26.4 C
Bengaluru
Thursday, December 19, 2024

ಕಾಲೇಜು ವಿದ್ಯಾರ್ಥಿಗಳಿಗೆ ಕ್ರೆಡಿಟ್‌ ಕಾರ್ಡ್‌ ಎಷ್ಟು ಒಳ್ಳೆಯದು..?

ಬೆಂಗಳೂರು, ಏ. 04 : ಕ್ರೆಡಿಟ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವವರ ಸಂಖ್ಯೆ ಬಹಳಾನೇ ಕಡಿಮೆ ಇದೆ. ಎಲ್ಲರೂ ತಮ್ಮಿಷ್ಟದಂತೆಯೇ ಬಳಸುತ್ತಾರೆ. ಕೆಲರಂತೂ ವಂಚನೆ ಕೂಡ ಮಅಡಲು ಯತ್ನಿಸುತ್ತಾರೆ. ಇನ್ನೂ ಕೆಲವರು ಬೇಕಾಬಿಟ್ಟಿಯಾಗಿ ಬಳಸಿ, ಕೊನೆಗೆ ಒಂದು ರೂಪಾಯಿಗೆ ನೂರು ರೂಪಾಯಿ ಅಷ್ಟು ಬಡ್ಡಿಯನ್ನು ಕಟ್ಟಿದ ಉದಾಹರಣೆಗಳೂ ಇವೆ. ಹೀಗಿರುವಾಗ ವಿದ್ಯಾರ್ಥಿಗಳಗೆಂದೇ ಕ್ರೆಡಿಟ್‌ ಕಾರ್ಡ್‌ ಗಳನ್ನು ನೀಡುವುದು ಎಷ್ಟು ಸರಿಯೋ ಗೊತ್ತಿಲ್ಲ. ಈ ಬಗ್ಗೆ ಯಾವುದು ಸರಿ, ಯಾವುದು ತಪ್ಪು ಎಂಬ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಕ್ರೆಡಿಟ್ ಕಾರ್ಡ್ ಸಿಗುತ್ತಾ..? ವಿದ್ಯಾರ್ಥಿಗಳು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದಾ..? ಕ್ರೆಡಿಟ್‌ ಕಾರ್ಡ್ ಅನ್ನು ಬಳಸಿದ ವಿದ್ಯಾರ್ಥಿಗಳು ಹಣ ಮರುಪಾವತಿ ಮಾಡುವುದು ಹೇಗೆ..? ಯಾವ ಬ್ಯಾಂಕ್‌ ಗಳು ವಿದ್ಯಾರ್ಥಿಗಳಿಗೆ ಕ್ರೆಡಿಟ್‌ ಕಾರ್ಡ್‌ ಗಳನ್ನು ನೀಡುತ್ತವೆ..? ಹೀಗೆ ಹಲವು ಪ್ರಶ್ನೆಗಳು ಸಾಕಷ್ಟು ಜನರನ್ನು ಕಾಡುತ್ತಿರುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಯಾವುದೇ ಬ್ಯಾಂಕ್‌ ಗಳು ಕ್ರೆಡಿಟ್‌ ಕಾರ್ಡ್‌ ಅನ್ನು ನೀಡುವುದಿಲ್ಲ. ಹಾಗೊಂದು ವೇಳೆ ನೀಡುವುದಿದ್ದರೂ ಸಾಕಷ್ಟು ನಿಯಮಗಳಿರುತ್ತವೆ. ಕೆಲವೇ ಕೆಲವು ಬ್ಯಾಂಕ್‌ ಗಳು ಮಾತ್ರವೇ ಕ್ರೆಡಿಟ್‌ ಕಾರ್ಡ್‌ ಗಳನ್ನು ಶಿಕ್ಷಣ ಸಾಲ ಪಡೆಯುವುದಕ್ಕಾಗಿ ಮಾತ್ರವೇ ಕ್ರೆಡಿಟ್‌ ಕಾರ್ಡ್‌ ಗಳನ್ನು ನೀಡುತ್ತವೆ. ಇನ್ನೂ ಕೆಲ ಬ್ಯಾಂಕ್‌ ಗಳು ನಿಶ್ಚಿತ ಹಣವನ್ನು ಠೇವಣಿಯಾಗಿಟ್ಟುಕೊಂಡು ಕ್ರೆಡಿಟ್‌ ಕಾರ್ಡ್‌ ಅನ್ನು ನೀಡುತ್ತವೆ. ಇನ್ನು ಕೆಲ ಬ್ಯಾಂಕ್‌ ಗಳಲ್ಲಿ ಪೋಷಕರ ಬಳಿ ಇರುವ ಕ್ರೆಡಿಟ್‌ ಕಾರ್ಡ್‌ ಗೆ ಮಕ್ಕಳಿಗೆಂದು ಆಡ್‌ ಆನ್‌ ಕಾರ್ಡ್‌ ಗಳನ್ನು ನೀಡುತ್ತಾರೆ.

ಅದರಲ್ಲಿ ಕ್ರೆಡಿಟ್‌ ಕಾರ್ಡ್‌ ಪಡೆಯುವ ವಿದ್ಯಾರ್ಥಿಗೆ 18 ವರ್ಷ ವಯಸ್ಸು ಆಗಿರಬೇಕು. ಆತನಿಗೆ ಮಾಸಿಕವಾಗಿ ನಿರ್ದಿಷ್ಟ ಆದಾಯವಿರಬೇಕು. ವಿದ್ಯಾರ್ಥಿ ಬ್ಯಾಂಕ್‌ ನಲ್ಲಿ ವೇತನದ ಚೀಟಿ, ಐ.ಟಿ ವಿವರಗಳನ್ನು ನೀಡಬೇಕು. ಅಂತಹವರು ಕ್ರೆಡಿಟ್‌ ಕಾರ್ಡ್‌ ಗಾಗಿ ಬ್ಯಾಂಕ್‌ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಓದುತ್ತಲೇ ಪಾರ್ಟ್‌ ಟೈಮ್‌ ಕೆಲಸ ಮಾಡುವ ವಿದ್ಯಾರ್ಥಿಗಳಿ ಸುಲಭವಾಗಿ ಕ್ರೆಡಿಟ್‌ ಕಾರ್ಡ್‌ ಗಳು ಲಭ್ಯವಿರುತ್ತವೆ. ಇನ್ನು ವಿದ್ಯಾರ್ಥಿಗಳ ಉಳಿತಾಯ ಖಾತೆಯಲ್ಲಿ ಹಣವಿದ್ದು, ಎಫ್.ಡಿ ಇರುವ ಮೊತ್ತಕ್ಕಿಂತ ಕಡಿಮೆ ಮೊತ್ತದ ಕ್ರೆಡಿಟ್‌ ಕಾರ್ಡ್‌ ಅನ್ನು ಮಾತ್ರವೇ ಒದಗಿಸಲಾಗುತ್ತದೆ.

ಆಡ್‌ ಆನ್‌ ಕಾರ್ಡ್‌ ಗಳಲ್ಲಿ ಹೆಚ್ಚು ಸಮಸ್ಯೆ ಇರುವುದಿಲ್ಲ. ಏಕೆಂದರೆ, ಇದರಲ್ಲಿ ಮಕ್ಕಳು ಎಷ್ಟೇ ಕಾರ್ಡ್‌ ಸ್ವೈಪ್‌ ಮಾಡಿದ್ದರೂ ಕೂಡ ಅದರ ಮೊತ್ತವನ್ನು ಪೋಷಕರೆ ಪಾವತಿಬೇಕು. ಇನ್ನು ವಿದ್ಯಾರ್ಥಿಗಳ ಕ್ರೆಡಿಟ್‌ ಕಾರ್ಡ್‌ ನಲ್ಲಿ ವಿದ್ಯಾರ್ಥಿಗಳು ಮರುಪಾವತಿ ಮಾಡದಿದ್ದಾಗ ಬ್ಯಾಂಕ್‌ ಗಳು ಪೋಷಕರ ಬಳಿ ಹಣ ವಸೂಲಿ ಮಾಡುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳ ಕ್ರೆಡಿಟ್‌ ಸ್ಕೋರ್‌ ಆರಂಬದಲ್ಲೇ ಕುಸಿಯುತ್ತದೆ.

Related News

spot_img

Revenue Alerts

spot_img

News

spot_img