ಬೆಂಗಳೂರು : ಹಣಕಾಸು ವಿಶೇಷ ಆಯುಕ್ತ ಜಯರಾಮ್ ರಾಯಪುರ್ ಹಲವು ಹೊಸ ಯೋಜನೆ ಪ್ರಕಟಿಸಿದ ಬೃಹತ್ ಗಾತ್ರದ ಬಜೆಟ್ ಮಂಡಿಸಿದ್ದಾರೆ,ಬೆಂಗಳೂರಿಗೆ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಒಟ್ಟು 11,163 ಕೋಟಿ ಬಜೆಟ್ ಮಂಡನೆಯಾಗಿದೆ.ಇದೇ ಮೊದಲ ಬಾರಿ ದಾಖಲೆ ಗಾತ್ರದ ಬಜೆಟ್ ಮಂಡನೆ ಮಂಡಿಸಲಾಗಿದೆ.
ಬಿಬಿಎಂಪಿ ಬಜೆಟ್ ಪ್ರಮುಖ ಮುಖ್ಯಾಂಶಗಳು
15 ಹಳೆ ಪಾರ್ಕ್ ನವೀಕರಣ, ರೇಬಿಸ್ ಲಸಿಕೆ ಹಾಕಲು 20 ಕೋಟಿ.
ಮಹಿಳಾ ಶೌಚಾಲಯಕ್ಕೆ 250 ಕೋಟಿ, ಪ್ರತಿ ವಾರ್ಡ್ಗೆ ತಲಾ 2 ಕೋಟಿ.
110 ಹಳ್ಳಿ ರಸ್ತೆಗಳ ದುರಸ್ಥಿಗೆ 300 ಕೋಟಿ.
100 ಎಕರೆಯಲ್ಲಿ 3 ಬೃಹತ್ ತ್ಯಾಜ್ಯ ಸಂಗ್ರಹಣೆ ಸಾಗಣೆ ಕೇಂದ್ರ ಸ್ಥಾಪನೆ.
ಸರ್ಕಾರದ 14 ಇಲಾಖೆಗಳನ್ನು ಒಳಗೊಂಡಂತೆ ICC ಕಂಟ್ರೋಲ್ ರೂಂ.
ಮತ್ತಿಕೆರೆ, ಜಾಲಹಳ್ಳಿ, ಸದಾಶಿವನಗರ ಪೊಲೀಸ್ ಠಾಣೆ, ಯಲಹಂಕ ರೈತ ಸಂತೆ.
ಮೇಖ್ರಿ ಸರ್ಕಲ್ ಸೇರಿ ಒಟ್ಟು 5 ಫ್ಲೈಓವರ್ ನಿರ್ಮಾಣಕ್ಕೆ 230 ಕೋಟಿ ಮೀಸಲು.
ಓದುವ ಬೆಳಕು-ಹೊಸ ಯೋಜನೆ ಘೋಷಣೆ.
ಮೇಯರ್ ವಿವೇಚನೆ ಅನುದಾನ 100 ಕೋಟಿಗೆ ಹೆಚ್ಚಳ.
ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಲು 20 ಕೋಟಿ.
67 ಕೆರೆ ಅಭಿವೃದ್ಧಿ, 11 ಹೊಸ ಪಾರ್ಕ್ಗಳ ನಿರ್ಮಾಣ.
195 ಕಿಮೀ ರಾಜಕಾಲುವೆ ತಡೆಗೋಡೆ ನಿರ್ಮಾಣ.
2000 ಒಂಟಿ ಮನೆ ನಿರ್ಮಾಣಕ್ಕೆ 100 ಕೋಟಿ.
ಪಾಲಿಕೆ ನೌಕರರ ಮಕ್ಕಳ ವಿದೇಶಿ ವ್ಯಾಸಂಗಕ್ಕೆ 5 ಕೋಟಿ ಮೀಸಲು.
8091 ಹೊಲಿಗೆ ಯಂತ್ರ ವಿತರಣೆ, ರುದ್ರಭೂಮಿ ಕಾರ್ಮಿಕರ ಗೌರವ ಧನ ಹೆಚ್ಚಳ.
ಬೀದಿ ಬದಿ ವ್ಯಾಪಾರಿಗಳಿಗೆ ಪಟ್ಟಣ ಮಾರಾಟ ಸಮಿತಿ ರಚನೆ.
150 ಕಿಮೀ ವೈಟ್ ಟ್ಯಾಪಿಂಗ್ಗೆ 1310 ಕೋಟಿ ಹಣ ನಿಗದಿ.
350 ಕಿಮೀ ರಿಂಗ್ ರಸ್ತೆಗೆ 450 ಕೋಟಿ ಟೆಂಡರ್ ಶ್ಯೂರ್.
40 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ.
ವಾರ್ಡ್ಗೊಂದು ಬಿಬಿಎಂಪಿ ಪಬ್ಲಿಕ್ ಸ್ಕೂಲ್ ಮೇಲ್ದರ್ಜೆ
ಅಬ್ದುಲ್ ಕಲಾಂ ಹೆಸರಿನಲ್ಲಿ ಕನಸಿನ ಶಾಲೆ ನಿರ್ಮಾಣ.