ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ (ಫೆ 17) ಮಂಡಿಸಲಿರುವ 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ,ಮುಂದಿನ ಹಣಕಾಸು ವರ್ಷಕ್ಕೆ ಅನ್ವಯವಾಗುವಂತಹ ಬಜೆಟ್ ಫೆ.17ರಂದು ಬೆಳಿಗ್ಗೆ 10.15 ಕ್ಕೆ ಮಂಡನೆಯಾಗಲಿದೆ. ಇದರ ಗಾತ್ರ ಎಷ್ಟಿರಬಹುದು ಎಂಬ ಕುತೂಹಲದ ವಿಚಾರ ಈಗ ಚರ್ಚೆಯಲ್ಲಿಇರುವ ವಿಷಯವಾಗಿದೆ,2023-24ನೇ ಸಾಲಿನ ರಾಜ್ಯ ಬಜೆಟ್ ಗಾತ್ರವು 3 ಲಕ್ಷ ಕೋಟಿ ರೂ.ಗಳ ಗಡಿ ಮುಟ್ಟುವ ಸಾಧ್ಯತೆ ಗಳಿವೆ.
ಬಜೆಟ್ ಗಾತ್ರ,ನಿರೀಕ್ಷೆಗಳೇನು,
ಹಣಕಾಸು ಖಾತೆಯನ್ನಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಂದಿರುವ ಕಾರಣ, ಬಜೆಟ್ ಅನ್ನು ಅವರೇ ಮಂಡಿಸಲಿದ್ದಾರೆ.ಇದು ವೈಯಕ್ತಿಕವಾಗಿ ಅವರ ಎರಡನೇ ಬಜೆಟ್, ಅವರ ಈ ಅವಧಿಯ ಕೊನೆಯ ಬಜೆಟ್ ಕೂಡ.ಕಳೆದ ಸಲದ ಬಜೆಟ್ 2,65,720 ಕೋಟಿ ರೂಪಾಯಿ ಗಾತ್ರದ್ದಾಗಿತ್ತು,ಈ ಸಲ ಅವರು ಮಂಡಿಸುವ ಬಜೆಟ್ 3 ಲಕ್ಷ ಕೋಟಿ ರೂಪಾಯಿ ಗಾತ್ರದ್ಧಾಗಿರಲಿದೆ,ದೇಶದಲ್ಲಿ ನೆರೆಯ ಮಹಾರಾಷ್ಟ್ರ ದೊಡ್ಡ ಗಾತ್ರದ ಬಜೆಟ್ ಮಂಡನೆ ಮಾಡುತ್ತದೆ. ನಂತರದ ಸ್ಥಾನದಲ್ಲಿ ಕರ್ನಾಟಕವಿದೆ ,ಮಾಧ್ಯಮಗಳ ಮೂಲಗಳ ಸಿಕ್ಕ ಮಾಹಿತಿ ಪ್ರಕಾರ ಉತ್ತಮ ಆದಾಯ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಮತ್ತು ಚುನಾವಣೆ ವರ್ಷವಾಗಿರುವ ಕಾರಣ ಜನಪ್ರಿಯ ಯೋಜನೆಗಳ ಘೋಷಿಸುವ ನಿರೀಕ್ಷೆ ಇದೆ. .ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 40,000 ಕೋಟಿ ರೂಪಾಯಿ, ಬೆಂಗಳೂರು ಮಹಾನಗರದ ಸಮಗ್ರ ಅಭಿವೃದ್ಧಿಗೆ 10,000 ಕೋಟಿ ರೂಪಾಯಿ,ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಇತರ ಜನಕಲ್ಯಾಣ ಕಾರ್ಯಕ್ರಮಗಳಿಗೆ 10,000 ಕೋಟಿ ರೂ.ಮಹಿಳಾ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ 50,000 ಕೋಟಿ ರೂಪಾಯಿ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 75,000 ಕೋಟಿ ರೂಪಾಯಿ, ಎಸ್‍ಸಿ-ಎಸ್‍ಟಿ/ಟಿಎಸ್‍ಪಿಗೆ 35,000 ಕೋಟಿ ರೂಪಾಯಿ ನೀಡುವ ಸಾಧ್ಯತೆ ಇದೆ.ರೈತರನ್ನು ಸ್ವಾವಲಂಬಿಗಳಾಗಿಸಲು ಕೃಷಿ ಯಂತ್ರೋಪಕರಣ ಸಬ್ಸಿಡಿ ಇನ್ನಿತರ ಸಾಂಪ್ರದಾಯಿಕ ಉಪಕ್ರಮಗಳ ಜತೆಗೆ ಬೆಳೆ ನಷ್ಟ, ಹವಾಮಾನ ವೈಪರೀತ್ಯದಿಂದ ಕೃಷಿ ಕ್ಷೇತ್ರದ ಮೇಲಾಗಿರುವ ದುಷ್ಪರಿಣಾಮ ನೀಗಿಸಲು ವಿಶೇಷ ಒತ್ತು ಕೊಡುವ ನಿರೀಕ್ಷೆ. ಕೃಷ್ಣಾ, ಕಾವೇರಿ ಕಣಿವೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಭಾರಿ ಅನುದಾನ ನಿರೀಕ್ಷಿಸಲಾಗಿದೆ. ಕಳಸಾ-ಬಂಡೂರಿ, ಮೇಕೆದಾಟು ಕುಡಿಯುವ ನೀರಿನ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೂ ನಿರೀಕ್ಷೆಯಿದೆ.ಚುನಾವಣೆಯಲ್ಲಿ ಸರ್ಕಾರಿ ನೌಕರರ ಮತಗಳನ್ನು ಸೆಳೆಯಲು,ಏಳನೇ ವೇತನ ಆಯೋಗ ರಚನೆ ಮಾಡಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವಾಗಲಿದೆ
9 ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ, 60,000 ಕೋಟಿ ರೂಪಾಯಿಗೂ ಅಧಿಕ ವಾಣಿಜ್ಯ ತೆರಿಗೆ ಸಂಗ್ರಹಿಸಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ 70,000 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ,ಅಬಕಾರಿ ಇಲಾಖೆಯು ಅಂಕಿ-ಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜನವರಿ ಅಂತ್ಯದ ತನಕ 24,724.27 ಕೋಟಿ ರೂಪಾಯಿ ಅಬಕಾರಿ ಆದಾಯ ಸಂಗ್ರಹವಾಗಿದೆ. ಇದು 29,000 ಕೋಟಿ ರೂಪಾಯಿ ಆದಾಯದ ಗುರಿಯ ಶೇ.85.26 ರಷ್ಟಿದೆ.ಮೊದಲ ಆರು ತಿಂಗಳ ಅವಧಿಯಲ್ಲಿ 70,000 ಕೋಟಿ ರೂಪಾಯಿಗೂ ಹೆಚ್ಚಿನ ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಈ ಆರ್ಥಿಕ ವರ್ಷ 53,220 ಕೋಟಿ ರೂಪಾಯಿ ಜಿಎಸ್‍ಟಿ ಸಂಗ್ರಹ ನಿರೀಕ್ಷೆ ಮಾಡಲಾಗಿದೆ.