ಹೊಸದಿಲ್ಲಿ: ಕೇಂದ್ರ ಸರ್ಕಾರದ ನಿರ್ಧಾರದಿಂದ ಅನಿಲ ವಿತರಕರು CNG ಮತ್ತು PNG ಬೆಲೆಗಳನ್ನು ಕಡಿಮೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ವಾಹನಗಳಲ್ಲಿ ಸಿಎನ್‌ಜಿ ಬಳಸುತ್ತಾರೆ. ಹಾಗೂ, PNG ಗ್ಯಾಸ್ನ್ನು ಮನೆಗಳಲ್ಲಿ ಬಳಸಲಾಗುತ್ತದೆ.ಮನೆಗಳಲ್ಲಿ ಬಳಕೆಯಾಗುವ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಕೆಯಾಗುವ ಸಿಎನ್‌ಜಿ ಬೆಲೆ ಶೀಘ್ರದಲ್ಲಿಯೇ ಶೇ 6ರಿಂದ 9ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.ದೇಶೀಯ ಅನಿಲದ ಬೆಲೆಯನ್ನು ಇದೀಗ ಅಂತಾರಾಷ್ಟ್ರೀಯ ಹಬ್ ಗ್ಯಾಸ್ ಬದಲಿಗೆ ಆಮದು ಮಾಡಿಕೊಂಡ ಕಚ್ಚಾ ತೈಲದೊಂದಿಗೆ ಜೋಡಿಸಲಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.ಕೇಂದ್ರ ಸಚಿವ ಸಂಪುಟ ನೈಸರ್ಗಿಕ ಅನಿಲದ ದರ ನಿಗದಿಗೆ ಹೊಸ ಅಳತೆಗೋಲು ನಿಗದಿಪಡಿಸಲು ಒಪ್ಪಿಗೆ ನೀಡಿದೆ,
ಕರ್ನಾಟಕದಲ್ಲಿ ತುಮಕೂರು ಸೇರಿದಂತೆ ಹಲವು ನಗರಗಳಿಗೆ ಈಗಾಗಲೇ ಪಿಎನ್‌ಜಿ ಸರಬರಾಜು ಆರಂಭವಾಗಿದೆ. ಪೆಟ್ರೋಲ್-ಡೀಸೆಲ್ ಬೆಲೆಯ ಸತತ ಏರಿಕೆಯ ನಂತರ ಹಲವರು ಸಿಎನ್‌ಜಿ ವಾಹನಗಳ ಖರೀದಿಯತ್ತ ಮುಖ ಮಾಡಿದ್ದರು. ಹೊಸ ದರಗಳು ಜಾರಿಯಾದ ನಂತರ ಬೆಂಗಳೂರಿನಲ್ಲಿ ಪ್ರತಿ ಕೆಜಿ ಸಿಎನ್‌ಜಿ ಬೆಲೆ 83.5 ರೂ, ಒಂದು ಕೆಜಿ ಪಿಎನ್‌ಜಿ ಬೆಲೆ 52 ರೂಪಾಯಿಗೆ ಇಳಿಕೆಯಾಗಲಿದೆ.ತುಮಕೂರು ಸೇರಿದಂತೆ ಕರ್ನಾಟಕದಲ್ಲಿ ಸೇರಿದಂತೆ ಅನೇಕ ನಗರಗಳಿಗೆ ಪಿಎನ್‌ಜಿ ಪೂರೈಕೆ ಆರಂಭವಾಗಿದೆ,ಸತತ ಪೆಟ್ರೋಲ್-ಡೀಸೆಲ್ ಬೆಲೆಯ ಹೆಚ್ಚಳದ ನಂತರ ಸಿಎನ್‌ಜಿ ವಾಹನಗಳ ಖರೀದಿಯತ್ತ ಹಲವರು ಮುಖ ಮಾಡಿದ್ದರು.ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅಂದಾಜಿನಂತೆ ದೇಶಾದ್ಯಂತ ಪಿಎನ್‌ಜಿ ಮತ್ತು ಸಿಎನ್‌ಜಿ ದರಗಳಲ್ಲಿ ಸರಾಸರಿ 6 ರೂಪಾಯಿ ಕಡಿಮೆಯಾಗಲಿದೆ.ಹೊಸ ದರಗಳು ಜಾರಿಯಾದ ನಂತರ ಬೆಂಗಳೂರಿನಲ್ಲಿ ಪ್ರತಿ ಕೆಜಿ ಸಿಎನ್‌ಜಿ ಬೆಲೆ 83.5 ರೂ, ಒಂದು ಕೆಜಿ ಪಿಎನ್‌ಜಿ ಬೆಲೆ 52 ರೂಪಾಯಿಗೆ ಇಳಿಕೆಯಾಗಲಿದೆ.ಹೊಸದರಗಳು ಶನಿವಾರದಿಂದಲೇ ಜಾರಿಗೆ ಬರುವ ಸಾಧ್ಯತೆಯಿದ್ದು, ಗರಿಷ್ಠ ಶೇ 11ರಷ್ಟು ಬೆಲೆ ಇಳಿಕೆ ನಿರೀಕ್ಷಿಸಲಾಗಿದೆ.
ಇನ್ನು, US ಹೆನ್ರಿ ಹಬ್, ಕೆನಡಾ ಮೂಲದ ಆಲ್ಬರ್ಟಾ ಗ್ಯಾಸ್, UK ಆಧಾರಿತ NBP ಮತ್ತು ರಷ್ಯನ್ ಗ್ಯಾಸ್ ಎಂಬ ನಾಲ್ಕು ಜಾಗತಿಕ ಮಾನದಂಡಗಳ ಸರಾಸರಿ ಬೆಲೆಯನ್ನು ತೆಗೆದುಕೊಳ್ಳುವ ಮೂಲಕ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಕೋವಿಡ್-19 ಸಮಯದಲ್ಲಿ ಜಾಗತಿಕವಾಗಿ ಗ್ಯಾಸ್ ಬೆಲೆಗಳು ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿವೆ. ಈ ಹಿನ್ನೆಲೆಯಲ್ಲಿ ದೇಶೀಯ ಬೆಲೆಗಳೂ ಇಳಿಕೆ ಕಂಡಿವೆ.