14.2 C
Bengaluru
Wednesday, January 22, 2025

ಮನೆ ವಾಸ್ತು ಪ್ರಕಾರ ಇಲ್ವ…? ಚಿಂತೆ ಬೇಡ ಹೀಗೆ ಮಾಡಿ ಸಾಕು

ಭಾರತದಲ್ಲಿ ಶೇ. ೯೦ ರಷ್ಟು ಜನ ವಾಸ್ತು ಪ್ರಕಾರ ಮನೆಯನ್ನು ಕಟ್ಟುತ್ತಾರೆ. ಆದರೆ ಕೆಲವೊಬ್ಬರು ವಾಸ್ತು ಪ್ರಕಾರ ಕಟ್ಟಿರುವುದಿಲ್ಲ. ನೀವೇನಾದರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರ ..? ನಿಮ ಮನೆಯನ್ನು ವಾಸ್ತು ಪ್ರಕಾರ ಕಟ್ಟದಿದ್ದರೆ ಚಿಂತೆ ಬೇಡ ಎಲ್ಲದ್ದಕ್ಕು ಒಂದು ಪರಿಹಾರ ಇರಲೇಬೇಕಲ್ಲವೇ. ಮೊದಲಿಗೆ ನಿಮ್ಮ ಮನೆಯನ್ನು ಅಲಂಕರಿಸಲು ವಾಸ್ತು ಪ್ರಕಾರದ ವಸ್ತುವನ್ನು ತನ್ನಿ. ಅರೋವಾನಾ ಮೀನು ಒಂದು ಅದ್ಭುತ ಜೀವಿ. ಇದು ಮಾನವಕುಲಕ್ಕೆ ಹೊಂದಿಕೊಂಡಿದೆ. ನೀರಿನಲ್ಲಿ ವಾಸಿಸುವ ಎಲ್ಲಾ ಜೀವಿಗಳಲ್ಲಿ ಅರೋವಾನಾ ಮೀನು ಹೆಚ್ಚು ಬಲಶಾಲಿ ಯಾಗಿದೆ. ವಾಸ್ತು ಪ್ರಕಾರ ಅರೋವನ ಮೀನನ್ನು ಮಂಗಳಕರವೆಂದು ಹೇಳಲಾಗಿದೆ. ಅರೋವಾನಾ ನಿಮಗೆ ಸಾಲವನ್ನು ತೀರಿಸುವ ಶಕ್ತಿಯನ್ನು ನೀಡುತ್ತದೆ. ನಿಮ್ಮ ಗುರಿ ತಲುಪಲು ಚುರುಕುಗೊಳಿಸಿತ್ತದೆ. ಮನೆಯ ಸಂಪತ್ತಿನ ಸಂಕೇತ ಎಂದು ಹೇಳಲಾಗಿದೆ. ಶಾಂತಿ, ಆರೋಗ್ಯ, ನೆಮ್ಮದಿಗೆ ಕಾರಣವಾಗಿದೆ. ಅರೋವಾನಾ ಮೀನು ರಕ್ಷಣೆಯ ಸಂಕೇತ ದೂರದೃಷ್ಟಿ , ಬುದ್ದಿವಂತಿಕೆ ಮತ್ತು ಮಂಗಳಕರ ಸಂಕೇತಕೂಡ ಹೌದು.

ಅರೋವಾನಾ ಮೀನಿನ ಪ್ರಯೋಜನ:

* ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಚಿನ್ನದ ಅರೋವನ ಮೀನಿನ ಪ್ರತಿಮೆಯನ್ನು ಇಟ್ಟರೆ ಒಳ್ಳೆಯದು
* ಅರೋವಾನಾ ಮೀನಿನ ಪ್ರತಿಮೆಯು ಸಕಾರತ್ಮಕ ಶಕ್ತಿಯ ಸಂಕೇತ
* ಹೊಸದಾಗಿ ವ್ಯಾಪಾರ ವೃತ್ತಿ ಜೀವನ ಪ್ರಾರಂಭಿಸಲು ಅರೋವನ ಮೀನಿನ ಪ್ರತಿಮೆ ಇಟ್ಟುಕೊಳ್ಳುವುದು ಉತ್ತಮ
* ಅರೋವಾನಾ ಮೀನು ಪ್ರತಿಮೆ ನಿಮಗೆ ಮತ್ತು ನಿಮ್ಮ ಕುಟುಂಬದ ನೆಮ್ಮದಿಗೆ ಕಾರಣವಾಗುತ್ತದೆ.
* ಅರೋವಾನಾ ಮೀನು ವಯಕ್ತಿಕ ಬೆಳವಣಿಗೆ ಮತ್ತು ಉತ್ತಮ ಹಣ ಮಾಡಲು ಅವಕಾಶ ಮಾಡಿಕೊಡುತ್ತದೆ.
* ಶಕ್ತಿ ರಕ್ರಣೆಯನ್ನು ಒದಗಿಸಲು ಮತ್ತು ನಮ್ಮ ಹರಿವನ್ನು ಬೆಂಬಲಿಸುತ್ತದೆ

Related News

spot_img

Revenue Alerts

spot_img

News

spot_img