18.5 C
Bengaluru
Friday, November 22, 2024

ಪೊಲೀಸ್ ಸಿಬ್ಬಂದಿಗಳ ಅಂತರ ಜಿಲ್ಲಾ ವರ್ಗಾವಣೆ ಪ್ರಕ್ರಿಯೆ ಇಂದಿನಿಂದ ಆರಂಭ

ನಿಯಮಾನುಸಾರ ಇಂದಿನಿಂದ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ ಡಿಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ. ಪೊಲೀಸರ ಅಂತರ ಜಿಲ್ಲಾ ಘಟಕ ವರ್ಗಾವಣೆಗೆ ಸಚಿವ ಸಂಪುಟದ ಅನುಮೋದನೆ ಬೆನ್ನಲ್ಲೇ ರಾಜ್ಯ ಸರ್ಕಾರವು ವರ್ಗಾವಣೆ ಅಧಿಸೂಚನೆ ಹೊರಡಿಸಿದೆ.ವರ್ಗಾವಣೆ ನಿರೀಕ್ಷೆಯಲ್ಲಿರುವ ರಾಜ್ಯ ಪೊಲೀಸ್ ಇಲಾಖೆಯ ಎಸ್ ಐ ಗಿಂತ ಕೆಳ ಹಂತದ ಪೊಲೀಸರು ಮತ್ತು ಆಡಳಿತ ಸಿಬ್ಬಂದಿಯ ಅಂತರ್ ಜಿಲ್ಲೆ ಘಟಕ ಹಾಗೂ ವಲಯ ವರ್ಗಾವಣೆಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.1977 ರಿಂದ ಅಂತರ ಜಿಲ್ಲಾ ವರ್ಗಾವಣೆಗೆ ಇದ್ದ ನಿಯಮಗಳನ್ನು 2021ರಲ್ಲಿ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರವು ರದ್ದುಗೊಳಿಸಿತು. ನಂತರ ಪೊಲೀಸರಿಂದ ಆಕ್ಷೇಪಣೆಗಳು ಬಂದಿದ್ದವು.ಹೀಗಾಗಿ ರಾಜ್ಯ ಸರ್ಕಾರವು ಮತ್ತೆ ಹಳೆ ನಿಯಮ ಜಾರಿ ಮಾಡಿ ಆದೇಶ ಹೊರಡಿಸಿದೆ.ಸಬ್ ಇನ್ಸ್ ಪೆಕ್ಟರ್ ಸಹಾಯಕ ಸಬ್ ಇನ್ಸ್ ಪೆಕ್ಟರ್, ಹೆಡ್ ಕಾನ್ಸ್ಟೇಬಲ್ , ಪ್ರಥಮ ದರ್ಜೆ ಸಹಾಯಕ ಹಾಗೂ ದಲಾಯತ್ ಗಳ ಅಂತರ ಜಿಲ್ಲೆ, ಘಟಕ ಕಮಿಷನರೇಟ್ ಹಾಗೂ ವಲಯವಾರು ವರ್ಗಾವಣೆಗೆ ಆಯಾ ವಿಭಾಗದ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ.

ವರ್ಗಾವಣೆಗೆ ವಿಧಿಸಿರುವ ನಿಬಂಧನೆಗಳು

# ಸಿವಿಲ್, ಸಿಎಆರ್, ಡಿಎಆರ್ ಸಿಬ್ಬಂದಿಗಳು ಕಡ್ಡಾಯವಾಗಿ ಮಾತೃ ಘಟಕದಲ್ಲಿ ಏಳು ವರ್ಷ ಪೂರೈಸಿರಬೇಕು.
# ಸೇವಾ ಜೇಷ್ಠತೆ ಬಿಟ್ಟುಕೊಡುವ ಷರತ್ತುಗಳಿಗೆ ಒಳಪಟ್ಟಿರಬೇಕು.
# ನಿವೃತ್ತ ಸೇನಾ ಸಿಬ್ಬಂದಿ ಕೋಟಾದ ಸಿಬ್ಬಂದಿ ಮಾತೃಘಟಕದಲ್ಲಿ ಮೂರು ವರ್ಷ ಪೂರೈಸಿರಬೇಕು.
# ಅಂತರ ಜಿಲ್ಲಾ ವರ್ಗಾವಣೆ ಪ್ರಕ್ರಿಯೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು
# ಸಿಬ್ಬಂದಿ ವರ್ಗಾವಣೆ ಕೋರಿರುವ ಜಿಲ್ಲೆಗಳಲ್ಲಿ ಖಾಲಿ ಹುದ್ದೆಗಳಿಗೆ ತಕ್ಕಂತೆ ಇರಬೇಕು.
# ಮೊದಲು ವರ್ಗಾವಣೆ ಕೋರಿದವರನ್ನುಪರಿಗಣಿಸಬೇಕು.
# 2021 ರ ಸೇವಾ ನಿಯಮದಂತೆ ಸ್ಥಗಿತಗೊಂಡಿದ್ದ ವರ್ಗಾವಣೆ ಮನವಿಯನ್ನು ಆದ್ಯತೆ ಮೇಲೆ ಇತ್ಯರ್ಥ

Related News

spot_img

Revenue Alerts

spot_img

News

spot_img