ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಯುಪಿಐ ಪೇಮೆಂಟ್ ವ್ಯವಹಾರದ ಕುರಿತಂತೆ ಬಿಗ್ ಅಪ್ಡೇಟ್ ನೀಡಿದ್ದಾರೆ.ಒಂದು ವರ್ಷದ ಅವಧಿಯಲ್ಲಿ ಯುಪಿಐ ಮೂಲಕ ನಡೆಸಿರುವ ವಹಿವಾಟಿನಲ್ಲಿ ಶೇ.50ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.ಫೆಬ್ರವರಿ 2022 ರಲ್ಲಿ ದಾಖಲಾದ ಅಂಕಿ ಅಂಶಗಳ ಗಮನಿಸಿದರೆ 5.36 ಲಕ್ಷ ಕೋಟಿಗಿಂತ ಇದೀಗ ನಡೆದಿರುವ ವಹಿವಾಟು 17 ಶೇಕಡಾದಷ್ಟು ಏರಿಕೆ ಕಂಡಿದೆ. ಕಳೆದ ಮೂರು ತಿಂಗಳಿನಿಂದ ಮಾಸಿಕ ಡಿಜಿಟಲ್ ಪಾವತಿ ವಹಿವಾಟು ಪ್ರತಿ ಬಾರಿ 1,000 ಕೋಟಿ ರೂಪಾಯಿಗಳ ಗಡಿ ದಾಟುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
|
ಯುಪಿಐ ಮತ್ತು ಸಿಂಗಾಪುರದ ಪೆನೌ ನಡುವಿನ ಒಪ್ಪಂದದ ನಂತರ, ಇತರ ಹಲವು ದೇಶಗಳು ಪಾವತಿಗಾಗಿ ಇಂತಹ ಒಪ್ಪಂದವನ್ನು ಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿವೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಆರ್‌ಬಿಐ ಪ್ರಧಾನ ಕಛೇರಿಯಲ್ಲಿ ಡಿಜಿಟಲ್ ಪಾವತಿ ಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಶಕ್ತಿಕಾಂತ್ ದಾಸ್ ಅವರು, ಮೌಲ್ಯದ ಪ್ರಕಾರ, ಈ ವರ್ಷದ ಫೆಬ್ರವರಿಯಲ್ಲಿ ಯುಪಿಐ ಮೂಲಕ 6.27 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದು ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.17 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.ಕಳೆದ ಮೂರು ತಿಂಗಳ ಅವಧಿಯಲ್ಲಿ ಒಟ್ಟಾರೆ ಮಾಸಿಕ ಡಿಜಿಟಲ್ ಪಾವತಿ ವಹಿವಾಟು ಪ್ರತಿ ತಿಂಗಳು 1,000 ಕೋಟಿ ರೂಪಾಯಿ ದಾಟಿದೆ ಎಂದು ಅವರು ತಿಳಿಸಿದ್ದಾರೆ.