19.8 C
Bengaluru
Monday, December 23, 2024

ನಾಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ’ ನಿಗದಿ

ಬೆಂಗಳೂರು : ಕರ್ನಾಟಕದಿಂದ ಪ್ರತಿದಿನ 3000 ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿರುವ ಹಿನ್ನೆಲೆ ಸೆ.29ಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ದೆಹಲಿಯಲ್ಲಿ ಸಭೆ ಕರೆದಿದ್ದು, ಕಣಿವೆ ರಾಜ್ಯಗಳ ಜಲ ಇಲಾಖೆ ಅಧಿಕಾರಿಗಳು ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಕರ್ನಾಟಕದ ಕಾವೇರಿ ಜಲಾಶಯದಲ್ಲಿ ಒಳಹರಿವಿನ ಪ್ರಮಾಣದ ಕಡಿಮೆಯಿರುವುದರಿಂದ ಜೂ.1ರಿಂದ ಸೆ.25ರ ತನಕ ಶೇ.53 ನೀರಿನ ಕೊರತೆ ಕಂಡುಬಂದಿದೆ. ಹೀಗಿದ್ದರೂ, ಕರ್ನಾಟಕ ಈಗ ಮತ್ತು ತಮಿಳುನಾಡಿಗೆ ಬಿಡುಗಡೆ ಮಾಡಿರುವ ಒಟ್ಟಾರೆ ನೀರಿನ ಪ್ರಮಾಣದಲ್ಲಿ 12 ಟಿಎಂಸಿಯಷ್ಟು,ಈ ಹಿನ್ನೆಲೆ ದೆಹಲಿಯಲ್ಲಿ ಕಾವೇರಿ ನೀರು ಪ್ರಾಧಿಕಾರ ಮಹತ್ವದ ಸಭೆ ನಡೆಸಲಿದೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಲಿದ್ದಾರೆ.ತಮಿಳುನಾಡಿಗೆ ಮತ್ತೆ 18 ದಿನ 3000 ಸಾವಿರ ಕ್ಯೂಸೆಕ್ ನೀರು ಬಿಡಲು ಸರ್ಕಾರಕ್ಕೆ CWRC ಆದೇಶ ಹೊರಡಿಸಿದ್ದು, ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಒಳಹರಿವು ಹೆಚ್ಚಾದಂತೆ ಕರ್ನಾಟಕ 12 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಖಚಿತಪಡಿಸಬೇಕು ಎಂದೂ ಕಾವೇರಿ ನಿಯಂತ್ರಣ ಸಮಿತಿ ತನ್ನ ವರದಿಯಲ್ಲಿ ಸಲಹೆ ನೀಡಿದೆ.

Related News

spot_img

Revenue Alerts

spot_img

News

spot_img