ಬೆಂಗಳೂರು, ಫೆ. 13 : ಸಾಮಾನ್ಯವಾಗಿ ಮನೆಯ ಎದುರಿಗೆ ರಸ್ತೆಗಳು ಹಾದು ಹೋಗುತ್ತದೆ. ನಗರ ಸೇರಿದಂತೆ ಹಳ್ಳಿಗಳಲ್ಲೂ ಕೂಡ ಮನೆಯ ಎದುರು ರಸ್ತೆ ಗಳನ್ನು ನಿರ್ಮಾಣ ಮಾಡಲಾಗಿರುತ್ತದೆ. ಮನೆಯ ಎದರು ಚಿಕ್ಕ ಚಿಕ್ಕ ರಸ್ತೆ ಇದ್ದು, ಒಂದು ಊರಿನ ನಂತರ ದೊಡ್ಡ ರಸ್ತೆಗಳು ಕಾಣುತ್ತವೆ. ಇನ್ನು ಕೆಲವೆಡೆ ಮನೆಯ ಎದರು ಹಾಗೂ ಪಕ್ಕದಲ್ಲೂ ರಸ್ತೆಗಳು ಬಂದಿರುತ್ತವೆ. ಅಂದರೆ, ರಸ್ತೆಯ ಕೊನೆಯಲ್ಲಿ ಮನೆಯನ್ನು ನಿರ್ಮಿಸಿದ್ದರೆ. ಆಗ ಮನೆಯ ಎರಡು ಭಾಗದಲ್ಲಿ ರಸ್ತೆ ಇರುತ್ತದೆ. ಇದು ವಾಸ್ತು ಪ್ರಕಾರ ಸಮಸ್ಯೆನಾ..? ಇಲ್ಲವಾದರೆ, ಮನೆಯ ಸುತ್ತಲೂ ರಸ್ತೆ ಇದ್ದರೆ ವಾಸ್ತುವಿನಲ್ಲಿ ಏನು ಹೇಳಲಾಗಿದೆ. ಮನೆಯ ಎಷು ದಿಕ್ಕಿನಲ್ಲಿ ರಸ್ತೆಗಳು ಇದ್ದರೆ ಶುಭ ಎಂದು ತಿಳಿಯೋಣ ಬನ್ನಿ.
ಬೀದಿ ಎಲ್ಲಾ ಮನೆಗಳ ನಾಲ್ಕೂ ದಿಕ್ಕಿಗೆ ರಸ್ತೆ ಬರುವುದಿಲ್ಲ. 100ಕ್ಕೆ 80 ಅಡಿ ಬಂದಾಗ ಬೀದಿಗಳು ಎರಡು ದಿಕ್ಕಿನಲ್ಲಿ ಬರುತ್ತವೆ. ದೊಡ್ಡ ದೊಡ್ಡ ಫ್ಲಾಟ್ ಗಳನ್ನು ತೆಗೆದುಕೊಂಡಾಗ ಮಾತ್ರ ನಾಲ್ಕು ಕಡೆ ಬೀದಿಗಳು ಬರುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ನಗರಗಳಲ್ಲಿ ಕಾರ್ನರ್ ಮನೆಗಳಿಗೆ ಎರಡು ಹಾಗೂ ಕೆಲವು ಮನೆಗಳಿಗೆ ಮಾತ್ರವೇ ಮೂರು ಕಡೆ ರಸ್ತೆಗಳು ಬರುತ್ತವೆ. ಇನ್ನು ಎರಡು ಕಡೆ ರಸ್ತೆಗಳು ಬಂದರೆ ಅದು ತುಂಬಾ ಶುಭ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಉತ್ತರದ ಕಡೆಗೂ ಪೂರ್ವದ ಕಡೆಗೂ ಬರುವ ನಿವೇಶನಕ್ಕೆ ತುಂಬಾ ಶುಭ ಎಂದು ಹೇಳುತ್ತೇವೆ. ಯಾಕೆಂದರೆ ಪೂರ್ವ ಹಾಗೂ ಉತ್ತರ ಎರಡು ದಿಕ್ಕು ಸಾಮಾನ್ಯವಾಗಿ ಎಲ್ಲರಿಗೂ ಶುಭವನ್ನೇ ನೀಡುತ್ತದೆ.
ಅದೇ ರೀತಿಯಲ್ಲಿ ದಕ್ಷಿಣ ಹಾಗೂ ಪೂರ್ವದಲ್ಲಿ ಬೀದಿ ಬರುತ್ತದೆ. ಅದಕ್ಕೂ ಕೂಡ ಒಳ್ಳೆಯದು ಎನ್ನುತ್ತೇವೆ. ಹೀಗೆ ಬಂದಾಗ ನಿಮಗೆ ದಕ್ಷಿಣದ ಬಾಗಿಲು ಆಗಿ ಬರುವುದಾದರೆ, ದಕ್ಷಿಣಕ್ಕೆ ಮುಖ್ಯದ್ವಾರವನ್ನು ಇಡಬಹುದು. ಇಲ್ಲವೇ ಪೂರ್ವಕ್ಕೆ ಇಟ್ಟುಕೊಳ್ಳಬಹುದು. ಅದೇ ರೀತಿ ವಾಯುವ್ಯದ ಫ್ಲಾಟ್ ಬಂದರೆ, ಉತ್ತರ ಹಾಗೂ ಪೂರ್ವದಲ್ಲಿ ಫ್ಲಾಟ್ ಬಂದಾಗ ಪೂರ್ವದಲ್ಲಿ ಬಾಗಿಲನ್ನು ಇಟ್ಟುಕೊಳ್ಳಬಹುದು. ನೈರುತ್ಯದಲ್ಲಿ ಅಂದರೆ, ದಕ್ಷಿಣ ಹಾಗೂ ಪಶ್ಚಿಮದಲ್ಲಿ ಫ್ಲಾಟ್ ಬಂದರೆ, ಇಂಥಹ ಫ್ಲಾಟ್ ಗಳಲ್ಲಿ ಏಳಿಗೆ ತುಂಬಾ ಕಡಿಮೆ ಇರುತ್ತದೆ. ಇವರು ಯಾರ ಸಹಾಯ ಇಲ್ಲದೇ ಕಷ್ಟಪಟ್ಟು ಬದುಕುತ್ತಾರೆ. ಹಾಗಾಗಿ ಜನರಲ್ ಆಗಿ ದಕ್ಷಿಣ ಹಾಗೂ ಪಶ್ಚಿಮದಲ್ಲಿ ರಸ್ತೆ ಬರುವಂತಹ ನಿವೇಶನಗಳು ಒಳ್ಳೆಯದಲ್ಲ. ಆದರೆ, ಇಲ್ಲೇ ಮನೆ ಇದ್ದರೆ, ಬೇರೆ ದಾರಿ ಇಲ್ಲವಾದರೆ ಏನೂ ಮಾಡಲು ಸಾಧ್ಯವಿಲ್ಲ.
ಇನ್ನು ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿದ್ದರೆ, ವಿಲ್ಲಾಗಳಿದ್ದರೆ ಮಾತ್ರವೇ ನಾಲ್ಕೂ ದಿಕ್ಕಿನಲ್ಲೂ ರಸ್ತೆಗಳು ಬರುತ್ತದೆ. ಸಾಮಾನ್ಯವಾಗಿ, ಫ್ಯಾಕ್ಟರಿ, ದೊಡ್ಡ ದೊಡ್ಡ ಆಫೀಸ್ ಗಳಿಗೆ ಮಾತ್ರವೇ ನಾಲ್ಕೂ ದಿಕ್ಕಿನಲ್ಲಿ ರಸ್ತೆಗಳು ಇರುತ್ತದೆ. ಮನೆಗಳು ಎಕರೆಗಟ್ಟಲೆ ಇರುವುದಿಲ್ಲ. ಹಾಗಾಗಿ ಮನೆಗಳಿಗೆ ಹೆಚ್ಚೆಂದರೆ ಎರಡು ದಿಕ್ಕಿನಲ್ಲಿ ರಸ್ತೆಗಳು ಇರುತ್ತವೆ. ಅಪರೂಪದ ಸಂದರ್ಭದಲ್ಲಿ ಮಾತ್ರವೇ ಮೂರೂ ದಿಕ್ಕಿಗೆ ರಸ್ತೆಗಳಿರುತ್ತವೆ.