21.1 C
Bengaluru
Monday, July 8, 2024

ರೆವಿನ್ಯೂ ಸೈಟ್ ರಿಜಿಸ್ಟ್ರೇಷನ್ vs RTI ಬ್ರಹ್ಮಾಸ್ತ್ರ ನಡುವಿನ ಸತ್ಯದ ಅನಾವರಣ!

ಬೆಂಗಳೂರು, ಜ. 02: ನಿಯಮ ಬಾಹಿರವಾಗಿ ರೆವಿನ್ಯೂ ನಿವೇಶನಗಳನ್ನು ನೋಂದಣಿ ಮಾಡುವ ಮೂಲಕ ಆದಾಯದ ಮಾರ್ಗ ಕಂಡುಕೊಂಡಿದ್ದ ಕೆಲವು ಉಪ ನೋಂದಣಾಧಿಕಾರಿಗಳು ಆರ್‌ಟಿಐ ಬ್ರಹ್ಮಾಸ್ತ್ರಕ್ಕೆ ಸಿಲುಕಿ ವಿಲ ವಿಲ ಒದ್ದಾಡುತ್ತಿದ್ದಾರೆ. ಕೆಲವರು ಇಲಾಖಾ ವಿಚಾರಣೆ ಎದುರಿಸುವಂತಾಗಿದ್ದರೆ, ಇನ್ನೂ ಹಲವು ಪ್ರಕರಣಗಳಲ್ಲಿ ಆರ್‌ಟಿಐ ಅಸ್ತ್ರ ಬಿಸಿದ ‘ಕಾರ್ಯಕರ್ತ’ ನಿಗೆ ಶಾಂತಿ ಮಾಡಿಸಿ ಸಮಧಾನ ಪಡಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಮೂರು ವರ್ಷದ ಹಿಂದೆ ಇದೇ ರೆವಿನ್ಯೂ ನಿವೇಶನಗಳನ್ನು ನೋಂದಣಿ ಮಾಡಿ ಹಲವು ಉಪ ನೋಂದಣಾಧಿಕಾರಿಗಳು ಅಮಾನತು ಶಿಕ್ಷೆಗೆ ಒಳಗಾಗಿದ್ದರು.

ಅಂದಹಾಗೆ ರೆವಿನ್ಯೂ ನಿವೇಶನ ಎಂದರೇನು ? ಇದರ ನೋಂದಣಿ ನಿಯಮ ಬಾಹಿರ ಅನ್ನೋದು ಯಾಕೆ ? ಈ ಕುರಿತು ಹೈಕೋರ್ಟ್ ನಲ್ಲಿ ನಡೆಸಿದ ಕಾನೂನು ಹೋರಾಟ ಏನಾಯಿತು ? ಸುಪ್ರೀಂ ಅಂಗಳದಲ್ಲಿರುವ ತಡೆಯಾಜ್ಞೆಯ ವಸ್ತು ಸ್ಥಿತಿ ಏನಾಗಿದೆ ? ರೆವಿನ್ಯೂ ನಿವೇಶನಗಳ ನೋಂದಣಿ ಹಿಂದೆ ಹುಟ್ಟಿಕೊಂಡಿರುವ ದಂಧೆಯ ಸರಣಿ ವರದಿಗಳನ್ನುrevenuefacts.com ಪ್ರಕಟಿಸಲಾಗುತ್ತಿದೆ.

ನಗರ ಹಾಗೂ ಮಹಾನಗರಗಳ ಅನಧಿಕೃತ ಬೆಳವಣಿಗೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಕಂದಾಯ ಇಲಾಖೆ ರೆವಿನ್ಯೂ ನಿವೇಶನ ನೋಂದಣಿ ಮೇಲೆ ವಿದಿಸಿದ್ಧ ನಿರ್ಬಂಧಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವತ್ತುಗಳ ನೋಂದಣಿ, ಪಟ್ಟಣ ಪಂಚಾಯಿತಿ, ನಗರಸಭೆ ಸ್ವತ್ತುಗಳ ನೋಂದಣಿ ಪ್ರಕ್ರಿಯೆ ಸಂಬಂಧ ಸರ್ಕಾರ ಹೊರಡಿಸಿರುವ ಸುತ್ತೋಲೆಗಳು ಏನು ಹೇಳುತ್ತವೆ ? ಈ ನಿಯಮಗಳ ಪಾಲನೆ ಯಾಕೆ ಉಪ ನೋಂದಣಾರಿಗಳು ಉಲ್ಲಂಘನೆ ಮಾಡುತ್ತಿದ್ದಾರೆ ? ರೆವಿನ್ಯೂ ನಿವೇಶನ ನೋಂದಣಿ ಮಾಡುವುದು ಕಾನೂನು ಬಾಹಿರವೇ ? ನೆರೆ ರಾಜ್ಯಗಳಲ್ಲಿ ಸ್ವತ್ತುಗಳ ( ರೆವಿನ್ಯೂ ಸೈಟ್ ಸೇರಿದಂತೆ ) ನೋಂದಣಿಗೆ ಸಂಬಂಧಸಿದಂತೆ ಯಾವ ನಿಯಮಗಳು ಅಸ್ತಿತ್ವದಲ್ಲಿವೆ ಎಂಬುದರ ಸಮಗ್ರ ಚಿತ್ರಣ ಕಟ್ಟಿಕೊಡಲಾಗುವುದು.

Related News

spot_img

Revenue Alerts

spot_img

News

spot_img