Method of land plowing : ಮುಖ್ಯವಾಗಿ ಎಲ್ಲ ಜನರು ತಮ್ಮ ತಮ್ಮ ಜಮೀನನ್ನು ಹೊಂದಿರುತ್ತಾರೆ,ಅದೇ ರೀತಿ ಜಮೀನು ನಮ್ಮದಾಗಬೇಕಾದರೆ ಅದರ ಬಗ್ಗೆ ಏನೆಲ್ಲಾ ಮಾಹಿತಿ ತಿಳಿಯಬೇಕು ಎಂದು ಮುಖ್ಯ ಪಾತ್ರ ವಹಿಸುತ್ತದೆ. ಅದೇ ರೀತಿ ಈಗ ಒಂದು ಸರ್ವೇ ನಂಬರ್ ಎರಡಕ್ಕಿಂತ ಹೆಚ್ಚು ಜನರ ಹೆಸರು ಇದ್ದರೆ ಅದಕ್ಕೆ ಬಹು ಮಾಲೀಕತ್ವದ ಉತಾರೆಂದು ಕರೆಯುತ್ತಾರೆ. ಬಹು ಮಾಲೀಕತ್ವದ ಪಹಣಿಯಿಂದಾಗಿ ಅಂದರೆ ಒಂದೇ ಪಹಣಿಯಲ್ಲಿ ಎಲ್ಲ ಮಾಲೀಕರ ಹೆಸರು ಇದ್ದರೂ ಎಲ್ಲ ಮಾಲೀಕರಿಗೂ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಹಾಗೂ ಅದರಂತೆ ಮುಖ್ಯವಾಗಿ ಎಲ್ಲರ ಹೆಸರಿದ್ದರೂ ಸಹ ಎಲ್ಲ ಯೋಜನೆಗಳ ಸಹಾಯಧನ ಸಿಗಲು ಕಷ್ಟದ ಕೆಲಸ. ಇದರಿಂದಾಗಿ ರೈತರಿಗೆ ತುಂಬಾನೇ ಸಮಸ್ಯೆ ಆಗುತ್ತದೆ ಸರಕಾರದ ಸೌಲಭ್ಯಗಳು ಕೂಡ ಸಿಗುವುದಿಲ್ಲ .
ಪೋಡಿ ಅಂದ್ರೇನು ;
ಪೋಡಿ ಎಂದರೆ ಜಮೀನಿನ ಭಾಗ ಮಾಡುವುದು ಎಂದರ್ಥ. ಒಬ್ಬರಿಗಿಂತ ಹೆಚ್ಚು ಆರ್.ಟಿ.ಸಿ ದಾರರ ಹೆಸರು ಒಂದೇ ಸರ್ವೇ ನಂಬರ್ ನಲ್ಲಿ ಇದ್ದರೆ ಅದನ್ನು ಬಹುಮಾಲಿಕತ್ವದ ಆರ್.ಟಿಸಿ ಎನ್ನಲಾಗುತ್ತದೆ. ಒಂದು ಸರ್ವೆನಂಬರ್ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರು ಮಾಡುವುದಕ್ಕೆ ಪೋಡಿ ಎನ್ನುವರು.
ಪೋಡಿಯಲ್ಲಿ ನಾಲ್ಕು ವಿಧಗಳಿವೆ.
1. ತತ್ಕಾಲ್ ಪೋಡಿ 2.ದರ್ಖಾಸ್ ಪೋಡಿ 3. ಅಲಿನೇಷನ್ ಪೋಡಿ ಮತ್ತು ಮುಟೇಷನ್ ಪೋಡಿ
ಪೋಡಿ ಏಕೆ ಮಾಡಿಸಬೇಕು?
ಒಂದು ಸರ್ವೆನಂಬರ್ ನಲ್ಲಿ ಸುಮಾರು ಹಿಸ್ಸಾ ಸರ್ವೆ ನಂಬರ್ ಇರುತ್ತದೆ. ಆದರೆ ಭೂ ಮಾಲಿಕತ್ವದ ಹೆಸರು ಒಂದೇ ಪೋಡಿಯಲ್ಲಿ ಬಂದಿರುತ್ತದೆ. ಇದರಿಂದಾಗಿ ರೈತರಿಗೆ ಸಮಸ್ಯೆಯಾಗುತ್ತದೆ. ಮುಂದೆ ಸರ್ಕಾರದಿಂದ ಸೌಲಭ್ಯವೂ ಸಿಗುವುದಿಲ್ಲ. ಜಮೀನನ್ನು ಕಾಯ್ದೆ ಪ್ರಕಾರ ವಿಭಜನೆ ಮಾಡಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಹಾಗೂ ತಾತ್ಕಾಲಿಕ ಪೋಡಿ ನಂಬರ್ ನೀಡಲಾಗುವುದು. ಇದರೊಂದಿಗೆ ಪೋಡಿ ಮಾಡಲಾಗಿರುವ ಭೂಮಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಏಕ ಮಾಲಿಕತ್ವದ ಪಹಣಿ ಮಾಡಲಾಗವುದು.
ಪೋಡಿ ಮಾಡಿಸುವುದಕ್ಕಾಗಿ ಬೇಕಾಗುವ ದಾಖಲೆಗಳು
ಪೋಡಿ ಮಾಡಿಸುವ ಜಮೀನಿನ ಆಧಾರ್ ಕಾರ್ಡ್ ಹಾಗೂ ಪಹಣಿ ಬೇಕು. ಇನ್ನೂ ದಾಖಲೆಗಳು ಬೇಕಾಗಬಹುದು. ನಾಡಕಚೇರಿ ಅಥವಾ ತಹಸೀಲ ಕಚೇರಿಗೆ ಸಂಪರ್ಕಿಸಬಹುದು. ಪಹಣಿ ಪ್ರತ್ಯೇಕ ಮಾಡಲು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಪೋಡಿ ಮಾಡಿಸಲು 1200 ರಿಂದ 1500 ರೂಪಾಯಿಯೊಳಗೆ ಖರ್ಚು ಬರಬಹುದು. ತತ್ಕಾಲ್ ಪೋಡಿಯಲ್ಲಿ ನಿಮ್ಮ ಹೆಸರು ಬದಲಾವಣೆಯಾಗುವುದಿಲ್ಲ. ಬೋಂಡ್ರಿ ಫಿಕ್ಸ್ ಮಾಡಿ ಪಹಣಿ ಪ್ರತ್ಯೇಕವಾಗಿ ಮಾಡಲಾಗುವುದು.
ಪೋಡಿ ಮಾಡಿದಾಗ ಅದರಿಂದ ಆಗುವ ಪ್ರಯೋಜನಗಳು ಏನು ಎಂಬುದನ್ನು ತಿಳಿಯಬೇಕು.
1.ಏಕಮಾಲಿಕತ್ವದ ಪಹಣಿ ಇದ್ದರೆ ಮಾತ್ರ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
2.ಏಕಮಾಲಿಕತ್ವ ಇದ್ದರೆ ಪಹಣಿಯಲ್ಲಿ ಯಾವುದೇ ಗೊಂದಲವೂ ಇರುವುದಿಲ್ಲ.
3 ಏಕಮಾಲಿಕತ್ವ ಇದ್ದರೆ ಯಾವುದೇ ತಕಾರಾರು ಬರುವುದಿಲ್ಲ.
4.ಭೂಮಿ ಮಾಲಿಕತ್ವ ಖಾತ್ರಿ ಪಡೆದುಕೊಳ್ಳಬಹುದು. ಅಕ್ರಮಣ ಆಗುವುದಿಲ್ಲ.
5.ಬೆಳೆ ವಿಮೆ ಮಾಡಿಸಲು ಸುಲಭವಾಗುತ್ತದೆ. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ.
6.ಬಹುಮಾಲಿಕತ್ವದ ಪಹಣಿ ಪತ್ರಗಳನ್ನು ಹೊಂದಿರುವ ರೈತರಿಗೆ ಪ್ರತ್ಯೇಕ ಪಹಣಿ ನಕಾಶೆ ಒದಗಿಸುವ ಕೆಲಸವನ್ನು ಮಾಡಲಾಗುವುದು.
7.ಕರ್ನಾಟಕದಲ್ಲಿ ಕೃಷಿ ಭೂಮಿ ಖರೀದಿ ಹಾಗೂ ಮಾರಾಟ.
ಅವಿಭಕ್ತ ಕುಟುಂಬಗಳು ಬೇರೆ ಬೇರೆಯಾದ ನಂತರ ಜಮೀನು ಖಾತಾಗಳು ಇನ್ನೂ ಜಂಟಿಯಾಗಿರುತ್ತವೆ. ಸಹೋದರರ ನಡುವೆ ವ್ಯಾಜ್ಯ, ಸೂಕ್ತ ದಾಖಲೆಗಳ ಕೊರತೆ ಮೊದಲ ಕಾರಣಗಳಿಂದ ಪ್ರತ್ಯೇಕ ಆರ್.ಟಿ.ಸಿ ಪಡೆದುಕೊಳ್ಳುವುದ0ಕ್ಕೆ ಸಾಧ್ಯವಾಗಿರುವುದಿಲ್ಲ. ಬಹುತೇಕ ಮಂದಿ ಪ್ರತ್ಯೇಕ ಆರ್.ಟಿ.ಸಿ ಪಡೆಯುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನ ಸರ್ವೆ ನಂಬರ್ ಗಳಲ್ಲಿ ಬಹುಮಾಲಿಕತ್ವವೇ ಉಳಿದುಕೊಂಡಿರುತ್ತದೆ. ಬೇರೆಯವರಿಗೆ ನೀಡುವುದಕ್ಕಾಗಲಿ, ಮಾರಾಟ ಮಾಡುವುದಕ್ಕಾಗಲಿ, ವ್ಯಾಜ್ಯಮುಕ್ತ ಪಹಣ ಹೊಂದುವುದಕ್ಕಾಗಲಿ ಅವಕಾಶವಿರುವುದಿಲ್ಲ. ಈ ಉದ್ಯೇಶದಿಂದ ಪ್ರತ್ಯೇಕ ಆರ್.ಟಿ.ಸಿ ಮಾಡಿಕೊಳ್ಳುವುದು ಅಗತ್ಯವಾಗಿದೆ.