14.9 C
Bengaluru
Thursday, January 9, 2025

ಕೇಂದ್ರ ಬಜೆಟ್: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಸಿಗಲಿದ್ಯಾ..?

ಬೆಂಗಳೂರು, ಜ. 31 : ಪ್ರತಿಯೊಬ್ಬರ ಮನೆಯಲ್ಲೂ ಈಗ ಅಡುಗೆ ಮಾಡಲು ಗ್ಯಾಸ್‌ ಸಿಲಿಂಡರ್‌ ಅಗತ್ಯವಾಗಿ ಇರಲೇಬೇಕು. ಮೊದಲೆಲ್ಲಾ 500 ರೂಪಾಯಿ ಒಳಗೆ ಅಡುಗೆ ಅನಿಲ ಸಿಗುತ್ತಿತ್ತು. ಆದರೆ, ಈಗ ಸಿಲಿಂಡರ್‌ ಬೆಲೆ ಸಾವಿರ ರೂಪಾಯಿಗೂ ಅಧಿಕವಾಗಿದೆ. ಮೊದಲು ಸಬ್ಸಿಡಿಯಾದರೂ ಬರುತ್ತಿತ್ತು. ಆದರೆ ಈಗ ಅದೂ ಬರುತ್ತಿಲ್ಲ. ಪ್ರತೀ ತಿಂಗಳೂ ಸಿಲಿಂಡರ್‌ ಬೆಲೆ ಪರಿಷ್ಕರಣೆಯಾದಾಗಲೂ ಬೆಲೆ ಏರಿಕೆಯಾದರೆ, ಗ್ರಾಹಕರು ಕೊರಗುತ್ತಾರೆ. ಹೀಗಿರುವಾಗ ಈ ಬಾರಿಯ ಬಜೆಟ್‌ ನಲ್ಲಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆಯಾಗಬಹುದೇ ಎಂದು ಗ್ರಾಹಕರು ನೀರಿಕ್ಷೆಯಲ್ಲಿದ್ದಾರೆ. ಅದರಲ್ಲೂ ಪ್ರತಿ ಮನೆಯ ಮಹಿಳೆಯರಂತೂ ಮನೆ ಖರ್ಚು ಕಡಿಮೆಯಾಗಬಹುದು ಎಂದು ಆಲೋಚಿಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ದೇಶದ ಜನರಿಗೆ ಉಚಿತ ಸಿಲಿಂಡರ್‌ ಅನ್ನು ವಿತರಣೆ ಮಾಡಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರ ಸುಮಾರು 5812 ಕೋಟಿಗಳ ಬಜೆಟ್ ಅನ್ನು ಉಚಿತ ಸಿಲಿಂಡರ್‌ ವಿತರಣೆಗೆ ಮೀಸಲಿರಿಸಿದೆ. ಈದನ್ನು ಹೀಗೆ ಮುಂದುವರಿಸುವ ನಿರೀಕ್ಷೆ ಇದೆ. ಈ ಯೋಜನೆಯ ಲಾಭವನ್ನು ಗ್ರಾಹಕರಿಗೆ ಶೇ.100 ರಷ್ಟು ತಲುಪಲು ಸರ್ಕಾರ ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ. ಉಜ್ವಲ ಯೋಜನೆ ಅಡಿಯಲ್ಲಿ ಈಗಾಗಲೇ 12 ಸಿಲಿಂಡರ್‌ ಗಳಿಗೆ 200 ರೂಪಾಯಿ ಸಬ್ಸಿಡಿಯನ್ನು ನೀಡಲಾಗುತ್ತಿದೆ.

ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯನ್ನು ಮೇ 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪರಿಚಯಿಸಿದರು. ಈ ಯೋಜನೆಯು ಅನಾರೋಗ್ಯಕರ ಅಡುಗೆ ಇಂಧನವನ್ನು ಬಳಸುತ್ತಿರುವ ಗ್ರಾಮೀಣ ಮಹಿಳೆಯರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಅದಕ್ಕೆ ಪೂರಕವಾಗಿ ಹಳ್ಳಿಗಳಲ್ಲಿನ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಉರುವಲು ಸಂಗ್ರಹಿಸಲು ಮೈಲುಗಟ್ಟಲೆ ನಡೆದುಕೊಂಡು ಹೋಗಬೇಕಾಗಿದೆ. ಮಹಿಳೆಯರ ಆರೋಗ್ಯವನ್ನು ಕಾಪಾಡಲು, ಈ ಯೋಜನೆಯಡಿಯಲ್ಲಿ ಭಾರತ ಸರ್ಕಾರವು ಅವರಿಗೆ ಶುದ್ಧ ಅಡುಗೆ ಇಂಧನವನ್ನು ಒದಗಿಸಲು ಪ್ರಾರಂಭಿಸಿತು.

ಈ ಯೋಜನೆಯನ್ನು ಉತ್ತರ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು ಮತ್ತು ಈಗ ದೇಶಾದ್ಯಂತ ಜಾರಿಗೊಳಿಸಲಾಗಿದೆ. ಗ್ಯಾಸ್ ಸಿಲಿಂಡರ್ ವಿತರಕರಾಗಿ ಅನೇಕ ಜನರು ಸೈನ್ ಅಪ್ ಮಾಡಬಹುದಾದ್ದರಿಂದ ಈ ಯೋಜನೆಯನ್ನು ಪರಿಚಯಿಸುವುದರಿಂದ ಗ್ರಾಮೀಣ ಉದ್ಯೋಗ ದರವನ್ನು ಹೆಚ್ಚು ತರಬಹುದು. ಈ ಯೋಜನೆಯು ಅನಿಲ ಕಂಪನಿಗಳಿಗೆ ಮಾರಾಟವನ್ನು ಹೆಚ್ಚಿಸುತ್ತದೆ ಏಕೆಂದರೆ ಅವುಗಳು ಈಗ ಪೂರೈಸಲು ಭಾರಿ ಬೇಡಿಕೆಯನ್ನು ಹೊಂದಿವೆ. 10 ಆಗಸ್ಟ್ 2021 ರಂದು ಉಜ್ವಲ 2.0 ಅನ್ನು ಜಾರಿಗೆ ತಂದಿತು. ಇದರ ಅಡಿಯಲ್ಲಿ, ವಂಚಿತ ಕುಟುಂಬಗಳಿಗೂ ಗ್ಯಾಸ್ ಸಿಲಿಂಡರ್ ಗಳನ್ನು ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿತ್ತು.

ಕಳೆದ ಕೆಲ ವರ್ಷಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಅಧಿಕವಾಗಿ ಹೆಚ್ಚಳವಾಗಿದೆ. ಇದು ಬಡವರಿಗೆ ಹೆಚ್ಚು ಹೊರೆಯನ್ನು ತಂದೊಡ್ಡಿತು. ಉಜ್ವಲ ಯೋಜನೆಯಡಿಯಲ್ಲಿ 9 ಕೋಟಿಗೂ ಅಧಿಕ ಜನರು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಹಣಕಾಸು ಸಚಿವಾಲಯ ಬಡತನ ರೇಖೆಗೂ ಕೆಳಗಿರುವವರಿಗೆ ಎಲ್‌ ಪಿಜಿ ಗ್ಯಾಸ್‌ ಸಂಪರ್ಕ ಒದಗಿಸಲು ಮುಂದಾಗಿದೆ. ಇದಕ್ಕಾಗಿ ಅಂತಹವರಿಗೆ 1,600 ರೂಪಾಯಿ ಆರ್ಥಿಕ ನೆರವನ್ನು ಕೂಡ ನೀಡಲಾಗುತ್ತದೆ. ಇನ್ನು ಉಚಿತ ರೀಫಿಲ್ ಮತ್ತು ಸ್ಟೌ ನೀಡುವ ಅವಕಾಶವೂ ಈ ಯೋಜನೆ ಅಡಿ ಇದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಎಲ್‌ ಪಿಜಿ ಗ್ಯಾಸ್‌ ಬೆಲೆಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

Related News

spot_img

Revenue Alerts

spot_img

News

spot_img