25.1 C
Bengaluru
Thursday, November 21, 2024

ಮತದಾರರ ಪಟ್ಟಿ ದೃಢೀಕರಣಕ್ಕಾಗಿ ಆಧಾರ್ ಸಂಖ್ಯೆ ಕಡ್ಡಾಯವಲ್ಲ ಚುನಾವಣಾ ಆಯೋಗ

ಮತದಾರರ ಪಟ್ಟಿ ದೃಢೀಕರಣಕ್ಕಾಗಿ ನಾಗರಿಕರು ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಲ್ಲ ಎಂದು ಭಾರತೀಯ ಚುನಾವಣಾ ಆಯೋಗವು(Election Commission)ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ,ಎಲೆಕ್ಟ್ರಾನಿಕ್ ದಾಖಲೆಗಳ ನೋಂದಣಿ ತಿದ್ದುಪಡಿ(Amendment of registration) ನಿಯಮಗಳು 2022ರ ಅಡಿಯಲ್ಲಿ ಆಧಾರ್(Aadhar) ಕಡ್ಡಾಯವಲ್ಲ ಎಂದು ಪ್ರಕಟಿಸಿದೆ. ಮತ್ತು ಇದನ್ನು ಪ್ರತಿಬಿಂಬಿಸಲು ದಾಖಲಾತಿ ನಮೂನೆಗಳಲ್ಲಿ ಸೂಕ್ತ ಸ್ಪಷ್ಟೀಕರಣ ಬದಲಾವಣೆಗಳನ್ನು ನೀಡುವ ಬಗ್ಗೆ ಯೋಚಿಸುತ್ತಿದೆ.ಸುಪ್ರೀಂ ಕೋರ್ಟ್‌ ಪರ ಹಾಜರಾದ ಹಿರಿಯ ವಕೀಲ ಸುಕುಮಾರ್ ಪದ್ಮಜೋಶಿ ಮತ್ತು ವಕೀಲ ಅಮಿತ್ ಶರ್ಮಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠಕ್ಕೆ, ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು 2022 ರ ನಿಯಮ 26-ಬಿ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ ಎಂದು ಹೇಳಿದರು. ಚುನಾವಣಾ ಆಯೋಗವು ನಮೂನೆ-6, 6Bಯಲ್ಲಿ ಬದಲಾವಣೆ ಮಾಡುವುದಾಗಿ ಸುಪ್ರೀಂ ಕೋರ್ಟ್‌ಗೆ(Supremecourt) ತಿಳಿಸಿದೆ. ಆದರೆ ಈಗಾಗಲೇ ಚುನಾವಣಾ ಕಾರ್ಡ್‌ಗಳೊಂದಿಗೆ ಸುಮಾರು 66,23,00,000 ಜನ ಆಧಾ‌ ಕಾರ್ಡ್‌ಗಳನ್ನು ಲಿಂಕ್ ಮಾಡಿದ್ದಾರೆ ಎಂದು ಹೇಳಿದೆ,ಇ-ರೋಲ್‌ನಲ್ಲಿ ನೋಂದಣಿಗಾಗಿ ಇಸಿಐ ಫಾರ್ಮ್‌ಗಳ ನಮೂನೆ 6 (ಹೊಸ ಮತದಾರರಿಗೆ ಅರ್ಜಿ ನಮೂನೆ) ಮತ್ತು ಫಾರ್ಮ್ 6 ಬಿ ಸಮಸ್ಯೆಗಳನ್ನು ಸೂಚಿಸುವ ಮನವಿಯಲ್ಲಿ ಈ ಜವಾಬ್ದಾರಿಯನ್ನು ಕೈಗೊಳ್ಳಲಾಗಿದೆ.

Related News

spot_img

Revenue Alerts

spot_img

News

spot_img