22 C
Bengaluru
Monday, December 23, 2024

ಭಾರತದ (UPI) ಮತ್ತು ಸಿಂಗಾಪುರದ ಪೆ ನೌ,(UPI-PayNow) ನಡುವಿನ ವಾಸ್ತವ ಪಾವತಿ ಸಂಪರ್ಕ ಉದ್ಘಾಟನೆ:

ಭಾರತ ಮತ್ತು ಸಿಂಗಾಪುರದ ನಡುವಿನ UPI-PayNow ಸಂಪರ್ಕದ ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್.UPI-PayNow ಸಂಪರ್ಕ ಉಭಯ ರಾಷ್ಟ್ರಗಳ ಮಧ್ಯೆ ಹಣಕಾಸು ವ್ಯವಹಾರವನ್ನು ಕಡಿಮೆ ವೆಚ್ಚದ ಮತ್ತು ಸಕಾಲದಲ್ಲಿ ಸುಲಭವಾಗಿ ಜರುಗುವಂತೆ ಅನುಕೂಲಗೊಳಿಸಲಿದೆ.

ಭಾರತದ ಯೂನಿಫೈಡ್ ಪೆಮೆಂಟ್ ಇಂಟರ್ಫೇಸ್ (UPI) ಮತ್ತು ಸಿಂಗಾಪುರದ ಪೆ ನೌ ನಡುವಿನ ವಾಸ್ತವ ಪಾವತಿ ಸಂಪರ್ಕದ ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮತ್ತು ಸಿಂಗಾಪುರ ಪ್ರಧಾನಿ ಶ್ರೀ ಲೀ ಸಿಯೆನ್ ಲೂಂಗ್ ಭಾಗವಹಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಶ್ರೀ ರವಿ ಮೆನನ್ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿ ಪರಸ್ಪರ ಗಡಿಯಾಚೆಗಿನ ವಹಿವಾಟು ಮಾಡಿದರು.

ಸಿಂಗಾಪುರ, ಗಡಿಯಾಚೆಗೆ ವ್ಯಕ್ತಿಯಿಂದ ವ್ಯಕ್ತಿಗೆ (P2P) ಪಾವತಿ ಸೌಲಭ್ಯವನ್ನು ಪ್ರಾರಂಭಿಸಿದ ಮೊದಲ ದೇಶವಾಗಿದೆ. ಇದು ಸಿಂಗಾಪುರದಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು/ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ ಮತ್ತು ಸಿಂಗಾಪುರದಿಂದ ಭಾರತಕ್ಕೆ ಹಾಗೂ ಭಾರತದಿಂದ ಸಿಂಗಾಪುರಕ್ಕೆ ತ್ವರಿತವಾಗಿ ಕಡಿಮೆ-ವೆಚ್ಚದಲ್ಲಿ ಹಣ ವರ್ಗಾವಣೆ ಮಾಡುವ ಮೂಲಕ ಡಿಜಿಟಲೀಕರಣ ಮತ್ತು ಫಿನ್ ಟೆಕ್ ನ ಪ್ರಯೋಜನಗಳನ್ನು ಜನಸಾಮಾನ್ಯರಿಗೆ ದೊರಕಿಸಿ ಕೊಡುತ್ತದೆ. ಸಿಂಗಾಪುರದ ಆಯ್ದ ವ್ಯಾಪಾರಿ ಮಳಿಗೆಗಳಲ್ಲಿ QR ಕೋಡ್‌ಗಳ ಮೂಲಕ UPI ಪಾವತಿಗಳನ್ನು ಸ್ವೀಕರಿಸುವ ಸೌಲಭ್ಯ ಈಗಾಗಲೇ ಲಭ್ಯವಿದೆ.

Related News

spot_img

Revenue Alerts

spot_img

News

spot_img