ಬೆಂಗಳೂರು, ಏ. 07 : ಮನೆಯಲ್ಲಿ ಈಗ ಎಲ್ಲರೂ ಜಿಮ್ ಗೆ ಹೋಗಲು ಬೇಡ ಎನ್ನುವವರು ಮನೆಯಲ್ಲೇ ಜಿಮ್ ರೂಮ್ ಅನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ. ಜಿಮ್ ಹಾಗೂ ವರ್ಕೌಟ್ ಮಾಡುವುದು ದೇಹಕ್ಕೂ ಒಳ್ಳೆಯದು. ದೇಹಕ್ಕೆ ಬಲವನ್ನು ಕೊಡುವಂತಹ ಈ ವ್ಯಾಯಾಮ ಕುಜನ ಅಧೀನದಲ್ಲಿರುತ್ತದೆ. ಹಾಗಾಗಿ ಮಂಗಳನ ದಿಕ್ಕಾದ ದಕ್ಷಿಣ ದಿಕ್ಕಿನಲ್ಲಿ ಇಲ್ಲವೇ ದಕ್ಷಿಣ ಆಗ್ನೇಯ ದಿಕ್ಕಿನಲ್ಲಿ ಜಿಮ್ ಅನ್ನು ಮನೆಯಲ್ಲಿ ಅಳವಡಿಸಿಕೊಳ್ಳಬಹುದು.
ಇನ್ನು ಕೆಲವರು ಜಿಮ್ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಎಂಬ ಕಾರಣದಿಂದ ಪೂರ್ವ ದಿಕ್ಕಿನಲ್ಲಿ ವರ್ಕೌಟ್ ರೂಮ್ ಇದ್ದರೆ ಒಳ್ಳೆಯದು ಎಂದು ಹೇಳುತ್ತಾರೆ. ದಕ್ಷಿಣದಲ್ಲಿ ವರ್ಕೌಟ್ ರೂಮ್ ಅನ್ನು ನಿರ್ಮಾಣ ಮಾಡಿದಾಗ, ಅಲ್ಲಿ ಭಾರ ಇರುವಂತಹ ವಸ್ತುಗಳನ್ನು ಯಾವ ದಿಕ್ಕಿನಲ್ಲಿಡಬೇಕು ಹಾಗೂ ಥ್ರೆಡ್ ಮಿಲ್ ಹಾಗೂ ಸೈಕಲಿಂಗ್ ಎನ್ನುವಂತಹದ್ದನ್ನ ಯಾವ ದಿಕ್ಕಿನಲ್ಲಿ ಹಾಕಿಕೊಳ್ಳಬೇಕು ಎಂಬುದನ್ನು ಮೊದಲು ನೋಡಬೇಕಾಗುತ್ತದೆ. ಜಿಮ್ ಮಾಡುವ ರೂಮ್ ನಲ್ಲಿ ಭಾರ ಇರುವಂತಹ ವಸ್ತುಗಳನ್ನು ದಕ್ಷಿಣದಲ್ಲಿ ಹಾಕಿಕೊಳ್ಳಬೇಕು. ಸೈಕ್ಲಿಂಗ್, ಥ್ರೆಡ್ ಮಿಲ್ ಅನ್ನು ವಾಯುವ್ಯದಲ್ಲಿ ಹಾಕಿಕೊಳ್ಳಬೇಕು.
ಇನ್ನು ಜಿಮ್ ನಲ್ಲಿ ವ್ಯಾಯಾಮವನ್ನು ಮಾಡುವಾಗ ಆದಷ್ಟು ಪೂರ್ವಾಭಿಮುಖ ಇಲ್ಲವೇ ಉತ್ತರಾಭಿಮುಖವಾಗಿ ಮಾಡುವುದು ಬಹಳ ಒಳ್ಳೆಯದು. ಜಿಮ್ ನಲ್ಲಿ ಗಮನದಲ್ಲಿ ಇಟ್ಟುಕೊಳ್ಳಬೇಕಾಗಿರುವುದು ತೂಕ ಎಲ್ಲರಬೇಕು ಎಂಬುದನ್ನು ಗಮನಿಸಬೇಕು. ಬ್ರಹ್ಮ ಸ್ಥಾನದಲ್ಲಿ ಯಾವುದೇ ಭಾರವನ್ನು ಇಡದಂತೆ ನೋಡಿಕೊಳ್ಳಬೇಕು. ಹೀಗೆ ಜಿಮ್ ರೂಮ್ ಅನ್ನು ಕೂಡ ವಾಸ್ತು ಪ್ರಕಾರವಾಗಿ ಇಟ್ಟುಕೊಂಡು ವರ್ಕೌಟ್ ಮಾಡುವುದು ಬಹಳ ಮುಖ್ಯವಾಗುತ್ತದೆ.