20.5 C
Bengaluru
Tuesday, July 9, 2024

ರಾಜ್ಯ ಸರ್ಕಾರಿ ನೌಕರರ ಹೋರಟದ ನಡುವೆ ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳದ ಬಂಪರ್:

ನವದೆಹಲಿ: ಫೆ 28;7ವೇತನ ಆಯೋಗ ಜಾರಿ ಮಾಡುವಂತೆ ರಾಜ್ಯ ಸರ್ಕಾರಿ ನೌಕರರ ಸರ್ಕಾರದ ವಿರುದ್ದ ಹೋರಟ ನಡೆಸುತ್ತಿದ್ದು, ಇದರ ನಡುವೆಯೇ ಕೆಂದ್ರ ಸರ್ಕಾರಿ ನೌಕರರಿಗೆ ಬಂಪರ್ ವೇತನ ಏರಿಕೆಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯವಾಗಿ ಅವರ ಕನಿಷ್ಟ ಮಾಸಿಕ ವೇತನ 18,000 ರೂ ನಿಂದ 26,000 ರೂ ಗೆ ಏರಿಕೆಯಾಗುವ ಸಾಧ್ಯತೆ ಇದೆ. ಹೋಳಿ ಹಬ್ಬಕ್ಕೆ ಮುನ್ನ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಹಿ ಸುದ್ದಿಯಿದು. ಕೆಲ ದಿನಗಳಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆ ಮತ್ತು ಫಿಟ್ ಮೆಂಟ್ ಫ್ಯಾಕ್ಟರ್ ಅಡಿಯಲ್ಲಿ ಕನಿಷ್ಟ ವೇತನವನ್ನು ಏರಿಸುವ ಸಾಧ್ಯತೆ ಇದೆ.

ತುಟ್ಟಿ ಭತ್ಯೆ ಹೆಚ್ಚಳದ ನಿರೀಕ್ಷೆ:
ಕೇಂದ್ರ ಸಚಿವ ಸಂಪುಟ ಸಭೆ ಮಾರ್ಚ್ 1 ರಂದು ನಡೆಯಲಿದ್ದು ವೇತನ ಏರಿಗೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸುದೀರ್ಘ ಕಾಲದಿಂದ ಉದ್ಯೋಗಿಗಳು ಡಿಎ ಏರಿಕೆತೆ ಒತ್ತಾಯಿಸುತ್ತಿದ್ದಾರೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ಡಿ ಎ ಮತ್ತು ಡಿ.ಆರ್ ಅನ್ನು ವರ್ಷಕ್ಕೆ ಎರಡು ಸಲ ಏರಿಸುತ್ತದೆ. ಜನವರಿ ಹಾಗೂ ಜುಲೈ ನಲ್ಲಿ ಇದು ನಡೆಯುತ್ತದೆ. ಆದರೆ ಈ ಹಿಂದೆ ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ ತುಟ್ಟಿ ಭತ್ಯೆಯನ್ನು ಏರಿಸಿತ್ತು. ಇದೇ ಟ್ರೆಂಡ್ ಅನ್ನು ಸರ್ಕಾರ ಅನುಸಿರಿಸಿದರೆ 2023 ರ ಮಾರ್ಚ್ ನಲ್ಲಿ ತುಟ್ಟಿ ಭತ್ಯೆ ಏರಿಕೆಯಾಗಲಿದೆ.

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಡಿಎ ಬೇಡಿಕೆಯನ್ನು ಪೂರೈಸಿದರೆ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ವೇತನ ತನ್ನಿಂತಾನೆ ಹೆಚ್ಚಳವಾಗಲಿದೆ. 4% ಡಿಎ ಹೆಚ್ಚಳವಾದರೆ 38% ರಿಂದ 42% ಏರಿಕೆಯಾಗಲಿದೆ. ಇದರಿಂದ 48 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ 68% ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಹಣಕಾಸು ಸಚಿವಾಲಯವು 7ನೇ ವೇತನ ಆಯೋಗದ ಶಿಫಾರಸ್ಸುಗಳ ಪ್ರಕಾರ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಿಸಿತ್ತು. ಇತ್ತಿಚಿನ ಗ್ರಾಹಕ ದರ ಸೂಚ್ಯಂಕ ಆಧರಿಸಿ ತುಟ್ಟಿಭತ್ಯೆಯ ಪ್ರಮಾಣವನ್ನು ಸರ್ಕಾರ ನಿರ್ಧರಿಸುತ್ತದೆ. ಡಿಎ ಏರಿಕೆ 2023 ರ ಜನವರಿಯಿಂದ ಅನ್ವಯವಾಗಲಿದೆ. ಈ ಹಿಂದೆ 2022 ರ ಸೆಪ್ಟೆಂಬರ್ 28 ರಂದು ತುಟ್ಟಿಭತ್ಯೆಯನ್ನು ಪರಿಷ್ಕರಣೆ ನಡೆದಿತ್ತು. ಅದು 2022 ರ ಜುಲೈ 01 ರಿಂದ ಜಾರಿಯಾಗಿತ್ತು.

ಕನಿಷ್ಟ ವೇತನ 18000 ರೂ ಗಳಿಂದ 26000 ರೂ ಗೆ ಏರಿಕೆ ಸಂಭವ:
ಕೇಂದ್ರ ಸರ್ಕಾರಿ ನೌಕರರಿಗೆ ಫಿಟ್ ಮೆಂಟ್ ಪ್ಯಾಕ್ಟರ್ ಅಡಿಯಲ್ಲಿ ವೇತನ ಪರಿಷ್ಕರಣೆ ಮಾಡಿದರೆ, ಕನಿಷ್ಟ ಮಾಸಿಕ ವೇತನ 18000 ರೂಗಳಿಂದ 26,000 ರೂ ಗೆ ಏರಿಕೆಯಾಗಲಿದೆ. 7ನೇ ವೇತನ ಆಯೋಗದ ಫಿಟ್ ಮೆಂಟ್ ಫಾರ್ಮುಲಾ ಅಡಿಯಲ್ಲಿ ಕನಿಷ್ಟ ವೇತನ ಪರಿಷ್ಕರಣೆ ಸನ್ನಿಹಿತವಾಗಿದೆ. ಈ ಎರಡು ವಿಧದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳ ವೇತನ ಪರಿಷ್ಕರಭೆಯು ಹೋಳಿ (ಮಾರ್ಚ್ 8) ಹಬ್ಬದ ಬಳಿಕ ನಡೆಯಲಿದೆ ಎಂದು ವರದಿಯಾಗಿದೆ. ಪ್ರಸ್ತುತ ಫಿಟ್ ಮೆಂಟ್ ಫ್ಯಾಕ್ಟರಿ 2.57 ಪರ್ಸೆಟ್ ನಷ್ಟಿದೆ. ಅಂದರೆ ಕೇಂದ್ರ ಸರ್ಕಾರಿ ಉದ್ಯೋಗಿಯೊಬ್ಬನ ಮೂಲವೇತನವು 4200 ಗ್ರೇಡ್ ಪೇ ಅಡಿಯಲ್ಲಿ 15,500 ರೂ ಇದ್ದರೆ, ಒಟ್ಟು ಮಾಸಿಕ ವೇತನ 15,500-2,57 ಅಥವಾ 38,835 ರೂ ಆಗಲಿದೆ. ಉದ್ಯೋಗಿಗಳು ಈಗ ಫಿಟ್ ಮೆಂಟ್ ಫ್ಯಾಕ್ಟರ್ ಅನ್ನು 3.68 ಕ್ಕೆ ಏರಿಸಲೂ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸುಗಳು ಜಾರಿಯಾದರೆ ಸರ್ಕಾರಿ ಉದ್ಯೋಗಿಗಳು ಕೇಂದ್ರದ ನೌಕರರಂತೆ ಸಂಬಳ ಪಡೆಯುವ ಸಾಧ್ಯತೆಯಿದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಕಳೆದ ಜನವರಿಯಲ್ಲಿ ಬಿಡುಗಡೆಗೊಳಿಸಿರುವ ಪರಿಷ್ಕೃತ HRA ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರಿ ಉದ್ಯೋಗಿಯೊಬ್ಬರು ಮತ್ತೊಂದು ಸರ್ಕಾರದ ವಸತಿ ವ್ಯವಸ್ಥೆ ಹೊಂದಿದ್ದರೆ, ಕೇಂದ್ರದ HRA ಸಿಗುವುದಿಲ್ಲ. ಮಗ, ಮಗಳು, ಪೋಷಕರಿಗೆ ಸಿಕ್ಕಿರುವ ಸರ್ಕಾರಿ ವಸತಿಯಲ್ಲಿ ಇದ್ದರೆ, ಕೇಂದ್ರದ HRA ಸಿಗುವುದಿಲ್ಲ. ಸಾರ್ವಜನಿಕ ವಲಯದ ಸ್ವಾಯತ್ತ ಸಂಸ್ಥೆಗಳು, ಅರೆ -ಸರ್ಕಾರಿ ಸಂಸ್ಥೆಗಳ ಮೂಲಕ ವಸತಿ ಪಡೆದಿದ್ದರೂ, ಕೇಂದ್ರದ HRA ಸಿಗುವುದಿಲ್ಲ.

Related News

spot_img

Revenue Alerts

spot_img

News

spot_img