ಬೆಂಗಳೂರು, ಫೆ. 20 : ವಾಸ್ತು ಶಾಸ್ತ್ರದಲ್ಲಿ ಹಾಲ್ ಬಹಳ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಮೊದಲನೇಯದಾಗಿ ಹಾಲ್ ಎಲ್ಲಿರಬೇಕು ಎಂಬುದನ್ನು ನೋಡೋಣ.ಬೆಡ್ ರೂಮ್ ದಕ್ಷಿಣ ಅಥವಾ ನೈರುತ್ಯದಲ್ಲಿ ಇರಬಹುದು ಎಂದು ಹೇಳುವಾಗ, ಹಾಲ್ ಯಾವಾಗಲೂ ಪೂರ್ವ, ಈಶಾನ್ಯ, ಉತ್ರರ ಹಾಗೂ ಬ್ರಹ್ಮ ಸ್ಥಾನದಲ್ಲಿ ಇರಬಹುದು. ದಕ್ಷಿಣದ ಕಡೆ ಹಾಗೂ ಪಶ್ಚಿಮದ ಕಡೆಗೆ ಯಾವುದೇ ಕಾರಣಕ್ಕೂ ಇರಬಾರದು.
ಇನ್ನು ಎರಡನೇಯದಾಗಿ, ಹಾಲ್ ನಲ್ಲಿ ಮನೆಯವರೆಲ್ಲಾ ಒಟ್ಟಿಗೆ ಕುಳಿತುಕೊಳ್ಳುವುದರಿಂದ ಹಾಗೂ ಮನೆಯಲ್ಲಿ ಪ್ರತಿಯೊಬ್ಬರೂ ಹಾಲ್ ಅನ್ನು ಬಳಸುವುದರಿಂದ, ಇಲ್ಲಿ ಸಿಟ್ಟಿಂಗ್ ಫರ್ನಿಚರ್ಸ್ ಬಗ್ಗೆ ಹೆಚ್ಚು ಗಮನ ಕೊಡಲೇ ಬೇಕು. ವಾಸ್ತುವಿನಲ್ಲಿ ವೈಟ್ ಫಾರ್ಮುಲ ಇರುವುದರಿಂದ, ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಹೆಚ್ಚು ತೂಕವಿರಬೇಕು. ಆದರೆ, ಪೂರ್ವ ಹಾಗೂ ಬ್ರಹ್ಮಸ್ಥಾನದಲಿ ಯಾವುದೇ ರೀತಿಯ ಭಾರದ ವಸ್ತು ಇರುವುದು ಒಳ್ಳೆಯದಲ್ಲ. ಹಾಗಾಗಿ ಎಚ್ಚರ ವಹಿಸಿ ಸೋಫಾವನ್ನು ಹಾಲ್ ನ ದಕ್ಷಿಣ ಹಾಗೂ ಪಶ್ಚಿಮದಲ್ಲಿ ಅಳವಡಿಸಬೇಕು. ಪೂರ್ವ ಹಾಗೂ ಉತ್ತರದಲ್ಲಿ ಬೇಕಿದ್ದರೆ, ಲೈಟ್ ವೈಟ್ ಇರುವಮತಹ ಪ್ಲಾಸ್ಟಿಕ್ ಚೇರ್ ಗಳನ್ನು ಬೇಕಿದ್ದರೆ ಇಟ್ಟುಕೊಳ್ಳಬಹುದು.
ಇನ್ನು ಯಾವುದೇ ಕಾರಣಕ್ಕೂ ಈಶಾನ್ಯ ಹಾಗೂ ಬ್ರಹ್ಮಸ್ಥಾನವನ್ನು ಖಾಲಿ ಇಡಬೇಕು. ಕೆಲವರು ಏನು ಮಾಡುತ್ತಾರೆ ಎಂದರೆ, ತುಂಬಾ ತೂಕವಿರುವಂತಹ ಟೀಪಾಯ್ ಗಳನ್ನು ತೆಗೆದುಕೊಂಡು ಬಂದು ಹಾಲ್ ನ ಮಧ್ಯದಲ್ಲಿ ಇಡುತ್ತಾರೆ. ಇದು ವಾಸ್ತು ಪ್ರಕಾರ ಸಮ್ಮತವಲ್ಲ. ಮೂರನೇಯದಾಗಿ ಹಾಲ್ ಮೂಲಕವೇ ಮನೆಯ ಎಲ್ಲಾ ಕೊಠಡಿಗಳಿಗೂ ಹೋಗುವುದರಿಂದ ಆದಷ್ಟು ಮನೆಯ ಎಲ್ಲಾ ಮೂಲೆಗಳನ್ನು ಓಡಾಡಲು ಸಾಧ್ಯವಾಗುವಂತೆ ಸ್ಥಳವಾಕಾಶ ಮಾಡಿಕೊಂಡು ಇಟ್ಟುಕೊಳ್ಳುವುದು ಬಹಳ ಒಳ್ಳೆಯದು. ಇನ್ನು ಹಾಲ್ ನಲ್ಲಿ ಯಾವ ರೀತಿಯ ಫೋಟೋಗಳನ್ನು ಹಾಕೋದು ಒಳ್ಳೆಯದು ಎಂದು ತಿಳಿಯೋಣ ಬನ್ನಿ.
ಮನೆಯ ಹಾಲ್ ನಲ್ಲಿ ಕುಟುಂಬದವರೆಲ್ಲಾ ಕುಳಿತು ಇಂಟರ್ಯಾಕ್ಷನ್, ಅಥವಾ ಖುಷಿಯಾಗಿ ಚರ್ಚೆ ಮಾಡುವುದರಿಂದ, ಹಾಲ್ ನಲ್ಲಿ ಕುಟುಂಬದವರೆಲ್ಲರೂ ಇರುವಂತಹ ಫೋಟೋವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹಾಕುವುದು ಒಳ್ಳೆಯದು. ಆದರೆ, ಕೆಲವರು ಗೀತೋಪದೇಶವನ್ನು ಕೂಡ ಹಾಲ್ ನಲ್ಲಿ ಇಟ್ಟಿರುತ್ತಾರೆ. ಆದರೆ, ಅದೆಲ್ಲಾ ದೇವರ ಮನೆಯಲ್ಲಿದ್ದರೆ ಒಳ್ಳೆಯದು. ಮನೆಯ ಹಾಲ್ ನಲ್ಲಿ ಯಾವಾಗಲೂ ಶುಭ ಸಂಕೇಥವಾದ ಫೋಟೋ ಇರುವುದು ಒಳ್ಳೆಯದು. ಇನ್ನು ಮನೆಯ ಹಾಲ್ ಬಣ್ಣ ಯಾವಾಗಲೂ ಪ್ಲೆಸೆಂಟ್ ಆಗಿ ಇರಬೇಕು. ಕ್ರೀಮ್, ಲೈಟ್ ಪಿಂಕ್ ಇದ್ದರೆ ಚೆನ್ನ.
ಇನ್ನು ಮನೆಗೆ ಶೋಕೇಸ್ ಗಳನ್ನು ಇಡುತ್ತಾರೆ. ಇದು ಯಾವಾಗಲೂ ಮನೆಯ ಬಾಗಿಲ ಎದುರುಗಡೆ ಗೋಡೆಯಲ್ಲಿ ಇರಬೇಕು ಆದಷ್ಟು ದಕ್ಷಿಣ ಅಥವಾ ಪಶ್ಚಿಮದ ಗೋಡೆಯಲ್ಲಿ ಶೋಕೇಸ್ ಗಳು ಇದ್ದರೆ ತುಂಬಾ ಒಳ್ಳೆಯದು. ಇನ್ನು ವಾಲ್ ಕ್ಲಾಕ್ ಹಾಗೂ ಕನ್ನಡಿಗಳು ಉತ್ತರ ಹಾಗೂ ಪೂರ್ವದಲ್ಲಿ ಇರಬಹುದು. ಯಾವುದೇ ಕಾರಣಕ್ಕೂ ದಕ್ಷಿಣ ಹಾಗೂ ಪಶ್ಚಿಮದಲ್ಲಿ ಇಡಬಾರದು. ಹೀಗೆ ಮನೆಯ ಹಾಲ್ ಅನ್ನು ಸ್ವಲ್ಪ ಪ್ಲೀಸಿಂಗ್ ಆಗಿ ಇಟ್ಟರೆ ಒಳ್ಳೆಯದು. ಆಗ ಮನೆಯ್ಲಿರುವವರ ನಡುವಿನ ಮಾತು-ಕತೆಗಳು ಸುಗಮವಾಗಿರುತ್ತವೆ.