25.4 C
Bengaluru
Saturday, July 27, 2024

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಏ.11 ಕೊನೆ ದಿನ

ಬೆಂಗಳೂರು;ಭಾರತವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಮತದಾನದ ಹಕ್ಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅರ್ಹ ಪ್ರಜೆಗಳು ತಮ್ಮ ಹಕ್ಕನ್ನು ಚಲಾಯಿಸುವುದು ಪ್ರತಿಯೊಬ್ಬ ಯುವಕರ ಕರ್ತಯ್ಯ ಆಗಿದೆ. ಒಂದು ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸಲು ಅರ್ಹತೆಯನ್ನು ಪಡೆದ ಅರ್ಹ ನಾಗರಿಕರ ಪಟ್ಟಿಯನ್ನು ಮತದಾರರ ಪಟ್ಟಿ ಎಂದು ಕರೆಯುತ್ತೇವೆ. ಮತದಾರರ ಪಟ್ಟಿಯನ್ನು ವಿಧಾನ ಸಭಾ ಕ್ಷೇತ್ರವಾರು ಸಿದ್ಧಪಡಿಸಲಾಗುತ್ತದೆ. ಯಾವುದೇ ಒಂದು ವಿಧಾನ ಸಭಾ ಕ್ಷೇತ್ರಕ್ಕೆ ಮತದಾರರ ಪಟ್ಟಿಯನ್ನು ಮತಗಟ್ಟೆಗಳಿಗೆ ತಕ್ಕಂತೆ ಭಾಗಗಳಾಗಿ ವಿಂಗಡನೆ ಮಾಡಲಾಗುತ್ತದೆ.

18 ವರ್ಷ ಮೇಲ್ಪಟ್ಟವರು ಮತದಾರರಾಗಲು ಅರ್ಹರು,ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ ಇದರ ಬೆನ್ನಲ್ಲೇಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಭಾರತೀಯ ಪ್ರಜೆ 18 ವರ್ಷ ದಾಟಿದರೆ ಮತದಾನ ಮಾಡಲು ಅರ್ಹ. 2004ರಲ್ಲಿ ಜನಿಸಿದ ಪ್ರತಿಯೊಬ್ಬರೂ 2023ರ ಏಪ್ರಿಲ್ 1 ಕ್ಕೆ 18 ವರ್ಷ ಪೂರ್ಣಗೊಳಿಸಿದವರೂ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಇದರ ನಡುವೆಯೂ ಯುವ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಜಿಲ್ಲಾಡಳಿತ ಏ. 11ರ ವರೆಗೆ ಅವಕಾಶ ಕಲ್ಪಿಸಿದೆ.2004ರಲ್ಲಿ ಜನಿಸಿದ ಪ್ರತಿಯೊಬ್ಬರೂ 2023ರ ಏಪ್ರಿಲ್ 1 ಕ್ಕೆ 18 ವರ್ಷ ಪೂರ್ಣಗೊಳಿಸುತ್ತಾರೆ. ಇಂತಹವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು,ವೋಟರ್ ಹೆಲ್ಪ್ಲೈನ್ ಆಯಪ್ ಮೂಲಕ ಆನ್ಲೈನ್ ನೋಂದಣಿ ಕೈಗೊಳ್ಳಬಹುದು,ಯುವಜನರು ತಮ್ಮ ಬೂತ್ ಮಟ್ಟದ ಅಧಿಕಾರಿ ಅಥವಾ ಮತದಾರರ ಸಹಾಯ ಕೇಂದ್ರವನ್ನು ಸಹ ಸಂಪರ್ಕಿಸಬಹುದಾಗಿದೆ. ಇಲ್ಲವಾದಲ್ಲಿ ಸಹಾಯವಾಣಿ 1950 ಸಂಖ್ಯೆಗೆ ಸಂಪರ್ಕಿಸಬಹುದು.ಮತದಾರರ ಪಟ್ಟಿಯಲ್ಲಿನ ನಿಮ್ಮ ನೋಂದಣಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ನಿಮ್ಮ ಎಪಿಕ್ ಸಂಖ್ಯೆಯನ್ನು 9243355223 ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು. ಉದಾ: KAEPIC ಬರೆದ ಬಳಿಕ ಜಾಗ ಬಿಟ್ಟು ನಿಮ್ಮ ಎಪಿಕ್ ಸಂಖ್ಯೆಯನ್ನು ಬರೆಯಬೇಕು. “KAEPIC wzu1234567

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಚುನಾವಣಾ ಗುರುತಿನ ಚೀಟಿ ಪಡೆದು ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ತಮ್ಮ ಹಕ್ಕು ಚಲಾಯಿಸಬೇಕು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ,ಮತದಾನದ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು,ಪ್ರಜೆಗಳಿಗೆ ಮತದಾನವೇ ಬ್ರಹ್ಮಾಸ್ತ್ರವೇ ಆಗಿರುತ್ತದೆ.ಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳಬೇಕು.ಹೆಸರು ಕೈಬಿಟ್ಟಿದ್ದರೆ ಸೇರಿಸಲು ನಮೂನೆ 6ರಲ್ಲಿ, ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಾಗಿದ್ದರೆ ನಮೂನೆ 7ರಲ್ಲಿಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ಪಟ್ಟಿಯನ್ನು ವೆಬ್‌ಸೈಟ್‌ ceokarnataka.nic.in ನಲ್ಲಿ ಪರಿಶೀಲಿಸಬಹುದು

Related News

spot_img

Revenue Alerts

spot_img

News

spot_img