23 C
Bengaluru
Thursday, February 6, 2025

ಮನೆಯ ಪೂಜಾ ಕೊಠಡಿ ವಾಸ್ತು ಪ್ರಕಾರ ಹೇಗೆ ಕಟ್ಟಬೇಕು..?

ಬೆಂಗಳೂರು, ಫೆ. 03 : ವಾಸ್ತು ಪ್ರಕಾರ ಪೂಜಾ ಗೃಹ ಅಂದರೆ, ಈಶಾನ್ಯದಲ್ಲಿ ಇರಬಹುದು. ಇಲ್ಲವಾದರೆ, ಬ್ರಹ್ಮಸ್ಥಾನದಿಂದ ಆಕ್ಸೆಸ್‌ ಮಾಡುವ ರೀತಿಯಲ್ಲಿ ಪೂಜಾ ಗೃಹವನ್ನು ಹೊಂದಿರಬಹುದು ಎಂದು ಡಾ. ರೇವತಿ ವೀ ಕುಮಾರ್‌ ಅವರು ಹೇಳುತ್ತಾರೆ. ಇನ್ನು ಯಾವ ದಿಕ್ಕಿನಲ್ಲಿ ಪೂಜಾ ಗೃಹ ಇರಬೇಕು ಎಂಬುದರ ಜೊತೆಗೆ, ಪೂಜಾ ಕೊಠಡಿಯಲ್ಲಿ ದೇವರು ಹಾಗೂ ಇತರೆ ವಸ್ತುಗಳನ್ನು ಹೇಘೆ ಅಲೈನ್‌ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.

ಇನ್ನು ಪೂಜಾ ಕೊಠಡಿಯಲ್ಲಿ ಯಾವ ವಸ್ತುವನ್ನು ಹೇಗಿಡಬೇಕು ಎಂಬುದರ ಬಗ್ಗೆಯೂ ವಾಸ್ತುವಿನಲ್ಲಿ ಹೇಳಲಾಗಿದೆ. ಪೂಜಾ ಕೊಠಡಿಯಲ್ಲಿ ಕುಳಿತು ಪೂಜೆ ಮಾಡುವಾಗ ದೇವರು ಪೂರ್ವ ದಿಕ್ಕನ್ನು ನೋಡಬೇಕು. ಇಲ್ಲವೇ ಪಶ್ಚಿಮ ದಿಕ್ಕಿನ ಕಡೆಗೆ ದೇವರು ಮುಖ ಮಾಡಿರಬೇಕು. ಅಂದರೆ ನೀವು ಪೂಜೆಗೆ ಕುಳಿತಾಗ ದೇವರು ಪಶ್ಚಿಮವನ್ನ ನೋಡುತ್ತಿದ್ದರೆ, ನಾವು ದೇವರ ಎದುರಿಗೆ ಕುಳಿತು ಪೂಜೆಯನ್ನ ಮಾಡಬಹುದು. ಇನ್ನು ದೇವರು ಪೂರ್ವವನ್ನು ನೋಡುತ್ತಿದ್ದರೆ, ದಕ್ಷಿಣದಲ್ಲಿ ಕುಳಿತು ಅಂದರೆ, ಉತ್ತರಾಭಿಮುಖವಾಗಿ ನಮ್ಮ ಎಡಕ್ಕೆ ದೇವರು ಇರಬಹುದು. ದೇವರು ಯಾವಾಘಳೂ ಪೂರ್ವ ಅಥವಾ ಪಶ್ಚಿಮ ದಿಕ್ಕನ್ನು ನೋಡಬಹುದು. ಹಾಗೆ ನಾವು ಮನುಷ್ಯರು ಪೂರ್ವ ಅಥವಾ ಪಶ್ಚಿಮ ದಿಕ್ಕನ್ನು ನೋಡುತ್ತಾ ಪೂಜೆ ಮಾಡಬಹುದು.

ಇನ್ನು ಪೂಜಾ ಮನೆಯಲ್ಲಿ ಎಷ್ಟು ಸ್ಟೆಪ್ಸ್ ಇಡಬಹುದು ಎಂದು ನೋಡೋಣ. ದೇವರ ಮನೆಯಲ್ಲಿ ಒಂದು ಸ್ಟೆಪ್ ಅನ್ನು ಇಡಬಹುದು. ಗೋಡೆಯ ಮೇಲೆ ಎಷ್ಟು ಫೋಟೋಗಳನ್ನು ಬೇಕಿದ್ದರೂ ಇಡಬಹುದು. ಆದರೆ, ಒಂದು ದೇವರ ಮುಖವನ್ನು ಮತ್ತೊಂದು ದೇವರು ನೋಡುವಂತೆ ಇಡಬಾರದು. ಇದು ಅಶುಭದ ಸಂಕೇತವಾಗಿದೆ. ಇನ್ನು ಮನೆಯಲ್ಲಿ ಸಾಕಷ್ಟು ಸ್ಥಳವಿದೆ ಎಂದಾದರೆ, ನೀವು ಒಂದು, ಮೂರು ಅಥವಾ ಐದು ಸ್ಟೆಪ್ಸ್ ಗಳನ್ನು ಮನೆಯಲ್ಲಿ ಇಡಬಹುದು. ಇನ್ನು ದೇವರ ವಿಗ್ರಹಗಳು ಮುಷ್ಠಿಗಿಂತ ಹೆಚ್ಚು ಇರಬಾರದು. ಮುಷ್ಠಿಗಿಂತಲೂ ಎತ್ತರದ ವಿಗ್ರಹವನ್ನ ಮನೆಯಲ್ಲಿ ಇಟ್ಟುಕೋಮಡರೆ, ಅದಕ್ಕೆ ತ್ರಿಕಾಲ ಪೂಜೆಯನ್ನು ಮಾಡಬೇಕು ಎಂದು ಆಗಮ ಶಾಸ್ತ್ರದಲ್ಲಿ ಹೇಳಲಾಗಿದೆ.

ಹಾಗಾಗಿ ಮನೆಯಲ್ಲಿ ಕೈ ಮುಷ್ಠಿಗಿಂತ ಕಡಿಮೆ ಇರುವ ವಿಗ್ರಹಗಳನ್ನು ಇಟ್ಟುಕೊಳ್ಳುವುದು ಸೂಕ್ತ. ಇನ್ನು ದೇವರ ಮನೆಯಲ್ಲಿ ದೇವರ ಎಣ್ಣೆ, ಬತ್ತಿ ಸೇರಿದಂತೆ ಕೆಲ ವಸ್ತುಗಳನ್ನು ಇಡುತ್ತೇವೆ. ಇದನ್ನು ದೇವರಿಗೆ ಕಟ್ಟಿರುವಂತಹ ಸ್ಟೆಪ್ ಕೆಳಗೆ ಕಬೋರ್ಡ್ ಅನ್ನು ಮಾಡಿರಲಾಗುತ್ತದೆ. ಇದು ಒಳ್ಳೆಯದಲ್ಲ. ಬದಲಿಗೆ ದಕ್ಷಿಣದಲ್ಲೋ ಪಶ್ಚಿಮದಲ್ಲೋ ಮೇಲೆ ಎತ್ತರದ ಗೋಡೆಯಲ್ಲಿ ಫಿಕ್ಸ್ ಮಾಡಿ ಇಟ್ಟುಕೊಳ್ಳಬಹುದು. ಇನ್ನು ದೇವರ ಮನೆಯ ಬಾಗಿಲು ಯಾವತ್ತೂ ಮನೆಯ ಹೊರಗಡೆ ಬಾಗಿಲನ್ನು ನೋಡದಂತೆ ಇಟ್ಟುಕೊಳ್ಳುವುದು ಸೂಕ್ತ. ಇನ್ನು ದೇವರ ಮನೆ ಎದುರು ನಿಂತ ದೇವರಿಗೆ ಸಮಸ್ಕಾರ ಹಾಕುವಾಗ ನಮ್ಮ ಬೆನ್ನು ಬಾಗಿಲನ್ನು ನೋಡುವ ಬದಲು, ಅಲ್ಲಿ ಅಡ್ಡಲಾಗಿ ಯಾವುದಾದರೂ ಗೋಡೆ ಇದ್ದರೆ ಸೂಕ್ತ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

Related News

spot_img

Revenue Alerts

spot_img

News

spot_img