ಬೆಂಗಳೂರು, ಜೂ. 28 : ಬಾಡಿಗೆ ಮನೆಯಲ್ಲಿದ್ದರೆ, ಸದಾ ಒಂದಲ್ಲ ಒಂದು ಸಮಸ್ಯೆಗಳು ಬರುತ್ತಲೇ ಇರುತ್ತವೆ. ಆದರೆ, ಸ್ವಂತ ಮನೆಯಲ್ಲಿ ಇರೋಣ ಎಂದರೆ, ನಗರಗಳಲ್ಲಿ ಸ್ವಂತ ಮನೆಯನ್ನು ಖರೀದಿಸುವುದು ಸುಲಭದ ಮಾತೇನಲ್ಲ. ಈಗಂತೂ ಕೋವಿಡ್ ನಂತರದಿಂದ ಭೂಮಿ ಬೆಲೆ ಕೈಗೆಟುಕದಷ್ಟು ಎತ್ತರಕ್ಕೆ ಜಿಗಿದಿದೆ. ಇನ್ನು ಇದರ ಬೆನ್ನಲ್ಲೇ ಬಾಡಿಗೆ ಬೆಲೆಯನ್ನು ಮಾಲೀಕರು ಹೆಚ್ಚಿಸಿರುವುದು ಹಿಡುವಳಿದಾರರಿಗೆ ಸಂಕಷ್ಟ ಎದುರಾಗಿದೆ. ಇನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಲಾಗುತ್ತದೆ.
ಆದರೆ, ಭಾರತದ ಪ್ರತಿಯೊಂದು ರಾಜ್ಯದಲ್ಲೂ ಬಾಡಿಗೆ ಹೆಚ್ಚಿಸುವ ವಿಚಾರಕ್ಕೆ ಕಾನೂನುಗಳನ್ನು ಮಾಡಲಾಗಿದೆ. ಹಾಗಾದರೆ, ಕಾನೂನಿ ಪ್ರಕಾರ ಯಾವ ರಾಜ್ಯದಲ್ಲಿ ಎಷ್ಟು ಬಾಡಿಗೆ ಮೊತ್ತವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ.
ಬಾಡಿಗೆ ನಿಯಂತ್ರಣ ಕಾಯ್ದೆ ಅನ್ನು ದೆಹಲಿಯಲ್ಲಿ 2009ರಲ್ಲೇ ಜಾರಿಗೆ ತರಲಾಗಿದೆ. ಅದರಂತೆ, ದೆಹಲಿಯಲ್ಲಿ ಬಾಡಿಗೆದಾರರು ಒಂದೇ ಮನೆಯಲ್ಲಿ ಹೆಚ್ಚು ಸಮಯ ವಾಸವಿರುತ್ತಾರೆ ಎನ್ನುವುದಾದರೆ, ಮಾಲೀಕರು ವಾರ್ಷಿಕವಾಗಿ ಗರಿಷ್ಠ ಶೇಕಡ 7% ನಷ್ಟು ಮಾತ್ರ ಬಾಡಿಗೆಯನ್ನು ಹೆಚ್ಚಿಸಬೇಕು. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಕೇಳಿದರೆ, ಬಾಡಿಗೆದಾರ ದೂರು ಸಲ್ಲಿಸಲು ಅವಕಾಶವಿದೆ. ಇನ್ನು ಹಳೆಯ ಬಾಡಿಗೆದಾರ ಮನೆಯನ್ನು ಖಾಲಿ ಮಾಡಿದ ಬಳಿಕ ಮಾಲೀಕರಿಗೆ ಬಾಡಿಗೆ ಮೊತ್ತವನ್ನು ಹೆಚ್ಚಿಸುವ ಹಕ್ಕು ಇದೆ.
ಉತ್ತರ ಪ್ರದೇಶದಲ್ಲೂ ಬಾಡಿಗೆ ನಿಯಂತ್ರಣ ಕಾಯಿದೆ ಇದೆ. ಇಲ್ಲಿ ಭೂ ಮಾಲೀಕರು ಬಾಡಿಗೆ ಹಣವನ್ನು ಶೇ. 5 ರಷ್ಟು ಮಾತ್ರವೇ ಹೆಚ್ಚಿಸಬಹುದು. ಕಮರ್ಷಿಯಲ್ ಕಟ್ಟಡಗಳಲ್ಲಿ ಬಾಡಿಗೆಯನ್ನು ಶೇ. 7 ರಷ್ಟು ಹೆಚ್ರಚಿಸಲು ಅವಕಾಶವಿದೆ. ಇಲ್ಲಿ ಎರಡು ತಿಂಗಳು ಬಾಡೆಇಗೆಯನ್ನು ಕಟ್ಟದೇ ಹೋದರೆ, ಮನೆಯನ್ನು ಖಾಲಿ ಮಾಡಿಸುವ ಹಕ್ಕು ಭೂ ಮಾಲೀಕರಿಗೆ ಇದೆ. ಮಹಾರಾಷ್ಟ್ರದಲ್ಲಿ ಕೇವಲ ಶೇ.4 ನಷ್ಟು ಮಾತ್ರ ಬಾಡಿಗೆಯನ್ನು ಹೆಚ್ಚಿಸಲು ಅವಕಾಶ ನೀಡಲಾಗಿದೆ.