27.7 C
Bengaluru
Sunday, February 2, 2025

ಮನೆಯ ಗೋಡೆಗಳು ಬಿರುಕು ಬಿದ್ದರೆ ಯಾವ ಸಮಸ್ಯೆಗಳು ಎದುರಾಗಬಹುದು..?

ಬೆಂಗಳೂರು, ಫೆ. 16 : ಮನೆಯ ಗೋಡೆಗಳಲ್ಲಿ ಬಿರುಕು ಬೀಳುವುದು ಶುಭವಲ್ಲ. ಅದರಲ್ಲೂ ಮುಖ್ಯವಾಗಿ ದಕ್ಷಿಣದ ಕಡೆ, ಪಶ್ಚಿಮದ ಕಡೆಗಳಲ್ಲಿ ಎಚ್ಚರವಹಿಸಬೇಕು. ಯಾಕೆಂದರೆ ಈ ಭಾಗದ ಕಡೆಗಳಲ್ಲಿ ಭಾರವನ್ನು ಹೆಚ್ಚಿಡುವುದರಿಂದ ಗೋಡೆಗಳನ್ನು, ಪಿಲ್ಲರ್ ಗಳನ್ನು ದಪ್ಪವಾಗಿ ನಿರ್ಮಾಣ ಮಾಡಬೇಕು. ಹಾಗಂತ ಕೇವಲ ದಕ್ಷಿಣದ ಕಡೆ ಹಾಗೂ ಪಶ್ಚಿಮದ ದಿಕ್ಕು ಮಾತ್ರವಲ್ಲ. ಯಾವ ದಿಕ್ಕಿನಲ್ಲೂ ಗೋಡೆಗಳು ಬಿರುಕು ಬೀಳಬಾರದು. ಕೆಲವೊಮ್ಮೆ ಸಾಮಾನ್ಯವಾಗಿ ಹೇಗಿದ್ದರೂ ಮನೆಗೆ ನೆಗೆಟಿವ್ ಎನರ್ಜಿಗಳು ಬರುವ ಋಣವಿದ್ದರೆ ವಾಸ್ತು ಪ್ರಕಾರ ಹೇಗೆ ಮನೆ ಕಟ್ಟಿದರೂ ಏನೂ ಮಾಡುವುದಕ್ಕೆ ಆಗುವುದಿಲ್ಲ.

ನಮಗೆ ಸಮಸ್ಯೆಯಾಗುವುದಾದರೆ, ಕೆಲ ದಿಕ್ಕುಗಳಲ್ಲಿ ಸಾಮಾನ್ಯವಾಗಿ ಆಯಾ ದಿಕ್ಕುಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ದಕ್ಷಿಣ ದಿಕ್ಕಿನಲ್ಲಿ ಗೋಡೆಗಳಾಗಲಿ ಅಥವಾ ಕಾಂಪೌಂಡ್ ಗೋಡೆಗಳಾಗಲಿ ಬಿರುಕು ಕಾಣಿಸಿಕೊಳ್ಳುತ್ತವೆ. ಇಂಥಹ ದಿಕ್ಕುಗಳಲ್ಲಿ ಬಿರುಕು ಬಿದ್ದರೆ, ಮನೆಯ ಗಂಡಸರಿಗೆ ಮೃತ್ಯು ಸಂಭವಿಸುವ ಸಾಧ್ಯತೆ ಇರುತ್ತದೆ. ಜೊತೆಗೆ ಗಂಡಸರಿಗೆ ದೊಡ್ಡ ಮಟ್ಟದಲ್ಲಿ ಅಪಘಾತವೂ ಸಂಭವಿಸಬಹುದು. ಇನ್ನು ಪೂರ್ವದಲ್ಲಿ ತಂದೆಗೆ ಸಂಬಂಧವಿರುತ್ತೆ. ವಾಯುವ್ಯದಲ್ಲಿ ಬಿರುಕು ಬಿದ್ದರೆ ಅದು ತಾಯಿಗೆ ಸಂಬಂಧಪಡುತ್ತದೆ. ಈಶಾನ್ಯದಲ್ಲಿ ಮನೆಯ ಹೆಣ್ಣುಮಕ್ಕಳಿಗೆ, ನೈರುತ್ಯದಲ್ಲಿ ಮನೆಯ ಯಜಮಾನನಿಗೆ ಹೀಗೆ ಸಂಬಂಧ ಪಟ್ಟಿರುತ್ತದೆ.

ಪೂರ್ವದಲ್ಲಿ ಬಿರುಕು ಬಿದ್ದರೆ, ಮನೆಯಲ್ಲಿ ತಂದೆ ಸ್ಥಾನದಲ್ಲಿರುವವರಿಗೆ ತೊಂದರೆ ಆಗುತ್ತದೆ. ಆರೋಗ್ಯದ ಏರುಪೇರಾಗುತ್ತದೆ. ದಕ್ಷಿಣದಲ್ಲಿ ಇರುಕು ಬಿದ್ದರೆ, ಮನೆಯ ಗಂಡು ಸಂತಾನಕ್ಕೆ ತೊಂದರೆ ಯಾಗುತ್ತದೆ. ವಾಯುವ್ಯದಲ್ಲಾದರೆ ಯಜಮಾನನ ತಾಯಿಗೆ ಸಮಸ್ಯೆಯಾಗುತ್ತದೆ. ಈಶಾನ್ಯದಲ್ಲಿ ಬಿರುಕು ಕಾಣಿಸಿಕೊಂಡರೆ ಮನೆಯಲ್ಲಿ ಯಾರೂ ಒಬ್ಬರಿಗೊಬ್ಬರು ಸರಿಯಾಗಿ ಸ್ಪಂದಿಸುವುದಿಲ್ಲ. ಇದರಿಂದ ಮನೆಯ ನೆಮ್ಮದಿ ಹಾಳಾಗುತ್ತದೆ. ಹೀಗಾಗಿ ಮನೆಯ ಯಾವ ದಿಕ್ಕಿನಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಬೇಕಾಗುತ್ತದೆ.

ಇನ್ನು ಬಿರುಕು ವರ್ಟಿಕಲ್ ಆಗಿ ಬಂದಿದೆಯಾ ಅಥವಾ ಹಾರಿಝಾಂಟಲ್ ಆಗಿದೆಯಾ ಎಂಬ ಬಗ್ಗೆಯೂ ಗಮನಿಸಬೇಕಾಗುತ್ತದೆ. ಕೆಳಗಿನಿಂದ ಮೇಲೆ ಬಿರುಕು ಬಿದ್ದಿದ್ದರೆ, ಅದು ಹೆಚ್ಚಿನ ಅಶುಭವನ್ನು ತೋರಿಸುತ್ತದೆ. ಇನ್ನು ಭೂಮಿ ಕೊಂಚ ಏನಾದರೂ ಕೆಳಗಿಳಿದಾಗ ಹಾರಿಝಾಂಟಲ್ ಕ್ರ್ಯಾಕ್ಸ್ ಗಳು ಬಿದ್ದೆ ಬೀಳುತ್ತವೆ. ಇದು ಕಟ್ಟಡ ನಿರ್ಮಾಣ ಮಾಡುವಾಗ ಆದ ಸಮಸ್ಯಗಳಿಂದ ಮೂಡಿದೆಯಾ, ಭೂಮಿ ಕೆಳಗಿಳಿದ ಕಾರಣ ಬಿರುಕು ಬಿದ್ದಿದೆಯಾ ಇಲ್ಲವೇ ಮನುಷ್ಯನ ಕರ್ಮದಿಂದ ಬಿರುಕು ಬಿದ್ದಿದೆಯಾ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಆಗ ಮಾತ್ರವೇ ಇದಕ್ಕೆ ಪರಿಹಾರವನ್ನು ಸೂಚಿಸಲಾಗುತ್ತದೆ. ಇಲ್ಲದೇ ಹೋದಲ್ಲಿ ಸುಖಾಸುಮ್ಮನೆ ಯಾವುದ್ಯಾವುದೋ ಪರಿಹಾರಗಳನ್ನು ಸೂಚಿಸುವುದಾಗಲೀ, ಹೆದರಿಸುವುದಾಗಲಿ ಒಳ್ಳೆಯದಲ್ಲ

Related News

spot_img

Revenue Alerts

spot_img

News

spot_img