ಬೆಂಗಳೂರು, ಫೆ. 23 : ಸಾಮಾನ್ಯವಾಗಿ ಎಲ್ಲರೂ ಟೆರೆಸ್ ಮೇಲೆ ನೀರಿನ ಟ್ಯಾಂಕ್ ಹಾಗೂ ಸೋಲಾರ್ ಅನ್ನು ಅಳವಡಿಸಿರುತ್ತಾರೆ. ಟೆರೆಸ್ ನಲ್ಲಿ ನೀರಿ ಟ್ಯಾಂಕ್ ಇದ್ದರೆ, ಇಡೀ ಮನೆಗೆ ನೀರು ಸುಲಭವಾಗಿ ಪೈಪ್ ಮೂಲಕ ಹರಿಸುತ್ತದೆ. ಇನ್ನು ಸೋಲಾರ್ ಟೆರೆಸ್ ಮೇಲೆ ಇರುವುದರಿಂದ ಸುರ್ಯನ ಕಿರಣಗಳ ಸಹಾಯದಿಂದ ನೀರನ್ನು ಕಾಯುಸುತ್ತದೆ. ಇದರಿಂದ ಸ್ನಾನಕ್ಕೆ ಬಿಸಿ ನೀರು ಕರೆಂಟ್ ಇಲ್ಲದೇ ಕಾಯಿಸಿಕೊಳ್ಳಬಹುದು. ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಸೋಲಾರ್ ಇದ್ದೇ ಇರುತ್ತದೆ. ಸೋಲಾರ್ ಹೀಟರ್ ಇಲ್ಲದೆ ಮನೆಗಳನ್ನು ನಿರ್ಮಾಣ ಮಾಡುವುದೇ ಇಲ್ಲ.
ಮನೆಯ ಮೇಲಿನ ಯಾವ ದಿಕ್ಕಿನಲ್ಲಿ ಸೋಲಾರ್ ಸೆಟ್ ಅಳವಡಿಸಬೇಕು? ಸೋಲಾರ್ ವಾಟರ್ ಹೀಟರ್ ಗೂ ವಾಸ್ತು ಅನ್ವಯಿಸುತ್ತದೆಯಾ ? ಮನೆ ಮೇಲಿನ ವಾಸ್ತು ನಿಯಮಗಳೇನು ? ಇದರ ಜೊತೆಗೆ ಯಾವ ದಿಕ್ಕಿನಲ್ಲಿ ನೀರಿನ ಓವರ್ ಹೆಡ್ ಟ್ಯಾಂಕ್ ಅನ್ನು ಅಳವಡಿಸಬೇಕು. ವಾಸ್ತುವಿನಲ್ಲಿ ಓವರ್ ಹೆಡ್ ಟ್ಯಾಂಕ್ ಬಗ್ಗೆ ಏನು ಹೇಳಲಾಗಿದೆ.? ಮನೆ ಟೆರೇಸ್ ವಾಸ್ತು ಬಗ್ಗೆ ಡಾ. ರೇವತಿ ವೀ ಕುಮಾರ್ ಕೊಟ್ಟ ಟಿಪ್ಸ್ ಏನು ಎಂದು ತಿಳೀಯೋಣ ಬನ್ನಿ.
ಮನೆಯಲ್ಲಿ ಸೋಲಾರ್ ಅನ್ನು ಎಲ್ಲಿ ಇಡಬೇಕು ಎಂದು ನೋಡೋ. ಸೋಲಾರ್ ವಿದ್ಯುತ್ ಗೆ ಸಂಬಂಧಿಸಿದ್ದು, ನೀರು ಕಾಯಿಸುವುದು ಹಾಗೂ ವಿದ್ಯುತ್ ಅನ್ನು ಸೃಷ್ಟಿಸಬಹುದು. ಇದು ವಿದ್ಯುತ್ ಗೆ ಸಂಬಂಧ ಪಟ್ಟ ಹಿನ್ನೆಲೆ ವಾಯುವ್ಯದಲ್ಲಿ ಇಟ್ಟರೆ ಸೂಕ್ತ. ಸೂರ್ಯನ ಕಿರಣಗಳು ದಿನದ ಹಲವು ಹೊತ್ತು ಸೋಲಾರ್ ಪಾನೆಲ್ ಮೇಲೆ ಬೀಳುವಂತೆ ವಾಯುವ್ಯದಲ್ಲೋ ಅಥವಾ ಈಶಾನ್ಯ ದಿಕ್ಕಿನಲ್ಲೋ ಇಡುವುದು ಉತ್ತಮ. ಇನ್ನು ಟೆರೆಸ್ ಮೇಲೆ ಸಾಮಾನ್ಯವಾಗಿ ಎಲ್ಲರೂ ಓವರ್ ಹೆಡ್ ವಾಟರ್ ಟ್ಯಾಂಕ್ ಅನ್ನು ಟೆರೆಸ್ ಮೇಲೆ ಇಡುತ್ತಾರೆ.
ಈ ಓವರ್ ಹೆಡ್ ಟ್ಯಾಂಕ್ ಅನ್ನು ಟೆರೆಸ್ ಮೇಳೇ ಈಗ ಕೆಲವರು ಸೌತ್ ವೆಸ್ಟ್ ನಲ್ಲೇ ಇಡಬೇಕು ಎಂದು ಹೇಳುತ್ತಾರೆ. ಅಥವಾ ಸೌತ್ ಆಫ್ ಸೌತ್ ವೆಸ್ಟ್ ಇಲ್ಲವೇ ವೆಸ್ಟ್ ಆಫ್ ಸೌತ್ ವೆಸ್ಟ್ ನಲ್ಲಿ ಇಡಿ ಎಂದು ಹೇಳುತ್ತಾರೆ. ಸೌತ್ ವೆಸ್ಟ್ ನಲ್ಲಿ ಇಟ್ಟರೂ ತೊಂದರೆ ಇಲ್ಲ. ಅಲ್ಲದೇ ದಕ್ಷಿಣ ನೈರುತ್ಯದಲ್ಲೋ ಅಥವಾ ಪಶ್ಚಿಮ ನೈರುತ್ಯದಲ್ಲೋ ಇಟ್ಟರೂ ಸಮಸ್ಯೆ ಇಲ್ಲ. ಇನ್ನು ಕೆಲವರು ವಾಯುವ್ಯದಲ್ಲೂ ಓವರ್ ಹೆಡ್ ಟ್ಯಾಂಕ್ ಅನ್ನು ಇಡಬಹುದು ಎಂದು ಹೇಳುತ್ತಾರೆ. ಆದರೆ, ವಾಯುವ್ಯದಲ್ಲಿ ಓವರ್ ಹೆಡ್ ಟ್ಯಾಂಕ್ ಅನ್ನ ಇಟ್ಟರೆ ಅದು ಆರೋಗ್ಯದಲ್ಲಿ ಸಮಸ್ಯೆ ಕಾಣಿಸುತ್ತದೆ ಎಂದು ಹೇಳಲಾಗಿದೆ. ಹಾಗಾಗಿ ಓವರ್ ಹೆಡ್ ಟ್ಯಾಂಕ್ ಅನ್ನು ಆದಷ್ಟು ದಕ್ಷಿಣ ನೈರುತ್ಯ ಅತವಾ ಪಶ್ಚಿಮ ನೈರುತ್ಯದಲ್ಲಿ ಇಟ್ಟುಕೊಳ್ಳುವುದು ಸೂಕ್ತ.