ನಗರದ ಸಂಚಾರ ದಟ್ಟಣೆ ನಿರ್ವಹಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ನಮ್ಮ ಮೆಟ್ರೋ ಮತ್ತು ಉಪನಗರ ಯೋಜನೆಗೆ ಬರೋಬ್ಬರಿ 30,000 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ,ಕರ್ನಾಟಕದ 2023-24ನೇ ಹಣಕಾಸು ವರ್ಷದ ಬಜೆಟ್ ನಲ್ಲಿ ಬೆಂಗಳೂರಿನ ನಮ್ಮ ಮೆಟ್ರೋಗೆ 30,000 ಕೋಟಿ ರೂಪಾಯಿ ಅನುದಾನ ಸಿಗಲಿದೆ.ಮೆಟ್ರೋ ಮಾರ್ಗ ವಿಸ್ತರಣೆಗಾಗಿ 16,328 ಕೋಟಿ ರೂ. ಮೀಸಲಿಡಲಾಗಿದೆ. ಹೊಸಳ್ಳಿ-ಕಡಬಗೆರೆ-ಪಶ್ಚಿಮ ಒಆರ್ ಆರ್ 45 ಕಿಮೀ ಮಾರ್ಗಗ ವಿಸ್ತತ ಯೋಜನೆಗೆ ನಿರ್ಧರಿಸಲಾಗಿದೆ.ಮೂರು ವರ್ಷಗಳಲ್ಲಿ ಈಗಿರುವ 70 ಕಿಮೀ ಮೆಟ್ರೋ ಸಂಪರ್ಕ ಜಾಲವನ್ನು 176 ಕಿಮೀಗೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. 2026ರಲ್ಲಿ ವಿಮಾನ ನಿಲ್ದಾಣ ಮೆಟ್ರೋ ಲೈನ್ ಕಾರ್ಯರಂಭ, 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಮೇಲ್ದರ್ಜೆಗೆ 1,411 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.ಬೈಯಪ್ಪನಹಳ್ಳಿಯಿಂದ ಕೆಆರ್ ಪುರಂ, ಕೆಂಗೇರಿಯಿಂದ ಚಲ್ಲಘಟ್ಟ ಮತ್ತು ನಾಗಸಂದ್ರದಿಂದ ಮಾದಾವರ ಭಾಗಕ್ಕೆ ನೂತನ ಮೆಟ್ರೋವನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.