23.6 C
Bengaluru
Thursday, December 19, 2024

“ವಾರದಲ್ಲಿ ಎರಡು ದಿನ ರಜೆ ನೀಡುವಂತೆ 7ವೇತನ ಆಯೋಗಕ್ಕೆ ಬೇಡಿಕೆ ಸಲ್ಲಿಸಿದ ರಾಜ್ಯದ ಸರಕಾರಿ ನೌಕರರ ಸಂಘ:-

ದಿನಾಂಕ:-10.02.2023 ರಂದು ರಾಜ್ಯದ ಸರಕಾರಿ ನೌಕರರ ಸಂಘವು ರಾಜ್ಯ ಸರ್ಕಾರ ರಚನೆ ಮಾಡಿ ಆದೇಶ ಒರಡಿಸಿದ್ದ ಏಳನೇ ವೇತನ ಆಯೋಗಕ್ಕೆ ತನ್ನ ನೌಕರರ ಹಿತಾದೃಷ್ಟಿಯಿಂದ ತನ್ನದೆ ಆದ ವಿವಿಧ ಬೇಡಿಕೆಗಳ 65 ಪುಟಗಳ ವರದಿಯನ್ನು ಸಲ್ಲಿಸಿದೆ. ಸರ್ಕಾರಿ ಕಚೇರಿ ಅವಧಿ ವಿಸ್ತರಣೆಯ ಜೊತೆಗೆ ವಾರದಲ್ಲಿ ಎರಡು ದಿನ ರಜೆ ನೀಡುವಂತೆ ಕೇಳಿದೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ನಿರ್ವಹಣೆಯ ವೆಚ್ಚ ತಗ್ಗುವ ಮೂಲಕ ಉಳಿತಾಯವಾಗಲಿದೆ ಹಾಗೂ ಇಂಧನ, ವಾಹನ ದಟ್ಟಣೆ ಸಮಸ್ಯೆಯೂ ತಗ್ಗಲಿದೆ ಹಾಗೂ ನೌಕರರು ಉತ್ಸುಕವಾಗಿ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ವಿವರಿಸಿದೆ.

ಪ್ರಸ್ತುತ ರಾಜ್ಯ ಸರ್ಕಾರವು ಈಗಾಗಲೇ 2ನೇ ಮತ್ತು 4ನೇ ಶನಿವಾರ ರಾಜ್ಯ ಸರಕಾರಿ ಕಚೇರಿಗಳಿಗೆ ರಜೆ ಇದ್ದು, ತಿಂಗಳ ಮೊದಲ ಮತ್ತು ಮೂರನೇ ಶನಿವಾರವೂ ಸಾರ್ವತ್ರಿಕ ರಜೆ ಘೋಷಣೆಗೆ ಸರಕಾರಕ್ಕೆ ಶಿಫಾರಸು ಮಾಡುವಂತೆ ತನ್ನ ಬೇಡಿಕೆ ಸಲ್ಲಿಸಿದೆ. ತಿಂಗಳ ಎಲ್ಲ ಶನಿವಾರಗಳೂ ಸಾರ್ವತ್ರಿಕ ರಜೆ ಘೋಷಣೆ ಮಾಡಿ, ವಾರದಲ್ಲಿ ಐದು ದಿನಗಳಿಗೆ ಕರ್ತವ್ಯದ ದಿನಗಳನ್ನು ನಿಗದಿಪಡಿಸಬೇಕು. ಕಚೇರಿ ವೇಳೆಯನ್ನು ಬೆಳಗ್ಗೆ 10 ಗಂಟೆ ಬದಲಿಗೆ 9.30 ಕ್ಕೆ ಹಾಗೂ ಕಚೇರಿ ಮುಗಿಯುವ ವೇಳೆಯನ್ನು ಸಂಜೆ 5.30ಕ್ಕೆ ಬದಲಾಗಿ 6 ಗಂಟೆ ವರೆಗೆ ನಡೆಸಬೇಕು. ಅಂದರೆ, ಪ್ರತಿದಿನ ಹೆಚ್ಚುವರಿ ಒಂದು ತಾಸು ಕಚೇರಿ ವೇಳೆಯನ್ನು ಹೆಚ್ಚಿಸಬಹುದು ಎಂದು ಸಂಘವು ತನ್ನ ಅಭಿಪ್ರಾಯವನ್ನು ಆಯೋಗಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ದಾಖಲಿಸಿದೆ.

ಸರಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ರಾಜ್ಯ 7ನೇ ವೇತನ ಆಯೋಗವು ಕಳೆದ ಜ.17 ರಂದು ಪ್ರಶ್ನಾವಳಿ ಬಿಡುಗಡೆ ಮಾಡಿತು. ಅಂತೆಯೇ ಸಂಘವು ರಾಜ್ಯಾದ್ಯಂತ ಅಧಿಕಾರಿ ಮತ್ತು ನೌಕರರ ಅಭಿಪ್ರಾಯ ಸಂಗ್ರಹಿಸಿ, ಪ್ರಶ್ನಾವಳಿಗೆ ಉತ್ತರ ಒಳಗೊಂಡ ಒಟ್ಟು 65 ಪುಟಗಳ ವರದಿಯನ್ನು ಶುಕ್ರವಾರ ಆಯೋಗಕ್ಕೆ ಸಲ್ಲಿಸಿತು. ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದಲ್ಲಿ ಹಿರಿಯ ಪದಾಧಿಕಾರಿಗಳ ನಿಯೋಗ ಆಯೋಗದ ಅಧ್ಯಕ್ಷರಿಗೆ ಅಭಿಪ್ರಾಯ ಮತ್ತು ಸಲಹೆ ರೂಪದ ವರದಿ ಸಲ್ಲಿಸಿತು.

Related News

spot_img

Revenue Alerts

spot_img

News

spot_img