ಕಳೆದ ವರ್ಷ ಮೇ 2022 ರಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ರವರ ವಿರುದ್ದ ಕೇಳಿಬಂದಿದ್ದ ಭ್ರಷ್ಟಚಾರ ಆರೋಪದ ಬಗ್ಗೆ ಚರ್ಚಿಸುವ ಸಲುವಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತ ಮುಖಂಡರು ನಗರದ ಗಾಂಧಿ ಭವನದಲ್ಲಿ ಆತ್ಮಾವಲೋಕನ ಹಾಘೂ ಸ್ಪಷ್ಟಿಕರಣ ಸಭೆ ನಡೆಸಿದ್ದರು ಈ ಸಭೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ರವರ ಮೇಲೆ ಶಿವಕುಮಾರ್ , ಭರತ್ ಶೆಟ್ಟಿ ಹಾಗೂ ಇತರರು ಸೇರಿ ಮಸಿ ಎರಚಿದ್ದ ಸಂಬಂಧ ಸದರಿರವರ ಮೇಲೆ ದೂರು ದಾಖಲಾಗಿ ನ್ಯಾಯಾಂಗ ಬಂದನಕ್ಕೆ ಒಳಗಾಗಿದ್ದರೂ ಆದರೆ ಈಗ ಈ ಪ್ರಕರಣ ತಿರುವು ಪಡೆದುಕೊಂಡಿದ್ದು ಇದೀಗ ಟಿಕಾಯತ್ ಹಾಗೂ ಇತರರ ವಿರುದ್ದವೆ ಎಫ್.ಐ.ಆರ್ ದಾಖಲಾಗಿದೆ.
ಟಿಕಾಯತ್ ರವರ ಮೇಲೆ ಮಸಿ ಎರಚಿರುವ ಬಗ್ಗೆ ಆರೋಪ ಎದುರಿಸುತ್ತಿರುವವರ ಪೈಕಿ ಆರೋಪಿ ಹೆ.ಆರ್ ಶಿವಕುಮಾರ್ ಘಟನೆ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ (PCR) ಹೂಡಿದ್ದರು, ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ ಎನ್ನಲಾಗಿದೆ.
ಶಿವಕುಮಾರ್ ರವರು ತಮ್ಮ ದೂರಿನಲ್ಲಿ ಆರೋಪಿ ಅನುಸೂಯಮ್ಮ ರವರು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದು ತಾನು ಅದನ್ನು ಪ್ರಶ್ನಿಸಿ ಕನ್ನಡದಲ್ಲಿ ಮಾತನಾಡಲು ಒತ್ತಾಯಿಸಿದಾಗ ಅವರು ಕನ್ನಡದಲ್ಲಿ ಮಾತನಾಡದೇ ತೆಲುಗಿನಲ್ಲಿಯೇ ತಮ್ಮ ಭಾಷಣವನ್ನು ಮುಂದುವರೆಸಿದ್ದರಿಂದ ತಾನು ಅವರ ಮೈಕ್ ಕಸಿಯಲು ಮುಂದಾದಾಗ ನನ್ನನು ಆರೋಪಿಗಳಾದ ರಾಕೇಶ್ ಟಿಕಾಯತ್, ಯುದ್ದವೀರ್ ಸಿಂಗ್, ಬಿ ಅನುಸೂಯಮ್ಮ ಹಾಗೂ ಇತರರು ತಡೆದು ಅಲ್ಲಿಯೇ ಇದ್ದ ಕುರ್ಚಿಗಳಿಂದ ನನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.