25.5 C
Bengaluru
Thursday, December 19, 2024

“ರಾಜ್ಯ ಸರ್ಕಾರಿ ನೌಕರರ ರೀತಿಯಲ್ಲಿ 60,000 ಕೆ.ಇ.ಬಿ ನೌಕರರ ಮುಷ್ಕರ: ಗುರುವಾರದಿಂದ ರಾಜ್ಯಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ:

ಬೆಂಗಳೂರು: ಮಾರ್ಚ್ 14:
ವೇತನ ಪರಿಷ್ಕರಣೆಗೆ ಆಗ್ರಯಿಸಿ ಇದೇ ತಿಂಗಳ ಪ್ರಾರಂಭದಲ್ಲಿ ರಾಜ್ಯ ಸರ್ಕಾರಿ ನೌಕರರು ನಡೆಸಿದ ಮುಷ್ಕರದ ರೀತಿಯಲ್ಲಿಯೇ ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ( ಕೆಪಿಟಿಸಿಎಲ್ ) ಮತ್ತು ಐದು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ)ಗಳ ಒಟ್ಟು 60,000 ಅಧಿಕಾರಿ ಸಿಬ್ಬಂದಿಗಳು ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕರೆ ನೀಡಿರುವುದರಿಂದ ಕರ್ನಾಟಕದಲ್ಲಿ ಗುರುವಾದದಿಂದ (ಮಾರ್ಚ್ 16)ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ.

ಮುಷ್ಕರಕ್ಕೆ ಬದ್ಧವಾಗಿರುವ ಕೆಪಿಟಿಸಿಎಲ್ ನೌಕರರ ಸಂಘದ ಕೆಲವು ಅಧಿಕಾರಿಗಳು ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಭರವಸೆ ನೀಡಿದ್ದರೂ, ಯಾವುದೇ ತಾಂತ್ರಿಕ ದೋಷಗಳ ಬಗ್ಗೆ ಗ್ರಾಹಕರಿಂದ ಕರೆಗಳು ಮತ್ತು ದೂರುಗಳಿಗೆ ಹಾಜರಾಗಲು ಸಿಬ್ಬಂದಿ ಇರುವುದಿಲ್ಲ. ಒಕ್ಕೂಟದ ಅಧ್ಯಕ್ಷ ಆರ್.ಎಚ್.ಲಕ್ಷ್ಮೀಪತಿ ಮಾತನಾಡಿ ವೇತನ ಪರಿಷ್ಕರಣೆ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 14 ದಿನ ಮುಂಚಿತವಾಗಿ ಮುಷ್ಕರ ನಡೆಸುತ್ತಿರುವ ಬಗ್ಗೆ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದೆವು. ಆದರೆ ನೋಟಿಸ್ ನೀಡಿ 12 ದಿನ ಕಳೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲವದ್ದರಿಂದ ಈ ಹೋರಟವನ್ನು ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ಇತರ ಸಂಘಗಳಂತೆ ನಾವು ಬೀದಿಗಿಳಿದು ಘೋಷಣೆ ಕೂಗುವುದಾಗಲಿ, ರ್ಯಾಲಿ ನಡೆಸುವುದಾಗಲಿ, ಜ್ಞಾಪನಾ ಪತ್ರ ಸಲ್ಲಿಸುವುದಾಗಲಿ ಮಾಡುವುದಿಲ್ಲ. ಬದಲಾಗಿ ನಾವೆಲ್ಲರೂ ನಮ್ಮ ಬೇಡಿಕೆ ಈಡೇರುವವರೆಗೂ ಮನೆಯಲ್ಲೇ ಇದ್ದು ಕೆಲಸಕ್ಕೆ ಗೈರಾಗುತ್ತೇವೆ. ಪದಾಧಿಕಾರಿಗಳ ಪ್ರಕಾರ ಫೆಡರೇಶನ್ ನ ಪವರ್ ಮ್ಯಾನ್ (ಲೈನ್ ಮ್ಯಾನ್) ರಿಂದ ಇಡಿದು ತಾಂತ್ರಿಕ ಎಂಜಿನಿಯರ್ ಗಳವರೆಗೆ 60,000 ಕೆಲಸ ಮಾಡುವ ಉದ್ಯೋಗಿಗಳನ್ನು ಮತ್ತು 45,000 ನಿವೃತ್ತ ಸಿಬ್ಬಂದಿಗಳನ್ನು ಪ್ರತಿನಿಧಿಗಳು ಈ ಹೋರಟದಲ್ಲಿ ಪಾಲ್ಗೋಳಲಿದ್ದಾರೆ ಎಂದು ತಿಳಿಸಿದರು.

ನಾವು ಏಪ್ರಿಲ್ 2022 ರಿಂದ ವೇತನ ಪರಿಷ್ಕರಣೆ ಕೋರುತ್ತಿದ್ದೇವೆ. ಹಿಂದಿನ ನಿರ್ಧಾರದ ಪ್ರಕಾರ ನಮ್ಮ ವೇತನವನ್ನು 22% ಹೆಚ್ಚಿಸಬೇಕಿತ್ತು. ಈ ಪ್ರಸ್ತಾವನೆಯನ್ನು ಕೆಪಿಟಿಸಿಎಲ್ ಮಂಡಳಿಯು ಸಹ ಅನುಮೋದಿಸಿದೆ. ಆದರೆ ಸರ್ಕಾರವು ಅದನ್ನು ಇಲ್ಲಿಯವರೆಗೆ ಬಾಕಿ ಇರಿಸಿದೆ. ನಾವು ಪ್ರತಿಭಟನೆ ನಡೆಸಿದರೆ ಮಾತ್ರ ಸರ್ಕಾರ ನಮ್ಮ ಮಾತನ್ನು ಕೇಳುತ್ತದೆ ಎಂದು ಕೆ ಬಲರಾಮ್ ಹೇಳಿದ್ದಾರೆ. ನಮ್ಮ ಹೋರಟದಿಂದ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಒಕ್ಕೂಟ ಮತ್ತು ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಬಲರಾಮ್ ಸ್ಪಷ್ಟಪಡಿಸಿದ್ದಾರೆ.

ವಿದ್ಯುತ್ ಸರಬರಾಜನ್ನು ಅಡ್ಡಿಪಡಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಲು ನಾವು ಬಯಸುವುದಿಲ್ಲ. ಆದಾಗ್ಯೂ, ಯಾವುದೇ ತಾಂತ್ರಿಕ ದೋಷಗಳು ಅಥವಾ ಅಡಚಣೆಗಳ ಸಂದರ್ಭದಲ್ಲಿ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ನಾವು ಲಭ್ಯವಿರುವುದಿಲ್ಲ. ಆದರೆ ನಾವು ಆಸ್ಪತ್ರೆಗಳು/ವೈದ್ಯಕೀಯ ಸಂಸ್ಥೆಗಳು ಮತ್ತು ನೀರು ಸರಬರಾಜು ಸ್ಥಾಪನೆಗಳಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇವೆ. ತಾಂತ್ರಿಕ ದೋಷದ ಸಂದರ್ಭದಲ್ಲಿ ನಾವು ಬೇರೆ ಯಾವುದೇ ಕ್ಷೇತ್ರಕ್ಕೆ ಸೇವೆ ಸಲ್ಲಿಸುವುದಿಲ್ಲ ವೆಂದು ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img