26.6 C
Bengaluru
Friday, November 22, 2024

ರಾಜ್ಯ ಸರ್ಕಾರದಿಂದ ಕೇಂದ್ರ ಹಣಕಾಸು ಸಚಿವೆಗೆ ಬೇಡಿಕೆಗಳ ಪಟ್ಟಿ ಸಲ್ಲಿಕೆ,ಫೆಬ್ರವರಿ 1ಕ್ಕೆಕೇಂದ್ರ ಬಜೆಟ್ ಮಂಡನೆ –

ಬೆಂಗಳೂರು ಜ31;ಜನಸಾಮಾನ್ಯರು ಸೇರಿದಂತೆ ದೇಶದ ಪ್ರತಿಯೊಬ್ಬ ಗಣ್ಯರು ಈ ಬಜೆಟ್‌ನತ್ತ (Budget) ಚಿತ್ತ ನೆಟ್ಟಿದ್ದಾರೆ.ಫೆಬ್ರವರಿ 1 ರಂದು ಲೋಕಸಭೆಯಲ್ಲಿ  ಕೇಂದ್ರ ಬಜೆಟ್ 2023-24 ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ,ಹದಗೆಡುತ್ತಿರುವ ಉದ್ಯೋಗ (Job) ಕ್ಷೇತ್ರದಿಂದ ಕಂಗೆಟ್ಟಿರುವ ಮಧ್ಯಮ ವರ್ಗ ಹಾಗೂ ಹೆಚ್ಚುತ್ತಿರುವ ಜೀವನ ಮಟ್ಟ ಈ ಬಾರಿಯ ಬಜೆಟ್‌ನ ಮೇಲೆ ಕೊಂಚ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ಕ್ಕೆ ಸಂಸತ್​ನಲ್ಲಿ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಇತ್ತ ಕರ್ನಾಟಕದ ಜನರೂ ಕೇಂದ್ರದ ಬಜೆಟ್ ಮೇಲೆ ಹೆಚ್ಚು ನಿರೀಕ್ಷೆ ಇದೆ. ಅದರಲ್ಲೂ ರಾಜ್ಯ ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಇದೆ. ಬೊಮ್ಮಾಯಿ‌ ಸರ್ಕಾರವು ಕೇಂದ್ರ ಬಜೆಟ್​ನಿಂದ ಕರ್ನಾಟಕಕ್ಕೆ ಹೆಚ್ಚಿನ ಕೊಡುಗೆ ನೀಡುವ ವಿಶ್ವಾಸದಲ್ಲಿದೆ.

2024 ರ ಸಾರ್ವತ್ರಿಕ ಚುನಾವಣೆಯ ಮುನ್ನ ಮಂಡನೆಯಾಗುತ್ತಿರುವ ಪೂರ್ಣ ವರ್ಷದ ಕೊನೆಯ ಬಜೆಟ್ ಕೂಡ ಹೌದು ಹಾಗಾಗಿ ಮಹತ್ವಾಕಾಂಕ್ಷೆ ಹೆಚ್ಚಿದೆ.ಬಜೆಟ್ 2023: ಎಫ್‌ಎಂ ನಿರ್ಮಲಾ ಸೀತಾರಾಮನ್ ಅವರಿಂದ ನಿರೀಕ್ಷಿಸಲಾದ ಪ್ರಮುಖ ಘೋಷಣೆಗಳು ಇಲ್ಲಿದೆ

ಕೇಂದ್ರ ಬಜೆಟ್ 2023: ಆದಾಯ ತೆರಿಗೆ ಮೂಲ ವಿನಾಯಿತಿ ಮಿತಿಯಲ್ಲಿ ಹೆಚ್ಚಳ

ಸಾಮಾನ್ಯ ಜನರ ವೇತನ ಉಳಿತಾಯದ ದೃಷ್ಟಿಯಿಂದ ಮೂಲ ವಿನಾಯಿತಿ ಮಿತಿಯನ್ನು ಪ್ರಸ್ತುತ ರೂ 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕೆಂದು ತಜ್ಞರು ಬಯಸುತ್ತಾರೆ.ಬಳಕೆಯನ್ನು ಹೆಚ್ಚಿಸಲು ಹಲವಾರು ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ, ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ವರ್ಷ ವಯಸ್ಸಿನವರು) ಕನಿಷ್ಠ ತೆರಿಗೆ ವಿನಾಯಿತಿ ಮಿತಿಯನ್ನು ಪ್ರಸ್ತುತ ರೂ 3 ಲಕ್ಷದಿಂದ ರೂ 7.5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ತಜ್ಞರು ಹೇಳುತ್ತಾರೆ.ಜೀವನಾವಶ್ಯಕ ವಸ್ತುಗಳ ಬೆಲೆಗಳ ಏರಿಕೆ, ಹಣದುಬ್ಬರ, ತೆರಿಗೆ ರಿಟರ್ನ್ಸ್ ಸಲ್ಲಿಸುವ ತೆರಿಗೆದಾರರ ಸಂಖ್ಯೆ, ಸರ್ಕಾರವು ಬಿಟ್ಟುಕೊಟ್ಟಿರುವ ತೆರಿಗೆ ಆದಾಯ ಇತ್ಯಾದಿಗಳಂತಹ ಹಲವಾರು ಅಂಶಗಳನ್ನು ಪರಿಗಣಿಸಿ ಮೋದಿ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಮರುಪರಿಶೀಲಿಸಬಹುದು.

ಬಜೆಟ್ ನಿರೀಕ್ಷೆಗಳು: ಕಡಿಮೆ ಆದಾಯ ತೆರಿಗೆ ದರಗಳು

ನಿರ್ಮಲಾ ಸೀತಾರಾಮನ್ ತಮ್ಮ ಮುಂಬರುವ ಬಜೆಟ್‌ನಲ್ಲಿ ತೆರಿಗೆ ದರಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ನಂಬಲಾಗಿದೆ ಹಾಗೂ ಸಂಬಳ ಪಡೆಯುವವರಿಗೆ ಪರಿಷ್ಕೃತ ಮಾದರಿಗಳನ್ನು ಪರಿಚಯಸಲಿದ್ದಾರೆ ಎಂದು ಊಹಿಸಲಾಗಿದೆ.ಮುಂಬರುವ ಬಜೆಟ್‌ನಲ್ಲಿ ಸರ್ಕಾರವು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಆದಾಯ ತೆರಿಗೆಯ ವಾರ್ಷಿಕ ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂಬುದು ಉದ್ಯೋಗಿಗಳು ಸೇರಿದಂತೆ ಸಾಮಾನ್ಯ ಜನರ ಪ್ರಮುಖ ಆಶಯವಾಗಿದೆ.ಕೆಲವು ವರ್ಷಗಳ ಹಿಂದೆ ರಿಯಾಯಿತಿ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸುವುದನ್ನು ಹೊರತುಪಡಿಸಿ 2016-17ರ ಬಜೆಟ್‌ನಿಂದ ತೆರಿಗೆ ಸ್ತರಗಳಲ್ಲಿ ಯಾವುದೇ ಮಾರ್ಪಾಡುಗಳಾಗಿಲ್ಲ. ಹೊಸ ನೀತಿಯಡಿಯಲ್ಲಿ ಸರ್ಕಾರವು 30 ಪ್ರತಿಶತ ಮತ್ತು 25 ಪ್ರತಿಶತ ತೆರಿಗೆ ದರಗಳನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

ಬಜೆಟ್ ನಿರೀಕ್ಷೆಗಳು: ಈಕ್ವಿಟಿ LTCG ಮೇಲೆ ತೆರಿಗೆ ರಹಿತ ಮಿತಿ

ಈಕ್ವಿಟಿ ಷೇರುಗಳ ಮಾರಾಟದಿಂದ ದೀರ್ಘಾವಧಿಯ ಬಂಡವಾಳ ಲಾಭಗಳು (LTCG) ವಾರ್ಷಿಕವಾಗಿ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಲಾಭವು ತೆರಿಗೆಗೆ ಒಳಪಡುತ್ತಿವೆ. ದೀರ್ಘಾವಧಿಯ ಸ್ವತ್ತುಗಳ ಈ ವರ್ಗವು 2004 ರಿಂದ ಒಟ್ಟು ತೆರಿಗೆ ವಿನಾಯಿತಿಗೆ ಕಾರಣವಾಗಿವೆ.ವರ್ಷಕ್ಕೆ 1 ಲಕ್ಷ ರೂಪಾಯಿಗಳ ತೆರಿಗೆ ರಹಿತ ಮಿತಿಯನ್ನು ಕನಿಷ್ಠ 2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬಹುದು ಎಂಬುದು ರಿಟೇಲ್ ಹೂಡಿಕೆದಾರರ ನಿರೀಕ್ಷೆಯಾಗಿದೆ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಸರಸ್ವತಿ ಕಸ್ತೂರಿರಂಗನ್ ತಿಳಿಸಿದ್ದಾರೆ.

ಬಜೆಟ್: ಪಾನ್​ ಕಾರ್ಡ್ ಕಾನೂನುಬದ್ಧಗೊಳಿಸುವಿಕೆ

ಯೂನಿಯನ್ ಬಜೆಟ್ 2023-24 ಶಾಶ್ವತ ಖಾತೆ ಸಂಖ್ಯೆಯನ್ನು (PAN) ಏಕ ವ್ಯಾಪಾರ ಗುರುತಿಸುವಿಕೆಯಾಗಿ ಕಾನೂನುಬದ್ಧಗೊಳಿಸುವುದಕ್ಕೆ ಅವಕಾಶ ನೀಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪಾನ್​​ ಸಂಖ್ಯೆಯನ್ನು ಅಳವಡಿಸಿಕೊಳ್ಳಲು ಕಾನೂನು ಮತ್ತು ಕಾರ್ಯಾಚರಣೆಯ ಚೌಕಟ್ಟನ್ನು ಹೊರತರಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅನುಮೋದನೆಗಳನ್ನು ಪಡೆಯುವ ಎಲ್ಲಾ ವ್ಯವಹಾರಗಳಿಗೆ ಇದು ಅನ್ವಯಿಸುತ್ತದೆ ಎಂದು ಹೇಳಲಾಗಿದೆ.

ರೈಲ್ವೆ ಬಜೆಟ್: 400 ಹೆಚ್ಚುವರಿ ವಂದೇ ಭಾರತ್ ರೈಲು

ಕಳೆದ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಮೂರು ವರ್ಷಗಳಲ್ಲಿ 400 ಸೆಮಿ-ಹೈ-ಸ್ಪೀಡ್, ಮುಂದಿನ ಜನರೇಶನ್‌ನ ವಂದೇ ಭಾರತ್ ರೈಲುಗಳನ್ನು ಪರಿಚಯಿಸುವ ಬೃಹತ್ ಯೋಜನೆಯನ್ನು ಪ್ರಸ್ತಾಪಿಸಿದ್ದರು.ರೈಲ್ವೇ ವಲಯದ ಪ್ರಮುಖ ಘೋಷಣೆಯಾಗಿ ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 400 ವಂದೇ ಭಾರತ್ ರೈಲುಗಳು ಇರುತ್ತವೆ ಎಂದು ಸೀತಾರಾಮನ್ ಹೇಳಿದ್ದಾರೆ. ರೈಲ್ವೆ ವಲಯವು 100 ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಸಹ ಹೊಂದಲಿದೆ ಎಂದು ಅವರು ಹೇಳಿದ್ದು,2030ರ ವೇಳೆಗೆ ರೈಲ್ವೇ ಜಾಲ ಗ್ರೀನ್‌ ರೈಲ್ವೆ ಆಗಿ ಪರಿವರ್ತನೆಯಾಗಲಿದೆ.

Related News

spot_img

Revenue Alerts

spot_img

News

spot_img