ಬೆಂಗಳೂರು, ಮಾ. 03: ಎಂಟು ಕೋಟಿ ರೂ. ಹಣದೊಂದಿಗೆ ಲೊಕಾಯುಕ್ತ ಬಲೆಗೆ ಬಿದ್ದಿರುವ ಶಾಸಕ ಮಾಡಳು ವಿರುಪಾಕ್ಷಪ್ಪನ ಪುತ್ರ, ಬೆಂಗಳೂರು ನೀರು ಸರಬರಾಜು ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಎಸಿಬಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಹಲವು ವರ್ಷ ಕೆಲಸ ಮಾಡಿದ್ದ ಸಂಗತಿ ಹೊರ ಬಿದ್ದಿದೆ. ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕೆಲಸ ಮಾಡಿ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯ ವೈಖರಿ ಅರಿತಿದ್ದ ಮಾಡಾಳು ಪ್ರಶಾಂತ್ ಅಪ್ಪನ ಟೆಂಡರ್ ಡೀಲ್ ಕುದುರಿಸುವ ವಿಚಾರದಲ್ಲಿ 40 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ್ರಶಾಂತ್ ಮಾಡಾಳು ಅವರ ಮನೆಯಲ್ಲಿ ಶೋಧ ನಡೆಸಿದಾಗ ಬರೋಬ್ಬರಿ ಅರು ಕೋಟಿ ರೂಪಾಯಿ ನಗದು ಹಣ ಸಿಕ್ಕಿ ಬಿದ್ದಿದ್ದು, ಲೋಕಾಯುಕ್ತ ಪೊಲೀಸರ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತ ಸಿಕ್ಕಿರುವುದು ಇದೇ ಮೊದಲು. ಪ್ರಶಾಂತ್ ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಎಸಿಬಿಯಲ್ಲಿ ಕಾರ್ಯ ನಿರ್ವಹಿಸಿದ್ದ ಕೆಲ ಮಾಜಿ ಪೊಲೀಸ್ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.
ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಮಾಡಾಳ್, ಈ ಹಿಂದೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಡೀಲ್ ಕುದುರಿಸಿದ್ದ ಎಂಬ ಅರೋಪ ಕೇಳಿ ಬಂದಿದೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಜತೆ ಆಪ್ತತೆ ಸಾಧಿಸಿದ್ದ ಪ್ರಶಾಂತ್, ತನ್ನ ತಂದೆಯ ಅಧಿಕಾರ ಬಲ, ಮತ್ತೊಬ್ಬ ಸಹೋದರನ ಸಹಕಾರದೊಂದಿಗೆ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದ ಎಂಬ ಆರೋಪ ಕೇಳಿ ಬಂದಿದೆ.
ಪ್ರಶಾಂತ್ ಮಾಡಾಳ್ ಅವರ ಮೊಬೈಲ್ ಜಪ್ತಿ ಮಾಡಿಕೊಂಡು, ವಾಟ್ಸಪ್ ಚಾಟ್ ನ್ನು ರಿಟ್ರೀವ್ ಮಾಡಿದ್ದೇ ಆದಲ್ಲಿ ಮತ್ತೊಷ್ಟು ಪ್ರಕರಣಗಳ ಡೀಲಿಂಗ್ ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ. ಲೋಕಾಯುಕ್ತ ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಿದಲ್ಲಿ ಎಸಿಬಿ ದಾಖಲಿಸಿದ್ದ ಭ್ರಷ್ಟಾಚಾರ ಪ್ರಕರಣಗಳ ಅಸಲಿ ಸತ್ಯ ಹೊರ ಬೀಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕಿದೆ.
ಅಪ್ಪನ ಕೇಸಿನಲ್ಲಿ ಮಗ ಲಾಕ್ !
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜಂಟ್ಸ್ ಲಿ. ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು ಟೆಂಡರ್ ನೀಡುವ ಸಂಬಂಧ 80 ಲಕ್ಷ ರೂ. ಲಂಚ ಕುದುರಿಸಿದ್ದರು. ಹಣವನ್ನು ಪ್ರಶಾಂತ್ ಮಾಡಾಳ್ ಅವರ ಕೈಗೆ ತಲುಪಿಸಲು ಸೂಚಿಸಿದ್ದರುಉ ಎನ್ನಲಾಗಿದೆ. ಹೀಗಾಗಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಕುದುರಿಸಿದ್ದ ಡೀಲ್ ನ ಹಣವನ್ನು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕೆಲಸ ಮಾಡಿ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯ ವೈಖರಿ ಅರಿತಿದ್ದ ಮಾಡಾಳ್ ಪ್ರಶಾಂತ್ ಡೀಲ್ ಹಣ ಪಡೆಯಲು ಹೋಗಿ ಲೋಕಾಯುಕ್ತ ಪೊಲೀಸರಿಗೆ ಲಾಕ್ ಆಗಿದ್ದಾರೆ..
ಮಾಡಾಳು ಸೆರೆ ಸಾಧ್ಯತೆ: 40 ಲಕ್ಷ ರೂ. ಲಂಚ ಸ್ವೀಕಾರ ಪ್ರಕರಣದಲ್ಲಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ. ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರೇ ರಾಸಾಯಿನಕ ಟೆಂಡರ್ ಅಂತಿಮಗೊಳಿಸುವ ಅಧಿಕಾರ ಹೊಂದಿರುವರು. ಟೆಂಡರ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಅವರ ಸ್ವತಃ ಪುತ್ರನೇ ಸಿಕ್ಕಿಬಿದ್ದಿರುದಿಂದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೆಲಸ ಬಾಕಿ ಇಟ್ಟಿರುವುದು ಮಾಡಾಳ್ ವಿರುಪಾಕ್ಷಪ್ಪ ಅವರೇ. ಹೀಗಾಗಿ ಕೆಲಸ ಬಾಕಿ ಇರಿಸಿರುವ ಅಧಿಕಾರ ಹೊಂದಿರುವರು ಕೆಎಸ್‌ಡಿಎಲ್ ನ ಅಧ್ಯಕ್ಷರು ಆಗಿರುವ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರೇ. ಹೀಗಾಗಿ ಮಾಡಾಳು ವಿರುಪಾಕ್ಷಪ್ಪ ಸಹ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಮೊದಲ ಅಥವಾ ಎರಡನೇ ಆರೋಪಿ ಮಾಡಾಳು ವಿರುಪಾಕ್ಷಪ್ಪ ಅವರೇ ಆಗಿದ್ದು ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾಡಾಳುವ ವಿರುಪಾಕ್ಷಪ್ಪ ಮೊದಲ ಆರೋಪಿಯಾಗಿದ್ದು, ತಲೆ ಮರೆಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ಪ್ರಶಾಂತ್ ಸಂಬಂಧಿ ಸಿದ್ದೇಶ್ ಸಹ ಅರೋಪಿಯಾಗಿದ್ದು, ಐದಾರು ಮಂದಿ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ.
ಮಾಜಿ ಎಸಿಬಿ ಅಧಿಕಾರಿಗಳಿಗೆ ನಡುಕ: ಪ್ರಶಾಂತ್ ಮಾಡಾಳ್ ಅವರಿಗೆ ಸೇರಿದ ವಿವಿಧ ಬ್ಯಾಂಕ್ ಗಳ ಐದು ಖಾತೆ ಜಪ್ತಿಯಾಗಿವೆ. ಅಲ್ಲದೇ ವಿವಿಧ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದು, ನಿನ್ನೆಯೆಷ್ಟೇ 90 ಲಕ್ಷ ರೂ. ಎರಡು ಬ್ಯಾಂಕ್ ಖಾತೆಗಳಿಗೆ ಜಮೆ ಆಗಿರುವ ವಿಷಯವನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಶಾಂತ್ ಅವರ ಮೊಬೈಲ್ ರಿಟ್ರೇವ್ ಮಾಡಿದರೆ, ಎಸಿಬಿಯ ಹಲವು ಭ್ರಷ್ಟ ಪ್ರಕರಣಗಳ ಡೀಲ್ ಪುರಾಣ ಬಯಲಾಗಲಿದೆ. ಈಗಾಗಲೇ ಮಾಡಾಳ್ ಪ್ರಶಾಂತ್ ಅವರ ಸಂಜಯನಗರ ಮನೆಯಲ್ಲಿ ಡೈರಿ ಸಿಕ್ಕಿದ್ದು, ಅದರಲ್ಲಿ ಎಸಿಬಿ ಡೀಲಿಂಗ್ ಕಥೆಗಳು ಒಳಗೊಂಡಿದೆ ಎನ್ನಲಾಗಿದೆ.
ತನಿಖಾಧಿಕಾರಿಗೆ ಒತ್ತಡ: ಮಾಡಾಳು ವಿರುಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಬಂಧನ ಬಳಿಕ ಎಸಿಬಿಯ ಉನ್ನತ ಮಾಜಿ ಅಧಿಕಾರಿಗಳು ತನಿಖಾಧಿಕಾರಿ ಮತ್ತು ಡಿವೈಎಸ್ಪಿಗಳ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸದೇ ಒತ್ತಡ ಹಾಕುತ್ತಿದ್ದು, ಇದ್ಯಾವುದಕಕ್ಊ ಕ್ಯಾರೆ ನ್ನದೇ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.