದೆ.

ಮಧ್ಯಭಾಗದಲ್ಲಿ ಏನಾದರೂ ನಿರ್ಮಾಣ ಮಾಡಿದರೆ, ಭಾರಕ್ಕೆ ಅಲ್ಲಿಯ ಶಕ್ತಿ ಎಲ್ಲವೂ ಬೇರೆಯಾಗಿ ಬಿಡುತ್ತದೆ. ನಿವೇಶನದ ಮಧ್ಯದಲ್ಲಿ ಎತ್ತರವಿದ್ದರೂ ಒಳ್ಳೆಯದು ಎಂದು ಕೆಲ ಗ್ರಂಥಗಳಲ್ಲಿ ಹೇಳಲಾಗಿದೆ. ಆದರೆ, ಸಾಮಾನ್ಯವಾಗಿ ಬ್ರಹ್ಮಸ್ಥಾನದಲ್ಲಿ ಹಳ್ಳ, ದಿನ್ನೆ ಇರಬಾರದು ಎಂದು ಹಲವು ಗ್ರಂಥಗಳಲ್ಲಿ ಹೇಳಲಾಗಿದೆ. ಈಗ ಹಳೆಯ ಕಾಲದ ತೊಟ್ಟಿ ಮನೆಗಳು ಇರುತ್ತಿದ್ದವು. ಈ ಮನೆಗಳಲ್ಲಿ ಮಧ್ಯಭಾಗದಲ್ಲಿ ತೊಟ್ಟಿಯಂತೆ ನಿರ್ಮಾಣ ಮಾಡಿ, ಸುತ್ತಲೂ ಕೋಣೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು.

ತೊಟ್ಟಿಯ ಮಧ್ಯ ಭಾಗದಲ್ಲಿ ಬೃಂದಾವನವನ್ನು ಕಟ್ಟಿ, ತುಳಸಿ ಗಿಡವನ್ನು ನೆಡಲಾಗುತ್ತಿತ್ತು. ಬ್ರಹ್ಮಸ್ಥಾನದಲ್ಲಿ ಶುಭತ್ವವನ್ನು ಕೊಡುವಂತಿರಬೇಕು. ಭಾರ ಇದ್ದರೆ ಅದು ಸಮಸ್ಯೆ ಅನ್ನು ತಂದು ಕೊಡುತ್ತದೆ. ತೊಟ್ಟಿ ಮನೆಗಳಲ್ಲಿ ತೊಟ್ಟಿಯಂತಿರುವ ಮಧ್ಯಭಾಗಕ್ಕೆ ರೂಫ್ ಇರುವುದಿಲ್ಲ. ಸೂರ್ಯನ ಕಿರಣಗಳು ಬರುತ್ತಿರುತ್ತದೆ. ಇದರಿಂದ ಅಲ್ಲಿಯ ಎನರ್ಜಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇದು ಮನೆಯಲ್ಲಿ ಸದಾ ಶುಭತ್ವವನ್ನು ಈ ಮನೆಯಲ್ಲಿ ಇರುತ್ತದೆ.

ಹೀಗಾಗಿ ತೊಟ್ಟಿ ಮನೆಗಳಲ್ಲಿ ಹಳ್ಳ ಮಾಡಿದ್ದರೂ ಕೂಡ ಸಮಸ್ಯೆ ಆಗುತ್ತಿರಲಿಲ್ಲ. ಅಷ್ಟೇ ಅಲ್ಲದೇ, ಅಲ್ಲಿ ಬೃಂದಾವನವಿದ್ದು, ತುಳಸಿಯ ಪೂಜೆ ಮಾಡುತ್ತರಿದ್ದದ್ದು ಶುಭವನ್ನು ಹೆಚ್ಚಿಸುತ್ತದೆ. ಆದರೆ, ಮಧ್ಯಭಾಗದಲ್ಲಿ ದೇವರ ಮನೆ, ಸ್ವಿಮ್ಮಿಂಗ್ ಪೂಲ್ ಗಳನ್ನು ನಿರ್ಮಿಸುವುದರಿಂದ ಅಶುಭವಾಗುತ್ತದೆ. ಅದೇ, ಈಗಲೂ ತೊಟ್ಟಿ ಮನೆಯನ್ನು ನಿರ್ಮಿಸಿ, ಸೂರ್ಯ ಬೆಳಕು ನೇರವಾಗಿ ಮನೆಯೊಳಗೆ ಬರುವಂತೆ ಕಟ್ಟಿಕೊಳ್ಳುವುದರಿಂದ ಮನೆಗೆ ಬಹಳ ಒಳ್ಳೆಯದಾಗಿತ್ತದೆ. ಇದರಿಂದ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ.

Related News

spot_img

Revenue Alerts

spot_img

News

spot_img