22 C
Bengaluru
Monday, December 23, 2024

ರಾಜ್ಯ ಬಜೆಟ್: ಕೃಷಿ ಕ್ಷೇತ್ರಕ್ಕೆ ಬಂಪರ್ ಆಫರ್: ರೈತರಿಗೆ 5 ಲಕ್ಷ ಸಾಲಕ್ಕೆ ಶೂನ್ಯ ಬಡ್ಡಿ

ಬೆಂಗಳೂರು, ಫೆ. 17 : ಕರ್ನಾಟಕ 2023-24 ರ ರಾಜ್ಯ ಬಜೆಟ್ ಅನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಡಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ 2ನೇ ಬಜೆಟ್ನಲ್ಲಿ ಸರಿಸುಮಾರು 3 ಲಕ್ಷ ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ. ಈ ಬಾರಿಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಬಂಪರ್ ಆಫರ್ ಘೋಷಿಸಲಅಗಿದೆ. ರೈತರಿಗೆ ಉತ್ತೇಜನ ನೀಡಲು ಸಿಎಂ ಬೊಮ್ಮಾಯಿ ಅವರ ಸರ್ಕಾರ ಕೃಷ್ಟಿ ಕ್ಷೇತ್ರಕ್ಕೆ ಸಬ್ಸಿಡಿ, ಶೂನ್ಯ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಿ ಘೋಷಿಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕೃಷ್ಟಿ ಕೇತ್ರಕ್ಕೆ ನೀಡಿದ ಬಜೆಟ್ ನಲ್ಲಿ ಯಾವೆಲ್ಲಾ ಯೋಜನೆಗಳನ್ನು ಜಾರಿಗೆ ತಂದಿದೆ ನೋಡಿ.

ಕೃಷಿ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಹಲವು ಮಹತ್ವಪೂರ್ಣ ಕ್ರಮಗಳನ್ನು ಕೈಗೊಂಡಿದೆ. ತಂತ್ರಜ್ಞಾನ ಹಾಗೂ ವೈಜ್ಞಾನಿಕ ಪದ್ಧತಿಗಳ ಅಳವಡಿಕೆಯ ಮೂಲಕ ರೈತರು ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳಲು ಸರ್ಕಾರ ಪೂರಕ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಕೃಷಿಯನ್ನು ಲಾಭದಾಯಕವಾಗಿಸಲು ಸರ್ಕಾರ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಹಾಗೂ ರಪ್ತಿಗೆ ಒತ್ತು ನೀಡಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ಮೂಲಕ ರೈತರ ಆದಾಯದಲ್ಲಿ ಸ್ಥಿರತೆಯನ್ನು ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು. ಕೃಷಿ ಮತ್ತು ತೋಟಗಾರಿಕೆ: 9,456 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.

ರೈತರಿಗೆ ಶೂನ್ಯ ಬಡ್ಡಿ: ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ಬಜೆಟ್ ನಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದ ವರೆಗೂ ಸಾಲವನ್ನು ಘೋಷಿಸಿದೆ. ಇದುವರೆಗೂ ರೈತರಿಗೆ ನೀಡಲಾಗುತ್ತಿದ್ದ 3 ಲಕ್ಷದವರೆಗಿನ ಶೂನ್ಯ ಬಡ್ಡಿದರದ ಸಾಲದ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ರೈತರಿಗೆ ಕೃಷಿ ಕೆಲಗಳನ್ನು ಮಾಡಲು ಸಹಾಯವಾಗಿದೆ.

 

ಪಿಎಂ-ಕಿಸಾನ್ ಯೋಜನೆ: ಇನ್ನು ಪಿಎಂ ಕಿಸಾನ್ ಯೀಜನೆ ಅಡಿಯಲ್ಲಿ ಕೇಂದ್ರ ಸರ್ಕಾರ 10,930 ಕೋಟಿ ರೂ. ಅನ್ನು ರೈತರ ಖಾತೆಗೆ ಜಮೆ ಮಾಡಲಿದೆ. ಇದೇ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ 4,822 ಕೋಟಿ ರೂ. ಅನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ. ಒಟ್ಟು 15,752 ಕೋಟಿ ರೂ. ಗಳನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಹೇಳಿದರು.

ಹನಿ ನೀರಾವರಿ ಯೋಜನೆ: ಇನ್ನು ಕೃಷಿ ಜಮೀನುಗಳಿಗೆ ಹನಿ ನೀರಾವರಿ ಯೋಜನೆಗಳಿಗೆ 2,900 ಕೋಟಿ ರೂ. ಅನ್ನು ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಮೀಸಲಿಟ್ಟಿದೆ. ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿ ಯೋಜನೆಗೆ ಮಾರುಕಟ್ಟೆ ನೆರವು ನೀಡಲಾಗಿದೆ.

ಇನ್ನು ಉಳಿದಂತೆ ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ ನೆರವು ಒದಗಿಸಲಾಗಿದೆ. 400 ಕೋಟಿ ರೈತ ಶಕ್ತಿ ಯೋಜನೆಗೆ ಮೀಸಲಿಟ್ಟಿದೆ. ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು 2,037 ಕೋಟಿ ರೂ. ಅನ್ನು ಒದಗಿಸಲಾಗಿದೆ. ಇದಲ್ಲದೇ, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ ಸರ್ಕಾರ 962 ಕೋಟಿ ರೂ. ವೆಚ್ಚ ಮಾಡಲಾಗಿದೆ. ದ್ರಾಕ್ಷಿ ಬೆಳೆಗಾರರಿಗೆ ನೆರವಾಗಲು ಕರ್ನಾಟಕ ರಾಜ್ಯ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ ಮುಖಾಂತರ 100 ಕೋಟಿ ರೂ. ಗಳ ವೆಚ್ಚದಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗುವುದು. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯವನ್ನು ಸ್ಥಾಪಿಸಲಲು ಸರ್ಕಾರ ಅಸ್ತು ಎಂದಿದೆ.

ರಾಜ್ಯದ 10 ಪ್ರಮುಖ ರೇಷ್ಮೆ ಬೆಳೆಯುವ ಪ್ರದೇಶಗಳಲ್ಲಿ Hot Air Conveyor Dryer ಅನ್ನು ಅಳವಡಿಸಲು 5 ಕೋಟಿ ರೂ. ಗಳ ಅನುದಾನ ನೀಡಲಾಗಿದೆ. 32 ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂಪಾಯಿ ಅನ್ನು ಮೀಸಲಿಡಲಾಗಿದೆ. 1,000 ರೇಷ್ಮೆ ಬೆಳೆಗಾರರಿಗೆ ಬ್ರೆಡ್ಡರ್ಸ್ ಗಳನ್ನು ಒದಗಿಸಲು 12 ಕೋಟಿ ರೂ. ನೆರವು ನೀಡಲಾಗಿದೆ. ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆಯಡಿ 75 ಕೋಟಿ ರೂ. ಗಳ ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಿಸಲಿದೆ.

Related News

spot_img

Revenue Alerts

spot_img

News

spot_img