26.7 C
Bengaluru
Wednesday, February 5, 2025

ವಾಸ್ತು ಪ್ರಕಾರ, ಆಗ್ನೇಯ ಕೋಣೆಯಲ್ಲಿ ಮನೆಯ ಯಜಮಾನ ಮಲಗಬಹುದೇ..?

ಬೆಂಗಳೂರು, ಏ. 15 : ಮನೆಯ ಯಜಮಾನನಿಗೆ ಈಗಾಗಲೇ ಹೇಳಿದಂತೆ ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿ ಮಲಗುವುದು ಉತ್ತಮ. ಅದೇ ಆಗ್ನೇಯ ಕೋಣೆಯಲ್ಲಿ ಮನೆಯ ಯಜಮಾನ ಮಲಗಿದರೆ, ಏನಾಗುತ್ತದೆ ಎಂಬುದು ಪ್ರಶ್ನೆ. ಆಗ್ನೇಯ ಕೋಣೆಯಲ್ಲಿ ಯಜಮಾನ ಮಲಗುವ ಕೋಣೆಯಿದ್ದರೆ, ಅದರಿಂದಾಗುವ ಪ್ರಭಾವ ಏನು ಎಂದು ನೋಡೋಣ. ಆಗ್ನೇಯ ಕೋಣೆಯಲ್ಲಿ ಸಾಮಾನ್ಯವಾಗಿ ಅಡುಗೆ ಮನೆ ಇರಬೇಕು. ಅಡುಗೆ ಮನೆ ಹೆಣ್ಣು ಮಕ್ಕಳ ಸ್ಥಳ.

ಅದೇ ರೀತಿ ಕೆಳಗಡೆ ಆಗ್ನೇಯದಲ್ಲಿ ಅಡುಗೆ ಮನೆಯಿದ್ದು, ಮೇಲೆ ಯಜಮಾನನ ಕೋಣೆ ಇದ್ದರೆ, ಅಲ್ಲಿ ಅತಿಥಿಗಳಿಗೆ ಎಂದು ಕೋಣೆಯನ್ನು ಮೀಸಲಿಡುವುದು ಒಳ್ಳೆಯದು. ಅದೇ ಈ ಕೋಣೆಯಲ್ಲಿ ಯಜಮಾನ ಮಲಗಿದರೆ, ಸಮಸ್ಯೆ ಆಗುತ್ತದೆ. ಆಗ ಮನೆಯಲ್ಲಿ ಯಜಮಾನ ಅತಿಥಿಯಂತೆ ಇರಬೇಕಾಗುತ್ತದೆ. ಪದೇ ಪದೇ ಯಜಮಾನ ಕೆಲಸ ಕಾರ್ಯಗಳ ಮೇಲೆ ಹೊರಗಡೆ ಸುತ್ತಾಡಬೇಕಾGI ಬರಬಹುದು. ಕೆಲಸದಲ್ಲಿ ಕಷ್ಟವಾಗಬಹುದು.

ಇದೆಲ್ಲವೂ ಯಜಮಾನನಿಗೆ ಶುಭವಲ್ಲ. ಆಗ್ನೇಯ ಕೋಣೆಯಲ್ಲಿ ಬೆಂಕಿ ಹಾಗೂ ಅತಿಥಿ ಪ್ರಭಾವ ಇರುತ್ತದೆ. ಯಜಮಾನ ಈ ಖೋಣೆಯಲ್ಲಿ ಮಲಗಿದರೆ, ಆತ ಪದೇ ಪದೇ ಓಡಾಡುತ್ತಿರಬೇಕಾಗುತ್ತದೆ. ಕೆಲಸದ ನಿಮಿತ್ತ ಸದಾ ಮನೆಯಿಂದ ಆಚೆ ಇರುವುದರಿಂದ ಯಜಮಾನನಿಗೆ ಮನೆಯವರೆಗೂ ಇರುವ ಸಂಬಂಧಗಳು ಸಹಜವಾಗಿಯೇ ದೂರ ಆಗಲು ಶುರುವಾಗುತ್ತದೆ. ಹಾಗಾಗಿ ಮನೆಯ ಯಜಮಾನ ಯಾವುದೇ ಕಾರಣಕ್ಕೂ ಆಗ್ನೇಯ ಕೋಣೆಯಲ್ಲಿ ಮಲಗಬಾರದು.

ಮನೆಗೆ ಬರುವ ಅತಿಥಿಗಳಿಗಷ್ಟೇ ಆಗ್ನೇಯದಲ್ಲಿ ಮಲಗಲು ಕೋಣೆಯನ್ನು ನಿರ್ಮಿಸುವುದು ಸೂಕ್ತ. ಇಲ್ಲದೇ ಹೋದರೆ ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯ ಯಜಮಾನನಿಗೆ ಮಾಸ್ಟರ್ ಬೆಡ್ ರೂಮ್ ಅನ್ನು ಆದಷ್ಟು ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸುವುದು ಬಹಳ ಒಳ್ಳೆಯದು. ಇದರಿಂದ ಯಜಮಾನನ ಆರೋಗ್ಯ, ಕೆಲಸ ಹಾಗೂ ಆರ್ಥಿಕ ಪರೀಸ್ಥಿತಿ ಸಮಸ್ಯೆಗೆ ಈಡಾಗುವುದಿಲ್ಲ.

Related News

spot_img

Revenue Alerts

spot_img

News

spot_img