21.2 C
Bengaluru
Thursday, December 26, 2024

ಭಾರತದಲ್ಲಿ ವಾಸಿಸಬಹುದಾದ 7 ನಗರಗಳು ಯಾವುದು ಗೊತ್ತೇ..?

ಬೆಂಗಳೂರು, ಫೆ. 03 : ಈ ಲೇಖನದಲ್ಲಿ, ನಾವು ಭಾರತದಲ್ಲಿ ವಾಸಿಸಲು ಯೋಗ್ಯವಾದ ಅತ್ಯುತ್ತಮ ನಗರಗಳ ಬಗ್ಗೆ ತಿಳಿಯೋಣ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ವಾಸಿಸಿಲು ಯೋಗ್ಯವಾದ ನಗರಗಳನ್ನು ಆರಿಸುವುದಾದರೆ ಯಾವೆಲ್ಲಾ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದನ್ನು ಮೊದಲು ನೋಡೋಣ. ಜೀವನದ ಗುಣಮಟ್ಟ, ನಗರದ ಆರ್ಥಿಕ ಸಾಮರ್ಥ್ಯ ಮತ್ತು ಸುಸ್ಥಿರತೆ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಆಶ್ರಯ ಇತ್ಯಾದಿಗಳಂತಹ 13 ವರ್ಗಗಳ ಆಧಾರದ ಮೇಲೆ ಮಾನದಂಡಗಳನ್ನು ಪಟ್ಟಿ ಮಾಡಲಾಗುತ್ತದೆ. ಇದರ ಆಧಾರದ ಮೇಲೆ ನಗರಗಳನ್ನು ಆಯ್ಕೆ ಮಾಡಲಾಗುತ್ತದೆ.

ಭಾರತದಲ್ಲಿ 7 ಅತ್ಯಂತ ವಾಸಯೋಗ್ಯ ನಗರಗಳನ್ನು ಯುರೋಪಿಯನ್ ಇಂಟೆಲಿಜೆನ್ಸ್ ಯೂನಿಟ್ 2022 ರ ಜಾಗತಿಕ ಲಿವೆಬಲಿಟಿ ಇಂಡೆಕ್ಸ್ ಪ್ರಕಾರ ಆಯ್ಕೆ ಮಾಡಲಾಗಿದೆ. ಈ ಶ್ರೇಯಾಂಕಗಳು ಜೀವನದ ಗುಣಮಟ್ಟ, ಆರ್ಥಿಕ ಸಾಮರ್ಥ್ಯ, ಸುಸ್ಥಿರತೆ, ಶಿಕ್ಷಣ ಮತ್ತು ಇನ್ನೂ ಹೆಚ್ಚಿನದನ್ನು ಗಮನದಲ್ಲಿಟ್ಟುಕೊಂಡು ನಗರಗಳನ್ನು ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ಒಟ್ಟು 7 ನಗರಗಳನ್ನು ವಾಸಿಸಲು ಯೋಗ್ಯವಾದ ನಗರಗಳು ಎಂದು ಹೇಳಲಾಗಿದೆ. ಅದರಲ್ಲಿ ಮೊದಲನೇಯ ಸ್ಥಾನವನ್ನು ಕರ್ನಾಟಕದ ರಾಜಧಾನಿ ಬೆಂಗಳೂರು ಪಡೆದಿದೆ. ನಂತರ ಪುಣೆ, ಅಹಮದಾಬಾದ್, ಚೆನ್ನೈ, ಸೂರತ್, ನವಿ ಮುಂಬೈ, ಕೊಯಂಬತ್ತೂರು ನಗರಗಳು ಇವೆ.

ಬೆಂಗಳೂರು : ಭಾರತದಲ್ಲಿ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಸಿಲಿಕಾನ್ ವ್ಯಾಲಿಯಾದ ಬೆಂಗಳೂರು ಸದಾ ತನ್ನ ಸಂಪೂರ್ಣ ಪರಿಪೂರ್ಣತೆಯಿಂದ ಮಂತ್ರಮುಗ್ಧಗೊಳಿಸುತ್ತದೆ.

ಪುಣೆ: ಪಟ್ಟಿಯ ಪ್ರಕಾರ ಪುಣೆ ಭಾರತದ ಎರಡನೇ ಅತ್ಯಂತ ವಾಸಯೋಗ್ಯ ನಗರವಾಗಿದೆ. ಇದನ್ನು ಟೌನ್ ಆಫ್ ಕಾಲೇಜು ಎಂದು ಕೂಡ ಕರೆಯಲಾಗುತ್ತದೆ. ಮರಾಠಿ ಸಂಸ್ಕೃತಿ ಮತ್ತು ಆಹಾರವನ್ನು ಇಷ್ಟಪಡುವ ಜನರಿಗೆ ಪುಣೆಯಲ್ಲಿ ವಾಸ ಮಾಡುವುದು ಸುಲಭ.

ಅಹಮದಾಬಾದ್: ಆರ್ಥಿಕ ಬೆಳವಣಿಗೆಯ ಅತ್ಯುತ್ತಮ ನಗರವಾಗಿರುವ ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ. ಈ ಕೈಗಾರಿಕಾ ಮತ್ತು ವಾಣಿಜ್ಯ ನಗರ ವಿವಿಧ ಕಾರಣಗಳಿಗಾಗಿ ಪ್ರಸಿದ್ಧವಾಗಿದೆ. ಹಳೆಯ ಷೇರು ವಿನಿಮಯ ಕೇಂದ್ರಗಳಲ್ಲಿ ಅಹಮದಾಬಾದ್ ಒಂದಾಗಿದೆ.

ಚೆನ್ನೈ: ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್ 2022 ರಲ್ಲಿ ಚೆನ್ನೈ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಈ ನಗರದಲ್ಲಿ ಆಟೋಮೊಬೈಲ್ ಉದ್ಯಮಗಳು, ದೇವಾಲಯಗಳು, ಚರ್ಚ್ಗಳು ಮತ್ತು ಬೀಚ್ಗಳ ಸಂಯೋಜನೆಯಾಗಿದೆ.

ಸೂರತ್: ಇದನ್ನು ಭಾರತದ ಡೈಮಂಡ್ ಸಿಟಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ವಾಸಿಸಲು ಯೋಗ್ಯವಾದ ನಗರಗಳ ಪಟ್ಟಿಯಲ್ಲಿ ಸೂರತ್ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ವ್ಯಾಪಾರ ಕೇಂದ್ರಗಳಲ್ಲಿ ಸೂರತ್ ಒಂದಾಗಿದೆ.

ನವಿ ಮುಂಬೈ: ಭಾರತದ ಆರನೇ ವಾಸಯೋಗ್ಯ ನಗರವಾಗಿದೆ. ಈ ನಗರವನ್ನು 1971 ರಲ್ಲಿ ಉಪಗ್ರಹ ಟೌನ್ಶಿಪ್ ಆಗಿ ನಿರ್ಮಿಸಲಾಯಿತು. ಅಲ್ಲದೆ, ಇದು ವಾಸಿಸಲು ಕೈಗೆಟುಕುವ ನಗರವಾಗಿದೆ. ಇಲ್ಲಿ ಬೆಲೆಗಳು ಶೇ. 10 ರಷ್ಟು ಅಗ್ಗವಾಗಿವೆ.

ಕೊಯಮತ್ತೂರು: ಏಳನೇ ಅತ್ಯಂತ ವಾಸಯೋಗ್ಯ ನಗರವಾಗಿದ್ದು, ಇದು ನೊಯ್ಯಲ್ ನದಿಯ ದಡದಲ್ಲಿದೆ. ಈ ನಗರವು ನಿಮ್ಮನ್ನು ನೈಸರ್ಗಿಕವಾಗಿ ಆಕರ್ಷಿಸುತ್ತದೆ.

Related News

spot_img

Revenue Alerts

spot_img

News

spot_img