ಕೋಲಾರ/ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾನುವಾರ ಕೋಲಾರಕ್ಕರ ಆಗಮಿಸಲಿದ್ದಾರೆ. ಇಲ್ಲಿ ಜರುಗಲಿರುವ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಬೆಂಗಳೂರಿಗೆ ಆಗಮಿಸಿ ನೆರೆಯ ಕೋಲಾರಕ್ಕೆ ಬೆಳಿಗ್ಗೆ 11 ಗಂಟೆಗೆ ತೆರಳಿ ಜೈ ಭಾರತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ . ಈ ಭಾಷಣದಲ್ಲಿ ಅವರು ಬಿಜೆಪಿಯ ಹಿರಿಯ ನಾಯಕರ ಮೇಲೆ, ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ದಾಳಿ ಮಾಡುವ ನಿರೀಕ್ಷೆಯಿದೆ. ಈ ಹಿಂದೆ ಏಪ್ರಿಲ್ 5 ಮತ್ತು ಏಪ್ರಿಲ್ 9 ರಂದು ಯೋಜಿಸಿದ್ದ ರ್ಯಾಲಿಯನ್ನು ಈಗಾಗಲೇ ಮುಂದೂಡಲಾಗಿದ್ದು. ಇದು ವಿಧಾನಸಭಾ ಚುನಾವಣೆಯ ಘೋಷಣೆಯ ನಂತರ ರಾಜ್ಯಕ್ಕೆ ರಾಹುಲ್ ಅವರ ಎರಡನೇ ಭೇಟಿಯಾಗಿದೆ. ಮಾರ್ಚ್ ನಲ್ಲಿ ರಾಹುಲ್ ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆ ಘೋಷಿಸಲು ರಾಜ್ಯಕ್ಕೆ ಭೇಟಿ ನೀಡಿದ್ದರು.
ಕೋಲಾರದಲ್ಲಿ ರ್ಯಾಲಿ ಮುಗಿದ ನಂತರ ಬೆಂಗಳೂರಿನ ಕಾಂಗ್ರೆಸ್ ಕೇಂದ್ರ ಕಚೇರಿ ಬಳಿಯ ಇಂದಿರಾ ಗಾಂಧಿ ಭವನವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೇ 10 ರಂದು ನಡೆಯಲಿರುವ ಚುನಾವಣೆಗೆ ಮುನ್ನ ಈ ಭಾನುವಾರದ ಅವರ ಭೇಟಿ ಪಕ್ಷಕ್ಕೆ ಮಹತ್ವದ್ದಾಗಿದೆ. ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ರವರು ಎರಡನೇ ಸ್ಥಾನದಿಂದ (ಕೋಲಾರ) ಸ್ಪರ್ಧಿಸಲು ಪಕ್ಷ ಟಿಕೆಟ್ ನಿರಾಕರಿಸಿರುವುದರಿಂದ ರಾಹುಲ್ ಪ್ರತಿಭಟನೆ ಎದುರಿಸಬೇಕಾದ ಪರಿಸ್ಥಿತಿ ಎದರುರಾಗಬುಹುದೆಂದು ಸ್ಥಳಿಯ ಕಾರ್ಯಕರ್ತರು ತಿಳಿಸಿದ್ದಾರೆ.