26.6 C
Bengaluru
Friday, November 22, 2024

ಶೀಘ್ರವೆ ನಮ್ಮ ಮೆಟ್ರೋ ಗೆ ಬರಲಿದೆ ಹೊಸ QR ಕೋಡ್ ಆ್ಯಪ್‌

# new QR code #app # coming # metro soon

ಬೆಂಗಳೂರು;ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ (Namma Metro). ಸುರಕ್ಷಿತ ಪ್ರಯಾಣದೊಂದಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಮುಂದಾಗಿದೆ.ಟ್ರಾಫಿಕ್ ಸಮಸ್ಯೆಯಂತೂ ಇಲ್ಲವೇ ಇಲ್ಲ. ಅದಕ್ಕಾಗಿ ಮೆಟ್ರೋ ಕಡೆ ಮುಖ ಮಾಡಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜನರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಬಿಎಂಆರ್‌ಸಿಎಲ್ (BMRCL) ಮುಂದಾಗಿದೆ.ಈಗಾಗಲೇ ನಮ್ಮ ಮೆಟ್ರೋ ಕ್ಯೂಆರ್ ಕೋಡ್ ವ್ಯವಸ್ಥೆಯನ್ನ ಹೊಂದಿದ್ದು,ಕ್ಯೂಆರ್ ಕೋಡ್ ಎಲ್ಲ ಆ್ಯಪ್‌ಗಳಿಗೂ ಸಹಕರಿಸಲ್ಲ.ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಂಕಿಅಂಶಗಳ ಪ್ರಕಾರ, ಕ್ಯೂಆರ್ ಟಿಕೆಟಿಂಗ್ ವ್ಯವಸ್ಥೆಯ ಮಾಸಿಕ ಬಳಕೆದಾರರ ಸಂಖ್ಯೆ ಮೊದಲ ಬಾರಿಗೆ 25 ಲಕ್ಷದ ಗಡಿ ದಾಟಿದೆ. ಪೇಟಿಎಂ, ವಾಟ್ಸಪ್, ಯಾತ್ರಾ ಆ್ಯಪ್‌ಗಳಿಗೆ ಮಾತ್ರ ಕ್ಯೂಆರ್ ಕೋಡ್ (QR Code App) ಸೌಲಭ್ಯವಿದೆ.ಬಿಎಂಆರ್‌ಸಿಎಲ್ ಇದನ್ನ ಯುನಿವರ್ಸೆಲ್ ವೇದಿಕೆಗೆ ತರಲು ನಿರ್ಧರಿಸಿದ್ದು, ಹೊಸ ಆ್ಯಪ್‌ ವ್ಯವಸ್ಥೆಯನ್ನ ಅನುಷ್ಠಾನಗೊಳಿಸಿದೆ.ಈಗಾಗಲೇ ನಮ್ಮ ಮೆಟ್ರೋ ಪ್ರಕಿಯೆ ಶುರು ಮಾಡಿದ್ದು,ಇದು `ಭಾರತ್ ಬಿಲ್ ಪೇ ಸಿಸ್ಟಮ್’(Bharat Bill Pay System’) ಮಾದರಿಯ ಆ್ಯಪ್‌ ಆಗಲಿದೆ.ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆ ಮತ್ತು ಕ್ಯೂಆರ್ ಟಿಕೆಟಿಂಗ್ ವ್ಯವಸ್ಥೆಯ ಮಾಸಿಕ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ,ಬಿಎಂಆರ್‌ಸಿಎಲ್‌ನಿಂದ ದತ್ತಾಂಶವು ಕ್ಯೂಆರ್ ಟಿಕೆಟಿಂಗ್ ಸಿಸ್ಟಂ ಬಳಕೆದಾರರ ಸಂಖ್ಯೆಯು ಪರಿಚಯಿಸಿದಾಗಿನಿಂದ ಸತತವಾಗಿ ಬೆಳೆಯುತ್ತಿದೆ ಎಂದು ತೋರಿಸುತ್ತದೆ. ನವೆಂಬರ್ 2022 ರಲ್ಲಿ ಪ್ರಾರಂಭವಾದಾಗ ಮಾಸಿಕ QR ಕೋಡ್ ಬಳಕೆದಾರರ ಸಂಖ್ಯೆ 2.13 ಲಕ್ಷದಷ್ಟಿತ್ತು, ಜನವರಿ 2023 ರಲ್ಲಿ 5 ಲಕ್ಷ, ಜೂನ್ 2023 ರಲ್ಲಿ 10 ಲಕ್ಷ ಮತ್ತು ಡಿಸೆಂಬರ್ 2023 ರಲ್ಲಿ 25.9 ಲಕ್ಷಕ್ಕೆ ಏರಿತು.

Related News

spot_img

Revenue Alerts

spot_img

News

spot_img