ಬೆಂಗಳೂರು, ಫೆಬ್ರವರಿ 17; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದರು.3,09,182 ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲಾಗಿದೆ.ಈ ಸರ್ಕಾರದ ಕೊನೆಯ ಬಜೆಟ್ ಕೂಡ ಆಗಿದೆ. ಆರು ವಲಯಗಳಾಗಿ ವಿಭಾಗಿಸಿ ಅನುದಾನ ಬಿಡುಗಡೆ ಮಾಡಲಾಗಿದೆ.ವೆಚ್ಚಕ್ಕಿಂತ ಹೆಚ್ಚು ಆದಾಯ ಇರುವ ಬಜೆಟ್ ಆಗಿದೆ.ಅಂದರೆ ರೆವೆನ್ಯೂ ಸರ್ಪ್ಲಸ್ ಬಜೆಟ್ ಆಗಿದೆ,ಭಾರತದಲ್ಲಿ ಅತಿದೊಡ್ಡ ಬಜೆಟ್ ಉತ್ತರಪ್ರದೇಶದ್ದಾಗಿದೆ. ಉತ್ತರ ಪ್ರದೇಶ, ಕರ್ನಾಟಕ ಬಿಟ್ಟರೆ 3 ಲಕ್ಷ ಕೋಟಿ ರೂ ಬಜೆಟ್ ಗಾತ್ರ ದಾಟಿದ ರಾಜ್ಯಗಳೆಂದರೆ ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಮಾತ್ರ.ಈ ಬಾರಿಯ ಬಜೆಟ್‌ನಲ್ಲಿ ಕೃಷಿ, ಕೈಗಾರಿಕೆ, ಶಿಕ್ಷಣ, ಮಹಿಳಾ ಅಭಿವೃದ್ಧಿ, ರೈತರಿಗೆ ವಿಶೇಷ ಅನುದಾನ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. 2023-24ನೇ ಸಾಲಿನ ಬಜೆಟ್‌ನಲ್ಲಿ ಇಲಾಖಾವಾರು ಅನುದಾನದ ಹಂಚಿಕೆ ಈ ಕೆಳಗಿನಂತಿದೆ.
ವಿವಿಧ ವಲಯಗಳಿಗೆ ಅನುದಾನದ ಹಂಚಿಕೆ ಈ ಕೆಳಗಿನಂತಿದೆ.
* ಸಾರಿಗೆ ಇಲಾಖೆಗೆ 14,509 ಕೋಟಿ ರೂ
*ಬೆಂಗಳೂರು ಸಮಗ್ರ ಅಭಿವೃದ್ಧಿ 9,698 ಕೋಟಿ ರೂ
*ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ 3,458 ಕೋಟಿ ರೂ
*ಜಲಸಂಪನ್ಮೂಲ ಇಲಾಖೆಗೆ 22,854 ಕೋಟಿ ರೂ
*ಮಹಿಳೆಯರ ಸಬಲೀಕರಣ ಮತ್ತು ಕ್ಷೇಮಾಭಿವೃದ್ಧಿಗೆ: 46,278 ಕೋಟಿ ರೂ
* ಗ್ರಾಮೀಣಾಭಿವೃದ್ಧಿ ಇಲಾಖೆಗೆ 20,494 ಕೋಟಿ ರೂ
*ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅಡಿ 30,215 ಕೋಟಿ ರೂ
*ಶಿಕ್ಷಣ ಇಲಾಖೆಗೆ 37,960 ಕೋಟಿ ರೂ
*ಕೃಷಿ ಮತ್ತು ಪೂರಕ ಚಟುವಟಿಕೆಗಳು: 39,031 ಕೋಟಿ ರೂ
*ಆರೋಗ್ಯ ವಲಯ ಇಲಾಖೆಗೆ 15,151 ಕೋಟಿ ರೂ
*ನಗರಾಭಿವೃದ್ಧಿ ಇಲಾಖೆಗೆ 17,938 ಕೋಟಿ ರೂ
*ಲೋಕೋಪಯೋಗಿ ಇಲಾಖೆಗೆ 10,741 ಕೋಟಿ ರೂ
*ವಸತಿ ಇಲಾಖೆಗೆ 3,787 ಕೋಟಿ ರೂ
*ಆಹಾರ ವಲಯ ಇಲಾಖೆಗೆ 4,600 ಕೋಟಿ ರೂ
*ಮಕ್ಕಳ ಅಭ್ಯುದಯಕ್ಕೆ: 47,256 ಕೋಟಿ ರೂ
*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-5,676 ಕೋಟಿ ರೂಪಾಯಿ