ಬೆಂಗಳೂರು, ಜ. 24 : ಮನೆ ಕಟ್ಟುವ ಅಥವಾ ಜಾಗವನ್ನು ಖರೀದಿಸುವ ಮುನ್ನ ಸುತ್ತಮುತ್ತಲಿನ ವಾತಾವರಣದ ಬಗ್ಗೆ ಗಮನಿಸಬೇಕಾಗುತ್ತದೆ. ವಾತಾವರಣದಲ್ಲಿ ಏನಾದರೂ ಹೆಚ್ಚು ಕಡಿಮೆ ಇದ್ದರೆ, ಅದರಿಂದ ನಮ್ಮ ಏಳಿಗೆಗೂ ಸಮಸ್ಯೆ ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ, ವಾಸವಿರಲು ಬಯಸುವ ಸುತ್ತ-ಮುತ್ತಲ ವಾತಾವರಣ ಹೇಗಿದ್ದರೆ ಚೆಂದ? ಪರಿಸರಹೇಗಿರಬೇಕು? ಮನೆಯ ಸದಸ್ಯರಿಗೆ ಕೆಡುಕಾಗದಂತಿರಲು ಏನು ಮಾಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಏನು ಹೇಳಲಾಗಿದೆ ಎಂದು ತಿಳಿಯೋಣ ಬನ್ನಿ..
ಮನೆಯನ್ನು ಎಲ್ಲೆಂದರಲ್ಲಿ ಹೋಗಿ ಕಟ್ಟಲು ಸಾಧ್ಯವಿಲ್ಲ. ಈಗಾಗಲೇ ಜನರು ಇರುವ ಕಡೆಯಲ್ಲಿ ಹೋಗಿ ಮನೆ ನಿರ್ಮಾಣ ಮಾಡುವುದು ಒಳ್ಳೆಯದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ಜನರ ನಡುವಿನ ಸಂಪರ್ಕ ಇರಲು ಉತ್ತಮವಾಗಿರುತ್ತದೆ. ಹಾಗಾಗಿ ವಾಸಕ್ಕೆ ಮನೆಯನ್ನ ಕಟ್ಟುವುದಾದರೆ ಇತರೆ ಮನೆಗಳಿರುವ ಕಡೆಗೆ ಕಟ್ಟುವುದು ಒಳ್ಳೆಯದು. ಇನ್ನು ವಾಸ್ತುವಿನಲ್ಲಿ ಮನೆಯನ್ನು ಯಾವವ್ಯಕ್ತಿ ಎಲ್ಲಿ ಕಟ್ಟಬೇಕು ಎಂಬುದನ್ನು ಕೂಡ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಉದಾಹರಣೆಗೆ ಮನೆಯ ಸುತ್ತ ನೀರು ಹರಿಯುವಂತಿದ್ದರೆ. ಅಂದರೆ, ಈಗ ನಾಲೆಗಳು, ನಗರಗಳಲ್ಲಿ ರಾಜ ಕಾಲುವೆಗಳಲ್ಲಿ ನೀರು ಹರಿಯುವ ಮೋರಿಗಳು ಇರುತ್ತವೆ. ಇದು ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಹರಿಯಬೇಕು ಎಂಬುದನ್ನು ಮೊದಲು ತಿಳಿಯಬೇಕು. ನೀರು ಯಾವ ದಿಕ್ಕಿಗೆ ನೀರು ಹರಿಯಬೇಕು ಎಂಬುದನ್ನು ವಾಸ್ತುವಿನಲ್ಲಿ ಹೇಳಲಾಗಿದೆ. ಪಶ್ಚಿಮದಿಂದ ಪೂರ್ವಕ್ಕೆ, ದಕ್ಷಿಣದಿಂದ ಉತ್ತರ ದಿಕ್ಕಿಗೆ ನೀರು ಹರಿಯಬೇಕು. ಆದರೆ, ನೀರು ಹರಿಯುವ ದಿಕ್ಕು ಬದಲಾದರೆ, ಅದು ಆ ಮನೆಗೆ ಶ್ರೇಷ್ಠವಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಇನ್ನು ರುದ್ರಭೂಮಿಯ ಬಳಿ ಮನೆ ಇದ್ದರೂ ಕೂಡ ಒಳ್ಳೆಯದಲ್ಲ. ರುದ್ರಭೂಮಿಯಿಂದ ನೆಗೆಟಿವ್ ಎನರ್ಜಿ ಬರುತ್ತದೆ ಎಂದು ಹೇಳಬಹುದು. ಇನ್ನು ಸದಾ ಸೌಂಡ್ ಮಾಡುವಂತಹ ಫ್ಯಾಕ್ಟರಿ, ಸ್ಕೂಲ್, ಕಾಲೇಜ್ ಅಥವಾ ಆಸ್ಪತ್ರೆಗಳಿರುವಂತಹ ಅಕ್ಕ-ಪಕ್ಕದಲ್ಲಿ ಮನೆ ಇರುವುದು ಅಲ್ಲ. ಯಾಕೆಂದರೆ, ಸದಾ ಜನಜಂಗುಳಿಗಳಿಂದ ಈ ಪ್ರದೇಶಗಳು ತುಂಬಿರುತ್ತವೆ. ಹಾಗಾಗಿ ಇಂತಹ ಜಾಗಗಳಲ್ಲಿ ಮನೆಗಳು ಇರುವುದು ಸೂಕ್ತವಲ್ಲ. ಇದರಿಂದ ಮನೆಗೆ ನಕರಾತ್ಮಕತೆ ಹೆಚ್ಚಾಗುತ್ತದೆ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ.
ಅಕ್ಕ-ಪಕ್ಕದ ಮನೆಗಳು ಎತ್ತರವಾಗಿದ್ದು, ನಿಮ್ಮ ಮನೆ ಮಧ್ಯದಲ್ಲಿ ಚಿಕ್ಕದಾಗಿದ್ದರೂ ಅದು ಮನೆಯ ಏಳಿಗೆಗೆ ಒಳ್ಳೆಯದಲ್ಲ. ಅಕ್ಕ-ಪಕ್ಕದ ಮನೆಗಿಂತ ಚಿಕ್ಕ ಮನೆಯಾದರೆ, ಯಾವುದೇ ರೀತಿಯ ಬೆಳವಣಿಗೆಯನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಅದರಲ್ಲು ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿದ್ದರೆ ಇನ್ನೂ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳುತ್ತಾರೆ. ಇಂತಹ ಕಡೆ ಮನೆಗಳನ್ನು ತೆಗೆದುಕೊಳ್ಳುವುದು ಕೂಡ ಒಳ್ಳೆಯದಲ್ಲ. ಇನ್ನು ಮನೆ ಹಳ್ಳದಲ್ಲಿದ್ದರೂ ಸಮಸ್ಯೆಯಾಗುತ್ತದೆ. ಇನ್ನು ನಮ್ಮ ಮನೆಗೆ ನೇರವಾಗಿ ಯಾವುದೇ ರಸ್ತೆಗಳಿದ್ದರೂತೊಂದರೆಯಾಗುತ್ತದೆ. ಇದರಿಂದ ನೆಗೆಟಿವ್ ಎನರ್ಜಿ ಬರುವ ಸಾಧ್ಯತೆ ಇರುತ್ತದೆ. ಅದರಲ್ಲು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿದ್ದರೆ ಸಮಸ್ಯೆ ಎದುರಾಗುತ್ತದೆ.