20.5 C
Bengaluru
Tuesday, July 9, 2024

ಅಯೋಧ್ಯೆ ರಾಮಮಂದಿರ ಪ್ರಸಾದ ಎಂದು ಸಿಹಿತಿಂಡಿ ಮಾರಾಟ ಮಾಡಿದ್ದಅಮೆಜಾನ್‌ಗೆ ನೋಟಿಸ್ ಜಾರಿ

# notice has been #issued # Amazon # selling sweets# called Ayodhya #Ram Mandir Prasada

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ (Ram Mandir) ಜನವರಿ 22ರಂದು ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ‘ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್ ಹೆಸರಿನಲ್ಲಿಸಿಹಿತಿಂಡಿಗಳನ್ನು ಮಾರಾಟ ಮಾಡುತ್ತಿದ್ದ ಅಮೆಜಾನ್‌ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್ ಜಾರಿ ಮಾಡಿದೆ.ಎಂದು ವರದಿಯಾಗಿದೆ. ಅಮೆಜಾನ್, ಮೋಸದ ವ್ಯಾಪಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಇದರಿಂದ ಅಮೆಜಾನ್‌ಗೆ 7 ದಿನಗಳಲ್ಲಿ ನೋಟಿಸ್‌ಗೆ ಉತ್ತರಿಸುವ ಸಂಕಷ್ಟ ಎದುರಾಗಿದೆ.ರಾಮಮಂದಿರದ ಪ್ರಸಾದ ಎಂದು ಅಮೆಜಾನ್‌ನಲ್ಲಿ ಸಿಹಿ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಜನರ ದಾರಿ ತಪ್ಪಿಸಲಾಗುತ್ತಿದೆ. ಈ ಕುರಿತು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್‌ ನೀಡಿದೆ. ಸಿಹಿ ತಿನಿಸುಗಳನ್ನೇ ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದ ಎಂಬುದಾಗಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದೆ.ರಘುಪತಿ ತುಪ್ಪದ ಲಾಡು, ಖೊಯಾ ಖೋಬಿ ಲಾಡು, ದೇಸಿ ಹಸುವಿನ ಹಾಲಿನ ಪೇಡಾ ಸೇರಿ ರಾಮಮಂದಿರದ ಪ್ರಸಾದದ ಹೆಸರಿನಲ್ಲಿ ಹಲವು ಸಿಹಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ.ಸಿಸಿಪಿಎ ನೋಟಿಸ್‌ಗೆ ಅಮೆಜಾನ್‌ ಪ್ರತಿಕ್ರಿಯೆ ನೀಡಿದೆ. ಕಾನೂನಾತ್ಮಕವಾಗಿಯೇ ಉತ್ಪನ್ನಗಳನ್ನು ಮಾಡುವುದು ಅಮೆಜಾನ್‌ ನೀತಿಯಾಗಿದೆ. ನಮ್ಮ ನೀತಿಗೆ ವಿರುದ್ಧವಾಗಿ ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಮೆಜಾನ್‌ ವಕ್ತಾರರೊಬ್ಬರು ಸ್ಪಷ್ಟನೆ ನೀಡಿದ್ದಾರೆ

Related News

spot_img

Revenue Alerts

spot_img

News

spot_img