19.1 C
Bengaluru
Friday, December 27, 2024

ಬೀದಿ ಮಟ್ಟಕ್ಕಿಂತ ಮನೆ ಕೆಳಗಡೆ ಇದ್ದರೆ ವಾಸ್ತುವಿನಲ್ಲಿ ಏನು ಹೇಳಲಾಗಿದೆ

ಬೆಂಗಳೂರು, ಮಾ. 18 : ಹೊಸದಾಗಿ ಲೇಔಟ್‌ ಗಳನ್ನು ನಿರ್ಮಾಣ ಮಾಡುವಾಗ ಕೆಲವರು ಹೊಸದರಲ್ಲೇ ನಿವೇಶನಗಳನ್ನು ಖರೀದಿಸುತ್ತಾರೆ. ಬೀದಿ ಮಟ್ಟಕ್ಕೆ ಮನೆಯನ್ನು ನಿರ್ಮಾಣ ಮಾಡುತ್ತಾರೆ. ಆಗ ಲೇಔಟ್‌ ಸಂಪೂರ್ಣ ಆದ ಮೇಲೆ ಬೀದಿಯ ನಿರ್ಮಾಣ ಮಾಡಿದಾಗ ಮನೆಯ ಎತ್ತರ ಕಡಿಮೆ ಆಗುತ್ತದೆ. ಯಾವಾಗಲೂ ಮನೆಯನ್ನು ಸ್ವಲ್ಪ ಎತ್ತರಕ್ಕೆ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ, ಸಮಸ್ಯೆಗಳು ಎದುರಾಗುತ್ತವೆ. ಬೀದಿ ಮಟ್ಟಕ್ಕಿಂತ ನಿವೇಶನಗಳು ಕೆಳಗಡೆಗೆ ಹೋದರೆ, ಅಲ್ಲಿ ಅಶುಭ ಫಲಗಳು ಇರುತ್ತವೆ.

ಇನ್ನು ಸೆಲರ್‌ ಗಳನ್ನು ನಿರ್ಮಾಣ ಮಾಡುವವರು ಕೂಡ, ಸೆಲರ್‌ ಅನ್ನು ರೋಡಿನ ಮಟ್ಟಕ್ಕಿಂತ ನಿರ್ಮಾಣ ಮಾಡಲಾಗುತ್ತದೆ. ಇದರ ಅರ್ಥ ನಾವು ರೋಡಿನ ಮಟ್ಟಕ್ಕಿಂತಲೂ ಕೆಳ ಮಟ್ಟಕ್ಕೆ ಹೋದರೆ, ಅಲ್ಲಿಗೆ ನಾವು ಈಗಿರುವ ಸ್ಥಾನಕ್ಕಿಂತಲೂ ಕೆಳ ಮಟ್ಟಕ್ಕೆ ಇಳಿಯುತ್ತಿದ್ದೇವೆ ಎಂದು ಅರ್ಥ ಬರುತ್ತದೆ. ಇದರಿಂದ ಕುಟುಂಬದಲ್ಲರಿವವರಿಗೆ ಸಮಸ್ಯೆಗಳು ಎದುರಾಗುತ್ತವೆ. ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇನ್ನು ಹಣ ಕೂಡ ವೃದ್ಧಿ ಆಗುವುದಿಲ್ಲ.

ದಿನ ಕಳೆದಂತೆ ಹಣದ ಆಭಾವಗಳು ಶುರುವಾಗುತ್ತವೆ. ಶತ್ರುಗಳ ಬಾಧೆಯೂ ಶುರುವಾಗುತ್ತೆ. ಬೇರೆಯವರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ. ಇಂತಹ ಸ್ಥಳಗಳಲ್ಲಿ ಬೇಡದಿರುವಂತಹ ಶಕ್ತಿಗಳ ಪ್ರಭಾವವೂ ಹೆಚ್ಚಾಗುತ್ತವೆ. ಇನ್ನು ಉತ್ತರದಲ್ಲಿ ಮನೆಯನ್ನು ಕಟ್ಟಿದ್ದರೆ, ದಕ್ಷಿಣದಲ್ಲಿ ರೋಡ್‌ ಬಂದಿದ್ದರೆ, ಅದು ಅಶುಭ ಫಲಗಳನ್ನು ನೀಡುತ್ತವೆ. ಅದೇ ರೀತಿಯಲ್ಲಿ ಪೂರ್ವಕ್ಕೆ ಮನೆಯನ್ನು ಕಟ್ಟಿದ್ದು, ಪಶ್ಚಿಮದಲ್ಲಿ ರಸ್ತೆಗಳು ಬಂದಿದ್ದರೆ, ಅದು ಮುಂದಿನ ತಲೆಮಾರಿಗೆ ಸಮಸ್ಯೆ ಆಗುತ್ತದೆ. ಆಗ ಅವರ ಹೆಸರಲ್ಲಿ ನಿವೇಶನ ಇರುವವರೆಗೂ ಸಮಸ್ಯೆ ಇದ್ದೇ ಇರುತ್ತದೆ.

ತಂದೆಯ ಹೆಸರಲ್ಲಿ ಇರುವಂತಹ ಮನೆಯನ್ನು ಮಗ ಉರುಳಿಸಿ ಹೊಸ ಕಟ್ಟಡವನ್ನು ಕಟ್ಟಲು ಕೂಡ ಬಹಳ ಸಮಸ್ಯೆಗಳು ಎದುರಾಗುತ್ತವೆ. ಬಹಳ ಕಷ್ಟ ಪಟ್ಟು ಆ ಮನೆಯನ್ನು ಉರುಳಿಸಿ ನಿರ್ಮಾಣ ಮಾಡಬೇಕಾಗುತ್ತದೆ. ಅದೇ ಬೀದಿ ಪೂರ್ವದಲ್ಲೋ ಉತ್ತರದಲ್ಲೋ ಇದ್ದರೆ ಸಮಸ್ಯೆ ಆಗುವುದಿಲ್ಲ. ಹಾಗಾಗಿ ಆದಷ್ಟು ಮನೆಗಳನ್ನು ನಿರ್ಮಾಣ ಮಾಡುವಾಗ ಬೀದಿ ಮಟ್ಟಕ್ಕಿಂತ ಎರಡರಿಂದ ಆರು ಅಡಿ ಎತ್ತರಕ್ಕೆ ನಿರ್ಮಾಣ ಮಾಡುವುದು ಬಹಳ ಮುಖ್ಯವಾಗುತ್ತದೆ.

Related News

spot_img

Revenue Alerts

spot_img

News

spot_img