25 C
Bengaluru
Monday, December 23, 2024

ರೂ.20.16 ಕೋಟಿ ಮೌಲ್ಯದ ಇಂಜಾಜ್ ಇಂಟರ್‌ನ್ಯಾಶನಲ್‌ ಸ್ಥಿರ ಆಸ್ತಿಜಪ್ತಿ

ಅಕ್ರಮ ಲೇವಾದೇವಿ ವ್ಯವಹಾರ ಸಂಬಂಧ ನಗರದ ಇಂಜಾಜ್ ಇಂಟರ್‌ನ್ಯಾಷನಲ್ ಹಾಗೂ ಅದರ ಪಾಲುದಾರರಾದ ಮಿಸ್ಬಾವುಬ್ದೀನ್ ಮತ್ತು ಸುಹೀಲ್ ಅಹ್ಮದ್ ಶರೀಫ್ ಎಂಬವರಿಗೆ ಸೇರಿದ 20.16 ಕೋಟಿ ರೂಪಾಯಿ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಠೇವಣಿದಾರರಿಗೆ ವಂಚಿಸಿದ ಆರೋಪದ ಮೇಲೆ ಇಂಜಾಜ್‌ ಇಂಟರ್‌ನ್ಯಾಷನಲ್‌ ವಿರುದ್ಧ ನಗರದ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಇಂಜಾಜ್ ಇಂಟರ್‌ನ್ಯಾಷನಲ್ ಮತ್ತು ಅದರ ಅಂಗಸಂಸ್ಥೆಗಳು ಸಾರ್ವಜನಿಕರಿಗೆ ಅಧಿಕ ಬಡ್ಡಿ, ಆಕರ್ಷಕ ಬಹುಮಾನ ಹಾಗೂ ಇತರೆ ಆಮಿಷಗಳನ್ನೊಡ್ಡಿ ಲಕ್ಷಾಂತರ ರೂ. ಹೂಡಿಕೆ ಮಾಡಿಸಿಕೊಂಡಿತ್ತು. 2015ರಿಂದ 2017ರ ಅವಧಿಯಲ್ಲಿ ನೂರಾರು ಮಂದಿಯಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಆ ಬಳಿಕ ಹೂಡಿಕೆದಾರರಿಗೆ ಬಡ್ಡಿ ಅಥವಾ ಇತರೆ ಸೌಲಭ್ಯಗಳನ್ನು ನೀಡದೆ ವಂಚಿಸಿತ್ತು. ಇದ ಜತೆಗೆ ಸಂಸ್ಥೆಯು, ತನ್ನ ಖಾತೆಯಲ್ಲಿದ್ದ ಸಾರ್ವಜನಿಕರ ಕೋಟ್ಯಂತರ ರೂ.ಅನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದೆ.ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದ ಇ.ಡಿ ತನಿಖೆ ನಡೆಸಿತ್ತುಹೀಗೆ ಸುಮಾರು 80.99 ಕೋಟಿ ರೂ. ವಂಚಿಸಿದೆ,ಸ್ಥಳೀಯ ಪೊಲೀಸರ ತನಿಖೆಯಲ್ಲಿ ಸಂಸ್ಥೆೆ ಅಕ್ರಮ ಹಣಕಾಸು ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಇಡಿ ಅಧಿಕಾರಿಗಳು ಇಸಿಐಆರ್ ತನಿಖೆ ಕೈಗೊಂಡು ವಂಚನೆ ಆರೋಪ ಎದುರಿಸುತ್ತಿರುವ ಸಂಸ್ಥೆೆ ಹಾಗೂ ಅದರ ಪಾಲುದಾರರಿಗೆ ಸೇರಿದ 20.16 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳಾದ ಫ್ಲ್ಯಾಟ್‌ಗಳು, ಭೂಮಿ, ಕೃಷಿಯೇತರ ಜಮೀನುಗಳನ್ನು ಮುಟ್ಟುಗೋಲು ಹಾಕಿ ವಶಕ್ಕೆ ಪಡೆದಿದ್ದಾರೆ.ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

Related News

spot_img

Revenue Alerts

spot_img

News

spot_img