ಆಸ್ತಿಗಳ ಮಾರಾಟ ಮತ್ತು ಖರೀದಿ ವಿಷಯದಲ್ಲಿ ಎಷ್ಟು ಜಾಗರೂಕರಾಗಿದ್ದರು ಕೂಡ ಪದೇಪದೇ ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೂ ನ್ಯಾಯಾಲಯಗಳಲ್ಲಿ ಇದೇ ವಿಚಾರವಾಗಿ ಅನೇಕ ಧಾವೇಗಳು ಮತ್ತು ಪೊಲೀಸ್ ಠಾಣೆಗಳನ್ನು ಕೂಡ ದೂರುಗಳು ದಾಖಲಾಗುತ್ತಿವೆ.
ಆಸ್ತಿ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಕೂಡ ಮುಖ್ಯ ಪಾತ್ರ ವಹಿಸುವುದರಿಂದ ಮೂಲ ಹಂತದಲ್ಲಿಯೇ ಅದನ್ನು ಗುರುತಿಸಿ ತಡೆಹಿಡಿಯಲು ಸಾಧ್ಯವಾದಷ್ಟು ಅನುಕೂಲಗಳು ಹಾಗೂ ಮುಂಜಾಗ್ರತ ಕ್ರಮಗಳನ್ನು ಕಂದಾಯ ಇಲಾಖೆ ವತಿಯಿಂದ ಭೂಮಾಪನ ಇಲಾಖೆ ಮತ್ತು ಭೂ ದಾಖಲೆ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ.
ಈಗ ಇನ್ನೂ ಒಂದು ಮುಂದೆ ಹೆಜ್ಜೆ ಮುಂದೆ ಹೋಗಿ ಮತ್ತೊಂದು ಹೊಸ ರೂಲ್ಸ್ ಅನ್ನು ಜಾರಿಗೆ ತರುವ ಮೂಲಕ ಇದನ್ನು ಇನ್ನಷ್ಟು ಬಿಗಿ ಬಂದೋ ಬಸ್ತುಗೊಳಿಸುತ್ತಿದ್ದಾರೆ. ಅದೇನೆಂದರೆ ಈಗ ಭಾರತದಲ್ಲಿರುವ ಪ್ರತಿಯೊಬ್ಬರು ಕೂಡ ಪ್ರತ್ಯೇಕ ಆಧಾರ್ ಕಾರ್ಡ್ ಹೊಂದಿರುತ್ತಾರೆ. ಇದೊಂದು ಯೂನಿಕ್ ನಂಬರ್ ಆಗಿದ್ದು ಸದ್ಯಕ್ಕೆ ಭಾರತದಲ್ಲಿ ಅತ್ಯವಶ್ಯಕವಾಗಿರುವ ಒಂದು ಪ್ರಮುಖ ದಾಖಲೆಯಾಗಿದೆ ಎಂದೇ ಹೇಳಬಹುದು.
ಮಕ್ಕಳ ಶಾಲಾ ದಾಖಲಾತಿಯಿಂದ ಹಿಡಿದು ಸರ್ಕಾರದ ಪ್ರತಿಯೊಂದು ಯೋಜನೆಗಳ ಹಾಗೂ ಸರ್ಕಾರೇತರ ಸಂಸ್ಥೆಗಳ ಕೆಲಸ ಕಾರ್ಯಗಳಿಗೂ ಕೂಡ ಆಧಾರ್ ಕಾರ್ಡ್ ಒಂದು ಗುರುತಿನ ಚೀಟಿ ಆಗಿ ಬೇಕು. ಈಗ ಕಂದಾಯ ಇಲಾಖೆಯು ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಮಾರಾಟ ಮತ್ತು ಖರೀದಿದಾರರನ್ನು ಗುರುತಿಸಬೇಕಾದಾರೆ ಆಧಾರ್ ತಂತ್ರಾಂಶವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರವು ಅನುಮತಿ ನೀಡಿದೆ.
ಏಪ್ರಿಲ್ ತಿಂಗಳಿನಲ್ಲಿಯೇ ಇದಕ್ಕೆ ಅಧಿಕೃತ ಅನುಮತಿ ದೊರೆಯುತ್ತಿದ್ದು ಇನ್ನು ಮುಂದೆ ಈ ಕಾರ್ಯಗಳಿಗೆ ಆಧಾರ್ ಕಾರ್ಡ್ ಅಗತ್ಯದ ದಾಖಲೆಯಾಗಿ ಬೇಕೇ ಬೇಕು. ಇದುವರೆಗೆ ಆಸ್ತಿಗಳ ಮಾರಾಟ ಮತ್ತು ಖರೀದಿ ಸಮಯದಲ್ಲಿ ಕೆಲ ಗುರುತಿನ ಚೀಟಿ ಹಾಗೂ ಸಹಿಗಳನ್ನು ಬಳಸಿಕೊಂಡು ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲಾಗುತ್ತಿತ್ತು.
ಆದರೆ ಇದರಿಂದ ನಕಲಿ ಮಾಲೀಕರು ಕೂಡ ಸೃಷ್ಟಿಯಾಗಿ ಮೋಸ ಮಾಡುವ ಸಾಧ್ಯತೆ ಇತ್ತು ಆದರೆ ಆಧಾರ್ ತಂತ್ರಾಂಶವನ್ನು ಇದಕ್ಕೆ ಜೋಡಿಸುವುದರಿಂದ ಇವುಗಳಿಗೆ ಕಡಿವಾಣ ಬಿಡಲಿದೆ ಎನ್ನುವುದನ್ನು ಮನಗಂಡ ಸರ್ಕಾರ ಇಂಥದೊಂದು ಮಹತ್ವದ ಆದೇಶವನ್ನು ನೀಡಿದೆ. ಕೆಲವೊಮ್ಮೆ ಒಂದೇ ಸರ್ವೇ ನಂಬರ್ ನಲ್ಲಿ ಒಂದಕ್ಕಿಂತ ಹೆಚ್ಚು ಮಾಲೀಕರ ಹೆಸರಿದ್ದಾಗ ಆ ಸಮಯದಲ್ಲೂ ಕೂಡ ನಕಲಿ ಮಾಲೀಕರು ಹೆಸರು ಹೇಳಿಕೊಂಡು ಮೋಸ ಮಾಡುತ್ತಿದ್ದರು.
ಆದರೆ ಆಧಾರ್ ತಂತ್ರಾಂಶ ಕಡ್ಡಾಯವಾದರೆ ಇನ್ನು ಮುಂದೆ ಈ ರೀತಿ ಮೋಸ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಸರ್ಕಾರ ಇಂತಹ ಮಹತ್ತರದ ತೀರ್ಮಾನ ಕೈಗೊಂಡಿದೆ. ಶೀಘ್ರದಲ್ಲಿಯೇ ಇದು ಎಲ್ಲೆಡೆ ಜಾರಿಗೆ ಬರಲಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲಾ ಆಸ್ತಿ ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳಲ್ಲಿ ನೋಂದಣಿ ಸಮಯದಲ್ಲಿ ಯಾರಿಂದ ಯಾರಿಗೆ ಆಸ್ತಿ ಮಾರಾಟವಾಯಿತು ಎನ್ನುವುದನ್ನು ಘೋಷಿಸಲು ಆಧಾರ್ ಕಾರ್ಡನ್ನು ಅಗತ್ಯವಾಗಿ ಕೇಳುತ್ತಾರೆ.
ನೋಂದಣಿ ಮತ್ತು ಮುದ್ರಾಂಕದ ತಂತ್ರಾಂಶವನ್ನು ಕೂಡ ಹೊಸ ಮಾದರಿಗೆ ಈಗ ಆಧಾರ್ ಕಾರ್ಡ್ ಕೂಡ ಸೇರಿಸಲು ಸಾಧ್ಯವಾಗುವಂತೆ ಅಪ್ಡೇಟ್ ಮಾಡಲಾಗುತ್ತಿದ್ದು ಸದ್ಯದಲ್ಲೇ ಇದು ಪೂರ್ತಿ ಕೂಡ ಆಗಲಿದೆ. ಸರ್ಕಾರದ ಈ ತೀರ್ಮಾನದ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು.