ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ.ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹೊಸ ವರ್ಷದ ಆರಂಭ.“ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು.ಯುಗಾದಿಯು ಹಿಂದೂಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದೆ.
ಯುಗಾದಿಯನ್ನು ತೆಲುಗು ಮತ್ತು ಕನ್ನಡ ಜನರ ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಯುಗಾದಿ ಎಂದರೆ ಬೇವು ಬೆಲ್ಲ ಸವಿಯುತ್ತಾ ವರ್ಷದ ಸಿಹಿ ಕಹಿಗಳೆರಡನ್ನೂ ಸಮಚಿತ್ತದಿಂದ ನೋಡುವ ಧನಾತ್ಮಕ ಮನಸ್ಥಿತಿಯೊಂದಿಗೆ ಹಬ್ಬವನ್ನು ಸ್ವಾಗತಿಸುತ್ತೇವೆ.ಇದನ್ನು ಹಿಂದೂಗಳು ಮಾತ್ರವಲ್ಲದೆ ಸಿಂಧಿಗಳು ಮತ್ತು ಮಹಾರಾಷ್ಟ್ರದ ಜನರು ಸಹ ಆಚರಿಸುತ್ತಾರೆ.ಈ ಹಬ್ಬದಲ್ಲಿ, ಎಲ್ಲಾ ಜನರು ವರ್ಷದ ಮೊದಲ ದಿನವನ್ನು ದೊಡ್ಡ ಆಚರಣೆಯೊಂದಿಗೆ ಸ್ವಾಗತಿಸುತ್ತಾರೆ. ಅವರು ಹೊಸ ಮತ್ತು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಸಂಬಂಧಿಕರು ಮತ್ತು ಸ್ನೇಹಿತರಿಗಾಗಿ ‘ಯುಗಾದಿ ಪಚಡಿ’ ಎಂಬ ವಿಶೇಷ ಖಾದ್ಯವನ್ನು ತಯಾರಿಸುತ್ತಾರೆ.ಹಸಿ ಮಾವು, ಬೇವು, ಬೆಲ್ಲ, ಹುಣಸೆಹಣ್ಣು ಮತ್ತು ಮೆಣಸಿನಕಾಯಿಯಂತಹ ಪದಾರ್ಥಗಳನ್ನು ಬಳಸಿ ವಿಶೇಷ ಖಾದ್ಯವನ್ನು ತಯಾರಿಸಲಾಗುತ್ತದೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರರಿಗೆ ಈ ಸಂದೇಶ ಕಳುಹಿಸಿ ಶುಭ ಕೋರಿ…
*ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು. ದೇವರು ನಿಮಗೆ ಬಯಸಿದ್ದೆಲ್ಲವನ್ನೂ ಕರುಣಿಸಲಿ. ಶುಭಕೃತ್ ನಾಮ ಸಂವತ್ಸರದ ಶುಭಾಶಯಗಳು.
* ಈ ಹೊಸ ವರ್ಷದಲ್ಲಿ ನಿಮಗೆ ಸಂತೋಷ ಮತ್ತು ಸಮೃದ್ಧಿ ತರಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
*ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ , ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ . ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ
*ಉತ್ಸಾಹ, ವಿಶ್ವಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ. ಶಾಂತಿ, ನೆಮ್ಮದಿ, ಸಂತಸ, ಸಮೃದ್ಧಿಯ ನಿರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬದುಕೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
*ಹಿಂದಿನ ಕಹಿ ಘಟನೆಗಳನ್ನು ಮರೆತು, ಹೊಸ ಭರವಸೆ, ಆಶಾವಾದದಿಂದ ಮುಂದೆ ನೋಡುವ ಸಮಯ ಇದು. ತಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
*ಬೇವು ತಿಂದರೆ ಕಹಿ. ಬೆಲ್ಲ ತಿಂದರೆ ಸಿಹಿ.ಸಿಹಿ ಕಹಿ ಎಲ್ಲರ ಜೀವನದಲ್ಲಿರುವ ಸುಖ ದುಃಖ.ಸಮನಾಗಿ ಇರಲೆಂದು ದೇವರಲ್ಲಿ ಪ್ರಾರ್ಥಿಸೋಣ.
*ಕಂಡ ಕನಸುಗಳೆಲ್ಲಾ ಹೊಸ ವರ್ಷದ ಬೆಳಕಿನ ಸಿಂಚನದಲ್ಲಿ ಚಿಗುರಿ ಸಮೃದ್ಧವಾಗಿ ಬೆಳೆದು ನನಸಾಗಲಿ
*ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೆಲ್ಲವನ್ನೇ ಉಣ ಬಡಿಸಲಿ. ಬೇವು ಕಡಿಮೆ ಇರಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ. ಹ್ಯಾಪಿ ಯುಗಾದಿ
*ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ ಯುಗಾದಿ ಹಬ್ಬದ ಶುಭಾಶಯಗಳು
*ಹೊಸತನ್ನು ಹೊತ್ತು ಯುಗಾದಿ ಬಂದಿದೆ ಈ ಯುಗಾದಿ ಎಲ್ಲರ ಬಾಳಲಿ ಹೊಸ ಹರ್ಷ ತರಲಿ,ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ… ಶುಭಕೃತ್ ನಾಮ ಸಂವತ್ಸರದ ಶುಭಾಶಯಗಳು
*ನವ ಚೇತನ ಬೆಲ್ಲದ ಸವಿಯ ತೋರುವ ಮನ ಬೇವನ್ನೂ ಬೆಲ್ಲವಾಗಿ ಸ್ವೀಕರಿಸುವ ಜೀವನ ಶ್ರೀ ಶುಭಕೃತ್ ಸಂವತ್ಸರದ ಶುಭಾಶಯಗಳು
*ಮರಳಿ ಬಂದಿದೆ ಯುಗಾದಿ.ತಂದಿದೆ ಹೊಸ ವರ್ಷದ ಆದಿ.ತೋರಲಿ ಹೊಸ ವರ್ಷಕ್ಕೆ ಹಾದಿ.